This is the title of the web page
This is the title of the web page

Please assign a menu to the primary menu location under menu

Local News

ಆರೋಗ್ಯವೇ ನಿಜವಾದ ಸಂಪತ್ತು: ಡಾ. ಮಾಧವ ಪ್ರಭು


ಬೆಳಗಾವಿ: ಹಣ, ಚಿರಾಸ್ತಿ ಇವುಗಳಿಗಿಂತ ಅತಿ ಮುಖ್ಯವಾದುದು ಆರೋಗ್ಯವಾಗಿದೆ. ಉತ್ತಮ ಆರೋಗ್ಯ ಹೊಂದಿದ್ದರೆ ಮಾನವ ಅತ್ಯಂತ ಸಂತೃಪ್ತ ಜೀವನ ಸಾಗಿಸಬಹುದು. ಆದರೆ ಅನಾರೋಗ್ಯ ವ್ಯಕ್ತಿಯು ಸಂತೃಪ್ತಿ ಜೀವನ ಹೊಂದಲು ಸಾಧ್ಯವಿಲ್ಲ ಎಂದು ಕೋವಿಡ್ ಕೇರ್ ಪರಿಣ ತ ತಜ್ಞ ಮತ್ತು ಕೆಎಲ್‍ಇ ಡಾ.ಪ್ರಭಾಕರ ಕೊರೆ ಆಸ್ಪತ್ರೆಯ ವೈದ್ಯ ಡಾ.ಮಾಧವ ಪ್ರಭು ಹೇಳಿದರು.

ಆರ್‍ಸಿಯು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಮತ್ತು ಕೆಎಲ್‍ಇ ವೇಣುಧ್ವನಿ 90.4 ಎಫ್‍ಎಂ ಸಹಯೋಗದಲ್ಲಿ ಶುಕ್ರವಾರ ಜರುಗಿದ ಆರೋಗ್ಯ ಜಾಗೃತಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್-19 ಮಹಾಮಾರಿ ನಂತರ ಸಹಜವಾಗಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ನಾವು ಕಾಣುತ್ತೇವೆ. ಆದರೆ ಕೆಲವರೂ ಕೋವಿಡ್-19 ಮಹಾಮಾರಿಯ ಪರಿಣಾಮ ಭಯ ಭೀತರಾಗಿ ಅನೇಕ ಸಮಸ್ಯೆ ಎದುರಿಸುತ್ತಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕಾಣುತ್ತಿದ್ದೇವೆ. ಕೋವಿಡ್-19 ಮೊದಲ ಅಲೆಯ ಲಾಕ್‍ಡೌನ್ ಮತ್ತು ನಂತರದ ಅನ್‍ಲಾಕ್ ಪರಿಣಾಮ ಅನೇಕರು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದಲ್ಲಿ ಏರುಪೇರು ಕಂಡಿರುವುದು ವೈದ್ಯಕೀಯ ಜಗತ್ತಿಗೆ ಪ್ರಸಕ್ತ ದಿನಗಳಲ್ಲಿ ತಿಳಿದು ಬರುತ್ತಿದೆ ಎಂದು ಹೇಳಿದರು.

ಕೋವಿಡ್-19 ನಂತರ ಸಾಮಾನ್ಯ ಜನರಲ್ಲಿ ಕೇವಲ ದೈಹಿಕ ಆರೋಗ್ಯ ಮಾತ್ರ ಸಮಸ್ಯೆ ಉಂಟಾಗಿಲ್ಲ. ಈ ಮಹಾಮಾರಿಯ ಪರಿಣಾಮ ಕೆಲವರು ದುಡಿಮೆ ಮತ್ತು ನೌಕರಿ ಕಳೆದುಕೊಂಡು ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾರೆ.

ಲಾಕಡೌನ ಸಂದರ್ಭದಲ್ಲಿ ಅನೇಕ ಪರಿವಾರದಲ್ಲಿ ಕೌಟುಂಬಿಕ ಹಿಂಸೆ ವೃದ್ಧಿಸಿದೆ ಎಂದು ಕಂಡು ಬಂದಿದೆ. ಕೋವಿಡ್-19ಗೆ ಸೂಕ್ತ ಔಷೋಧಪಚಾರ ಯಾವುದು ಎಂಬುದು ತಿಳಿಯದ ಕಾರಣ ಅನೇಕ ಅಮೆರಿಕಾ ಮತ್ತು ಯರೋಪ ದೇಶಗಳ ಪದ್ಧತಿಯನ್ನು ಅನುಸರಿಸಿ, ಚಿಕಿತ್ಸೆ ನೀಡಲಾಗಿದೆ. ಬಹು ದಿನಗಳ ನಂತರ ಆ ಚಿಕಿತ್ಸೆಯ ಅನೇಕ ಅಡ್ಡ ಪರಿಣಾಮ ಗೋಚರಿಸುತ್ತಿವೆ ಎಂದು ತಿಳಿಸಿದರು.

ಇನ್ನು ಜಗತ್ತು ಕೋವಿಡ್-19 ಮುಕ್ತವಾಗಿಲ್ಲ. ಎರಡು ಹಂತದಲ್ಲಿ ಲಸಿಕೆ ಪಡೆದರೂ ಕೂಡಾ ಜನರು ಕೋವಿಡ್ -19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಮಾತ್ರ ಸಮಸ್ತ ಸಮಾಜ ಸುಖಿಯಾಗುವುದು ಎಂದು ಕಿವಿಮಾತು ಹೇಳಿದರು.

ವಿಭಾಗದ ಅಧ್ಯಕ್ಷೆ ಪ್ರೊ.ಕಮಲಾಕ್ಷಿ ತಡಸದ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‍ಇ ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನೀಷಾ.ಪಿ.ಎಸ್. ಪ್ರೊ.ವೈ.ಎಸ್. ಬಲವಂತಗೋಳ, ಡಾ,ರಮೇಶ,ಎಂ.ಎನ್, ಡಾ.ಹನುಮಂತಪ್ಪ.ಡಿ.ಜಿ, ಡಾ.ಪ್ರಕಾಶ ಕಟ್ಟಿಮನಿ, ಅರುಣ ಹೊಸಮಠ, ವಿದ್ಯಾಶ್ರೀ ಹಾಲಕೇರಿಮಠ, ಪೂಜಾ ಹೆಗಡೆ ಹಾಜರಿದ್ದರು.

ಶ್ರೀದೇವಿ ಪ್ರಾರ್ಥಿಸಿದರು. ವಿಶಾಲ ರಾಥೋಡ ನಿರೂಪಿಸಿದರು. ಪ್ರತಿಮಾ ಹುಬ್ಬಳ್ಳಿಕರ್ ವಂದಿಸಿದರು.


Gadi Kannadiga

Leave a Reply