This is the title of the web page
This is the title of the web page

Please assign a menu to the primary menu location under menu

State

ರಾಜಕಾರಣದಲ್ಲಿ ಮರೆಯಾಗುತ್ತಿರುವ ಸಭ್ಯ ಸಂಸ್ಕೃತಿ ಎಚ್ ವಿಶ್ವನಾಥ್ ವಿಷಾದ


ಬೆಳಗಾವಿ ; ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಸಭ್ಯ ಸಂಸ್ಕೃತಿ ಮರೆಯಾಗುತ್ತಿರುವುದು ಅತ್ಯಂತ ವಿಷಾದಕರ ಎಂದು ಹಿರಿಯ ರಾಜಕಾರಣಿ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು .

ಜಮಖಂಡಿಯಲ್ಲಿನ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಅವರು ಮಾರ್ಗ ಮಧ್ಯದಲ್ಲಿ ಬೆಳಗಾವಿಯಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು .
ರಾಜ್ಯದಲ್ಲಿ ಹಿರಿಯ ರಾಜಕಾರಣಿಗಳು ಎಂದೆನಿಸಿಕೊಂಡವರು ಪರಸ್ಪರರನ್ನು ಗೌರವಿಸುವ ಬದಲಾಗಿ ಅತ್ಯಂತ ಕೆಟ್ಟದಾಗಿ ನಿಂದಿಸುವ ಸಂಸ್ಕೃತಿ ಬೆಳೆಯುತ್ತಿದೆ ಇದು ಅಪಾಯಕಾರಿ ಹಿಂದೆಂದೂ ಕಾಣದಂತಹ ವಾತಾವರಣ ನಿರ್ಮಾಣವಾಗುತ್ತಿರುವುದು ಸರಿಯಲ್ಲ ರಾಜಕಾರಣವೇ ಬೇರೆ ವೈಯಕ್ತಿಕವಾದ ಸಂಬಂಧಗಳೇ ಬೇರೆ ಎಂದು ಅವರು ಹೇಳಿದರು .
ವೀರೇಂದ್ರ ಪಾಟೀಲರು ರಾಮಕೃಷ್ಣ ಹೆಗಡೆ ದೇವೆಗೌಡರು ಎಸ್ಎಂ ಕೃಷ್ಣ ಯಡಿಯೂರಪ್ಪ ಸೇರಿದಂತೆ ಇತ್ತೀಚಿನವರೆಗೂ ಬಹುತೇಕ ಹಿರಿಯ ರಾಜಕಾರಣಿಗಳನ್ನು ಹತ್ತಿರದಿಂದ ಬಲ್ಲ ತಮಗೆ ಆರೋಪ ಪ್ರತ್ಯಾರೋಪಗಳ ಸಂದರ್ಭದಲ್ಲಿಯೂ ಕೂಡ ಸೌಜನ್ಯತೆಯ ಎಲ್ಲೆಯನ್ನು ಅವರು ದಾಟಿದ್ದು ಕಾಣಲಿಲ್ಲ ಅವರೆಲ್ಲ ಪರಸ್ಪರರಿಗೆ ಗೌರವಯುತವಾದ ಭಾಷೆಯನ್ನೇ ಅವರು ಬಳಸುತ್ತಿದ್ದರು ಎಂದ ಅವರು ಈಗಲೂ ಕಾಲ ಮಿಂಚಿಲ್ಲ ಆಗಿರಬಹುದಾದ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದರು .
ಹಿಂದೂ ದೇವಸ್ಥಾನಗಳಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಅವಕಾಶ ಇಲ್ಲ ಎನ್ನುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅತ್ಯಂತ ಅಪಾಯಕಾರಿ ಬೆಳವಣಿಗೆ ಇದಾಗಿದೆ ಎಂದರು .
ತಲೆತಲಾಂತರಗಳಿಂದ ದೇವಸ್ಥಾನಗಳ ಹತ್ತಿರ ಹಣ್ಣು ಹೂವು ಕುಂಕುಮ ಅರಿಶಿಣ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಮುಸಲ್ಮಾನ ವ್ಯಾಪಾರಿಗಳೇ ಮಾಡುತ್ತ ಬಂದಿದ್ದಾರೆ .ಈಗ ನಡೆಯುತ್ತಿರುವ ಈ ಬೆಳವಣಿಗೆ ಸರಿಯಾದದ್ದಲ್ಲ ಇಂಥ ವಿಚಾರವನ್ನು ಕೈ ಬಿಡುವುದು ಒಳ್ಳೆಯದು ಎಂದು ಅವರು
ಈ ವಿಚಾರ ವಿವಾದವಾಗುವುದು ಬೇಡ ಎಂದು ಅಭಿಪ್ರಾಯಪಟ್ಟರು .
ಇತ್ತೀಚೆಗೆ ಮಾಧ್ಯಮಗಳಲ್ಲಿ ಬಳಸುತ್ತಿರುವ ಭಾಷೆಯ ಕುರಿತು ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ ಹಿರಿಯ ಮುತ್ಸದ್ದಿ ವಿಶ್ವನಾಥ್ ಅವರು ಮಾಧ್ಯಮಗಳಲ್ಲಿ ಬಳಸುವ ಶಬ್ದಗಳು ಸರಿಯಲ್ಲ ಟಗರು, ಬಂಡೆ ಸೇರಿದಂತೆ ಹಲವಾರು ಶಬ್ದಗಳ ಕುರಿತು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು .


Gadi Kannadiga

Leave a Reply