This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ಗ್ರಾಮೀಣ ಪ್ರತ್ಯೇಕ ತಾಲೂಕಾದರೆ ಕ್ಷೇತ್ರಕ್ಕೆ ಹೊಸ ರೂಪ : ಶಾಸಕಿ ಹೆಬ್ಬಾಳಕರ್


ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಪಶು ಚಿಕಿತ್ಸಾಲಯದ ನೂತನ‌ ಕಟ್ಟಡವನ್ನು‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುರುವಾರ ಉದ್ಘಾಟಿಸಿದರು.

ಕಳೆದ 4 ವರ್ಷದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ತೃಪ್ತಿ ನನಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕಂಡು ಕ್ಷೇತ್ರದ ಜನರ ಮುಖದಲ್ಲಿ ಸಂತೃಪ್ತಿಯನ್ನು ನೋಡುತ್ತಿದ್ದೇನೆ. ಜನರ ಸಹಕಾರದಿಂದ ಇನ್ನಷ್ಟು ಯೋಜನೆಗಳನ್ನು ತರಲಿದ್ದೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಹೊಸ ತಾಲೂಕನ್ನಾಗಿಸುವ ಪ್ರಯತ್ನ ಮಾಡುತ್ತಿದ್ದೇನೆ. ತಾಲೂಕಾದಲ್ಲಿ ಕ್ಷೇತ್ರಕ್ಕೆ ಹೊಸ ರೂಪ ಬರಲಿದೆ ಎಂದು ಈ ಸಂದರ್ಭದಲ್ಲಿ ಹೆಬ್ಬಾಳಕರ್ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಯಲ್ಲಪ್ಪ ಡೇಕೋಳ್ಕರ್, ಶಿವಾಜಿ ಬೋಕಡೆ, ಅಶೋಕ ಗೌಡ, ನಾರಾಯಣ ಚೌಹಾನ್, ರವಿ ನಾಯ್ಕ, ಅನಿಲ ಗೌಡ, ಶಿವಾಜಿ ಬೆಟಗೇರಿಕರ್, ಪ್ರಸಾದ ಬೋಕಡೆ, ರೇಹಮಾನ್ ತಹಶಿಲ್ದಾರ, ನಾರಾಯಣ ಕಾಂಬಳೆ, ಸುರೇಶ ಕೀಣೆಕರ್, ಭುಜಂಗ ಸಾವಗಾಂವ್ಕರ್, ಶಿವಾಜಿ ಪಾಟೀಲ, ಮಾರುತಿ ಪಾಟೀಲ, ಪ್ರಲ್ಹಾದ್ ಚಿರಮುರ್ಕರ್, ಸುಮನ್ ಗೌಡ, ಹೇಮಾ, ರಂಜನಾ ಗೌಡ, ನಿಂಗುಲಿ ಚೌಹಾನ್, ಗೀತಾ ಡೇಕೋಳ್ಕರ್, ಪಶು ವೈದ್ಯರಾದ ಶ್ರೀಕಾಂತ ಗವಿ, ಡಾ. ಲಕ್ಷ್ಮಣ ಜಂಬಗಿ, ಪಿಡಿಓ ಅಶ್ವಿನಿ ಹಾಗೂ ಇತರರು ಉಪಸ್ಥಿತರಿದ್ದರು.


Gadi Kannadiga

Leave a Reply