This is the title of the web page
This is the title of the web page

Please assign a menu to the primary menu location under menu

Local News

ಕ.ಸಾ.ಪ. ವತಿಯಿಂದ ದಿ.ಶ್ರೀಮತಿ.ನಾಗಮ್ಮ ಶಿವಪ್ಪ ಹೂಲಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ


 ಬೆಳಗಾವಿ:೧೧:ಬೈಲಹೊಂಗಲ ನಾಡಿನ ಶ್ರೀಮತಿ.ನಾಗಮ್ಮ ಶಿವಪ್ಪ ಹೂಲಿ ಇವರು ಖ್ಯಾತ ಜಾನಪದ ಹಾಡುಗಾರ್ತಿಯಾಗಿದ್ದರು. ಅವರು ಅಣ್ಣನ ಬಳಗ ಹಾಗೂ ಅಕ್ಕನ ಬಳಗದ ಅಧ್ಯಕ್ಷೆಯಾಗಿದ್ದು, ಕ್ರಾಂತಿಯೋಗಿ ಬಸವಣ್ಣನ ಚರಿತ್ರೆಯನ್ನು ಜಾನಪದ ತ್ರಿಪದಿ ಮೂಲಕ ಮೂರು ತಿಂಗಳವರೆಗೆ ಅಖಂಡವಾಗಿ ಹಾಡುತ್ತಿದ್ದರು. ಅಲ್ಲದೇ ಕಿತ್ತೂರರಾಣಿ ಚೆನ್ನಮ್ಮಳ ಹಾಡುಗಳು, ಶೋಬಾನೆ ಪದ, ಬೀಸುವ ಪದಗಳನ್ನು ಸೊಗಸಾಗಿ ಹಾಡುತ್ತಿದ್ದರು. ಅಪಾರ ಬಂಧು-ಬಳಗವನ್ನು ಅಗಲಿದ್ದು, ಇವರ ನಿಧನದಿಂದ ಬೈಲಹೊಂಗಲ ಜಾನಪದ ಸಿರಿಯು ಮೊಟಕಾಗಿದೆ. ಎಂದು ಹೇಳುತ್ತಾ, ಇವರ ಪವಿತ್ರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲೇಂದು ಪ್ರಾರ್ಥಿಸುತ್ತೇವೆ. ಅವರ ಕುಟುಂಬದ ದುಃಖದಲ್ಲಿ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಭಾಗಿಯಾಗಿರುತ್ತದೆ. ಎಂದು ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಸಂತಾಪ ಸೂಚನೆಯಲ್ಲಿ ಹೇಳಿದರು. ಬೈಲಹೊಂಗಲ ಕಸಾಪ ತಾಲೂಕಾ ಘಟಕ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ.ಗೌರಾದೇವಿ ತಾಳಿಕೋಟಿಮಠ, ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ.ಅನ್ನಪೂರ್ಣಾ ಕನೋಜ, ಬೆಳಗಾವಿ ಜಿಲ್ಲಾ ಮಹಿಳಾ ಕದಳಿ ವೇದಿಕೆಯ ಅಧ್ಯಕ್ಷರು, ಶರಣೆ ಶ್ರೀಮತಿ.ಪ್ರೇಮಕ್ಕ ಅಂಗಡಿ, ಎಲ್ಲ ವೇದಿಕೆಯ ಸದಸ್ಯರು ಹಾಗೂ ಸಮಸ್ತ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಸಮಸ್ತ ಕನ್ನಡ ಮನಸ್ಸುಗಳು ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು. ಹಾಗೂ ಶ್ರೀಮತಿ.ಪ್ರೇಮಕ್ಕ ಅಂಗಡಿ ಅವರು ಶ್ರೀಮತಿ.ನಾಗಮ್ಮ ಶಿವಪ್ಪ ಹೂಲಿ ಇವರ ಜಾನಪದ ಗಾಯನವನ್ನು ಹೊಗಳುತ್ತಾ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದರು.


Gadi Kannadiga

Leave a Reply