This is the title of the web page
This is the title of the web page

Please assign a menu to the primary menu location under menu

State

ಹಿರೇಸಿಂದೋಗಿ: ಸೆ. ೧೩ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ


ಕೊಪ್ಪಳ ಸೆಪ್ಟೆಂಬರ್ ೧೨: ೧೧೦ಕೆ.ವಿ ಹಿರೇಸಿಂದೋಗಿ ವಿದ್ಯುತ್ ಉಪ ಕೇಂದ್ರದಲ್ಲಿ ೨ನೇ ತ್ರೆöÊಮಾಸಿಕ ನಿರ್ವಹಣಾ ಕೆಲಸ ನಡೆಯುತ್ತಿರುವ ಪ್ರಯುಕ್ತ ಸೆಪ್ಟೆಂಬರ್ ೧೩ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಿರ್ವಹಣಾ ಕಾರ್ಯದ ನಿಮಿತ್ತ ಎಫ್-೧ ಹಿರೇಸಿಂದೋಗಿ ಐಪಿಸೆಟ್ ಫೀಡರ್, ಎಫ್-೨ ಮೈನಳ್ಳಿ ಐಪಿ ಫೀಡರ್, ಎಫ್-೩ ಎನ್.ಜೆ.ವೈ ದದೇಗಲ್ ಫೀಡರ್, ಎಫ್-೪ ವದಗನಾಳ ಐಪಿ ಫೀಡರ್, ಎಫ್-೫ ಚಿಕ್ಕಸಿಂದೋಗಿ ಐಪಿ ಫೀಡರ್, ಎಫ್-೧೦ ಎಂಐ ಫೀಡರ್, ಎಫ್-೧೧ ಗೊಂಡಬಾಳ ಐಪಿ ಫೀಡರ್‌ಗಳಿಗೆ ಒಳಪಡುವ ಎಲ್ಲಾ ಐ.ಪಿ ಸೆಟ್‌ನ ಗ್ರಾಮ, ಪ್ರದೇಶ ಹಾಗೂ ಏರಿಯಾಗಳಿಗೆ ಸೆ. ೧೩ರ ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.
ನಿರ್ವಹಣಾ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಬವಿಸಿದ್ದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply