ಬೆಳಗಾವಿ: ಹಿಂದೂ ಎಂಬುದು ಧರ್ಮವಲ್ಲ, ಅದೊಂದು ಜೀವನ ಶೈಲಿ ಎಂದು ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಧಾರ್ಮಿಕ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಈ ಮಾತನ್ನು ಅವರು ಹೇಳಿದ್ದಾರೆ.
Gadi Kannadiga > Local News > ಹಿಂದೂ ಅನ್ನುವುದು ಧರ್ಮವಲ್ಲ, ಅದೊಂದು ಜೀವನ ಶೈಲಿ : ರಮೇಶ್ ಕತ್ತಿ
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೆಡೆ ಹಿಂದೂ ಧರ್ಮದ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಸಿಂಧೂ ಪ್ರಾಂತ್ಯದವರನ್ನು ಹಿಂದೂಗಳು ಎಂದು ಕರೆದರು. ಅದೇ ಪದ ಚಾಲ್ತಿಯಲ್ಲಿದೆ ಅಷ್ಟೇ ಎಂದು ಹೇಳಿದರು.
ಈಗ ಯುರೋಪಿಯನ್, ಅಮೆರಿಕನ್ ಅಂತ ಕರೆಯುತ್ತೇವೆ. ಹಾಗೇ ಭಾರತದಲ್ಲಿ ವಾಸಿಸುವವರನ್ನು ಹಿಂದೂಗಳು ಎಂದು ಕರೆಯಲಾಗುತ್ತದೆ ಎಂದರು. ಹಿಂದೂ ಅನ್ನುವುದು ಧರ್ಮವಲ್ಲ, ಅದೊಂದು ಜೀವನ ಶೈಲಿ ಎಂದಿದ್ದಾರೆ.