This is the title of the web page
This is the title of the web page

Please assign a menu to the primary menu location under menu

Local News

ಮಹಾರಾಷ್ಟ್ರದಲ್ಲಿ ಕರೋನಾ ಕೇಸ್ ಹೆಚ್ಚುತ್ತಿರುವ ಹಿನ್ನಲೆ ಗಡಿಯಲ್ಲಿ ಹೈ ಅಲರ್ಟ್


ಅಥಣಿ: ಮಹಾರಾಷ್ಟದಲ್ಲಿ ಕರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಹಾಗೂ ಒಮೈಕ್ರೋನ್ ವೈರಸ್ ಮುಂಜಾಗೃತ ಕ್ರಮವಾಗಿ ಗಡಿಯಲ್ಲಿ ಪೊಲೀಸ್ ಹೈ ಅಲರ್ಟ್ ಆಗಿದ್ದಾರೆ.

ಗಡಿ ಭಾಗದದಲ್ಲಿ ಮಹಾರಾಷ್ಟ್ರ ದಿಂದ ಬರುವ ಪ್ರಯಾಣಿಕರನ್ನು ತಡೆದು ಧಾಖಲೆ ಸಮೇತ ಪರೀಲಿಸಿ ಗಡಿ ಪಾರು ಮಾಡಲು ಅನುಮತಿ ನೀಡಲಾಗುತ್ತಿದೆ.

ಅಥಣಿ ತಾಲೂಕಿನ ಬಳ್ಳಿಗೇರಿ ಹಾಗೂ ಅನಂತಪುರ ಚೆಕ್ ಪೋಸ್ಟ್ ಗಳಲ್ಲಿ ವಾಹನ ಸವಾರನ್ನು ತಡೆದು ತಪಾಸನೆಗೆ ಒಳಪಡಿಸಲಾಗುತ್ತಿದೆ.

ಜತ್-ಜಾ0ಬುಟಿ ಮುಖ್ಯ ಹೆದ್ದಾರಿಯಲ್ಲಿ ಬ್ಯಾರಿಕೆಟಗಳನ್ನು ಅಳವಡಿಸಿ ವಾಹನ ಸವಾರನ್ನು ಪರಿಶೀಲನೆಗೆ ಒಳಪಡೆಸಲಾಗುತ್ತಿದೆ.

ಕೋವಿಡ್ ಗೆ ಸಂಬಂಧಪಟ್ಟ ಧಾಖಲೆಗಳನ್ನು ನೀಡದಿದ್ದರೆ ಅಂತವರನ್ನು ಗಡಿಯಲ್ಲಿ ಪ್ರವೇಶ ನೀಡದೆ ವಾಪಾಸ್ ಕಳಿಸಲಾಗುತ್ತಿದೆ.

ಕೋವಿಡ್ ಎರಡು ಲಷಿಕೆ ಪಡೆದವರು ಹಾಗೂ ಈಗಿನ ಕರೋನಾ ನೆಗೆಟಿವ್ ರಿಪೋರ್ಟ್ ಧಾಖಲೆ ನೀಡಿದವನ್ನು ಗಡಿ ಪಾರು ಮಾಡಲಾಗುತ್ತೆ.

ಕಣ್ಣು ತಪ್ಪಿಸಿ ಕಳ್ಳ ದಾರಿಗಳಿಂದ ಗಡಿ ಪಾರು ಮಾಡುವರ ಮೇಲೆ ಹೆಚ್ಚಿನ ನೀಗಾ ವಹಿಸಲಾಗಿದೆ.


Gadi Kannadiga

Leave a Reply