This is the title of the web page
This is the title of the web page

Please assign a menu to the primary menu location under menu

Local News

ಕ.ಸಾ.ಪ.ಬೆಳಗಾವಿ ಜಿಲ್ಲಾ ವತಿಯಿಂದ ದಿ.ಡಾ..ಶಿ.ಬಾ.ಪಾಟೀಲ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ


ಬೆಳಗಾವಿ:೨೫ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿರಿಯ ಸಾಹಿತಿಗಳಾದ ಡಾ.ಶಿ.ಬಾ.ಪಾಟೀಲ ಅವರು ಸಾಹಿತ್ಯ ಲೋಕ ಶ್ರೀಮಂತಗೊಳಿಸುವಲ್ಲಿ ಬಹುವಾಗಿ ಶ್ರಮಿಸಿದವರು. ನಮ್ಮ ಜಿಲ್ಲೆಯ ಹೆಮ್ಮೆಯ ಸಾಹಿತಿಗಳಾದ ಪಾಟೀಲರವರು ೩೧/೧೨/೨೦೧೬ ರಲ್ಲಿ ನಡೆದ ಹುಕ್ಕೇರಿ ೭ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಕೂಡ ಆಗಿ ಸಮ್ಮೇಳನದ ಘನತೆಯನ್ನು ಹೆಚ್ಚಿಸಿದ್ದರು. ಅಂಥಹ ಹಿರಿಯರನ್ನು ಕಳೆದುಕೊಂಡು ಸಾಹಿತ್ಯ ಕ್ಷೇತ್ರ ಬಡವಾಗಿದೆ. ದೇವರು ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಅವರ ಕುಟುಂಬದ ದುಃಖದಲ್ಲಿ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಭಾಗಿಯಾಗಿರುತ್ತದೆ. ಎಂದು ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಸಂತಾಪ ಸೂಚನೆಯಲ್ಲಿ ಹೇಳಿದರು. ಹಾಗೂ ಸಮಸ್ತ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಸಮಸ್ತ ಕನ್ನಡ ಮನಸ್ಸುಗಳು ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದರು.


Gadi Kannadiga

Leave a Reply