ಗದಗ ಜುಲೈ ೧೯: ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಫಲಾನುಭವಿಗಳಿಗೆ ೦೫ ಕೆ.ಜಿ. ಅಕ್ಕಿಯ ಬದಲಾಗಿ ಪ್ರತಿ ಫಲಾನುಭವಿಗೆ ರೂ.೧೭೦/- ನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕುರಿತಂತೆ ಜಿಲ್ಲೆಯ ೧,೮೮,೮೩೩ ಪಡಿತರ ಕುಟುಂಬಗಳ ೬,೪೩,೪೨೩ ಫಲಾನುಭವಿಗಳಿಗೆ ರೂ.೧೦.೩೭ ಕೋಟಿ ಹಣ ಈಗಾಗಲೇ ಬಿಡುಗಡೆ ಮಾಡಿದ್ದು, ಈಗಾಗಲೇ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ನೇರ ನಗದು ವರ್ಗಾವಣೆಗೆ ಚಾಲನೆ ನೀಡಿರುತ್ತಾರೆ. ಪಡಿತರ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನು/ಸಮಸ್ಯೆಗಳನ್ನು ಅಥವಾ ಅದಕ್ಕೆ ಸಂಬಂಧಿಸಿದಂತೆ ಇರುವ ಯಾವುದೇ ವಿಷಯವನ್ನು ಪರಿಹರಿಸಿಕೊಳ್ಳಲು ಜಿಲ್ಲೆಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಪಡಿತರ ಫಲಾನುಭವಿಗಳು ಈ ನಂಬರಗೆ ಕರೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಉಪನಿರ್ದೇಶಕರ ಕಚೇರಿ ಗದಗ- ೦೮೩೭೨-೨೩೯೪೪೩, ಸಹಾಯಕ ನಿರ್ದೇಶಕರ ಕಛೇರಿ, ಗದಗ ಪಡಿತರ-೯೦೦೮೯-೧೩೫೧೪, ಗದಗ ಗ್ರಾಮೀಣ ಪ್ರದೇಶ- ೬೩೬೪೩-೮೧೬೦೭, ನರಗುಂದ ತಾಲೂಕು – ೯೬೦೬೨-೮೧೦೨೯, ರೋಣ ತಾಲೂಕು-೯೯೧೬೮-೯೦೨೮೨, ಗಜೇಂದ್ರಗಡ ತಾಲೂಕು – ೯೮೪೪೧-೮೯೬೭೨, ಮುಂಡರಗಿ ತಾಲೂಕು- ೯೬೬೩೧-೩೧೪೯೮, ಶಿರಹಟ್ಟಿ ತಾಲೂಕು – ೭೮೨೯೯-೬೦೪೬೯, ಲಕ್ಷ್ಮೇಶ್ವರ ತಾಲೂಕು- ೯೧೬೪೨-೪೯೧೧೮ ಸಂಪರ್ಕಿಸಬಹುದಾಗಿದೆ.
Gadi Kannadiga > State > ಅನ್ನಭಾಗ್ಯ ವರ್ಗಾವಣೆಗೆ ಸಹಾಯವಾಣಿ ಕೇಂದ್ರ
ಅನ್ನಭಾಗ್ಯ ವರ್ಗಾವಣೆಗೆ ಸಹಾಯವಾಣಿ ಕೇಂದ್ರ
Suresh19/07/2023
posted on
More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023