This is the title of the web page
This is the title of the web page

Please assign a menu to the primary menu location under menu

Local News

ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದೆ : ಹಿರೇಮಠ


ಬೆಳಗಾವಿ: ಸೆಪ್ಟೆಂಬರ-೨೧: ” ಭವ್ಯ ಪರಂಪರೆ ಹಾಗೂ ಇತಿಹಾಸ ಹೊಂದಿರುವ ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದೆ. ಮಹಿಳೆಯರನ್ನು ಶಕ್ತಿ ದೇವತೆಯಾಗಿ ಕಾಣಲಾಗಿದೆ. ಮಹಿಳೆಯರು ಮೌಢ್ಯತೆಯ ದಾರಿ ತುಳಿಯದಿದ್ದರೆ ಶಾಂತಾದೇವಿ ಅವರಂತೆ ಸಾಧನೆ ಮಾಡಬಹುದಾಗಿದೆ” ಎಂದು ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ ಉಪನ್ಯಾಸ ನೀಡಿ ಅಭಿಪ್ರಾಯ ಪಟ್ಟರು.
ನಗರದ ಲಿಂಗಾಯತ ಭವನದಲ್ಲಿ ಜರುಗಿದ ಗುರು ನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, “ಮಕ್ಕಳ ಸರ್ವಾಂಗೀಣ ಪ್ರಗತಿ ಮಹಿಳೆಯ ಪಾಲ್ಗೊಳ್ಳುವಿಕೆಯನ್ನು ಅವಲಂಬಿಸಿದೆ. ಹೀಗಾಗಿ ಮಹಿಳೆಯರು ಮಕ್ಕಳ ಪ್ರತಿ ಚಟುವಟಿಕೆಗಳ ಮೇಲೆ ನಿಯಂತ್ರಣ ಇಡಬೇಕು” ಎಂದರು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ಶಾಂತಾದೇವಿ ಹುಲೆಪ್ಪನವರಮಠ ಮಾತನಾಡಿ “ಭಾರತೀಯ ಪರಂಪರೆಯಲ್ಲಿ ಗುರುವಿಗೆ ದೇವರೆಂದು ಭಾವಿಸಿ ಗೌರವಿಸಲಾಗುತ್ತದೆ. ಶಿಕ್ಷಣವು ಮನುಷ್ಯನ ವ್ಯಕ್ತಿತ್ವ ರೂಪಿಸಿ ಬದುಕನ್ನು ಸುಂದರ ಗೊಳಿಸುತ್ತದೆ. ಹೀಗಾಗಿ ಮಕ್ಕಳ ಬದುಕಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ನಮ್ಮ ದೇಶದ ರಾಷ್ಟ್ರಪತಿ ಸ್ಥಾನ ಪಡೆದರೂ ಡಾ. ರಾಧಾಕೃಷ್ಣನ್ ಅವರು ತಮ್ಮ ಜನ್ಮ ದಿನವನ್ನು ಶಿಕ್ಷಕರ ದಿನ ವನ್ನಾಗಿ ಆಚರಿಸಲು ತಿಳಿಸುವ ಮೂಲಕ ಸಮಸ್ತ ಗುರುಕುಲವನ್ನು ಗೌರವಿಸಿದ್ದಾರೆ. ಆ ನಿಟ್ಟಿನಲ್ಲಿ ಇಂದಿನ ಶಿಕ್ಷಕರು ಶ್ರದ್ಧೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದರೆ ದೇಶದ ಅಭಿವೃದ್ಧಿ ಸಾಧ್ಯ” ಎಂದು ನುಡಿದರು.
ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶೈಲಜಾ ಭಿಂಗೆ ಶೈಲಾ ಪಾಟೀಲ ನೈನಾ ಗಿರಿಗೌಡರ ಆಶಾ ಪಾಟೀಲ್ ಜ್ಯೋತಿ ಬದಾಮಿ ರತ್ನಾ ಝೋoಡ ಮಾಧುರಿ ಉಪ್ಪಿನ್ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆ ವೀಣಾ ಚೆನ್ನಣ್ಣವರ ವಹಿಸಿದ್ದರು.
ಸಂಗೀತಾ ಸುಲ್ತಾನಪುರೆ ಅವರ ಪ್ರಾರ್ಥನಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರಕ್ಷಾ ದೇಗಿನಾಳ ಶ್ವೇತಾ ಚನ್ನಣ್ಣವರ ಪರಿಚಯಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಗೀತಾ ಗುಂಡಕಲ್ಲೆ ನಿರ್ವಹಿಸಿದರು.


Gadi Kannadiga

Leave a Reply