This is the title of the web page
This is the title of the web page

Please assign a menu to the primary menu location under menu

Local NewsState

ಗೃಹ ಸಚಿವ ಆರಗ ಜ್ಞಾನೇಂದ್ರ ಬೇಜಬಾಬ್ದಾರಿ ಸಚಿವ: ಅವರು ಗೃಹ ಸಚಿವರಾಗೊದಕ್ಕೆ ಅನ್ ಫಿಟ್ – ಸಿದ್ದರಾಮಯ್ಯ


ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆಯನ್ನ ನಾನು ಖಂಡಿಸಿದ್ದೇನೆ. ಗೃಹ ಸಚಿವ ಆರಗ ಜ್ಞಾನೇಂದ್ರ ಬೇಜಬಾಬ್ದಾರಿ ಸಚಿವ. ಅವರು ಗೃಹ ಸಚಿವರಾಗೊದಕ್ಕೆ ಅನ್ ಫಿಟ್ ಎಂದು ವಿರೋಧಿ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,
ಕೂಡಲೆ ಗೃಹ ಮಂತ್ರಿ ರಾಜೀನಾಮೆ ನೀಡಿಬೇಕು.ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎನ್ನೋ ಬಿಜೆಪಿ ಅರೋಪಕ್ಕೆ ಪ್ರತಿಕ್ರಿಯಿಸಿ ಬಿಜೆಪಿ ನಾಯಕರು ಸಾಕ್ಷಿ ಇದ್ದಾರಾ ಎಂದು ಪ್ರಶ್ನಿಸಿದರು.

ಕೆಲ ಸಂಘಟನೆಗಳನ್ನ ಬ್ಯಾನ್ ಮಾಡೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಧಮ್ ಇದ್ರೆ ಎಸ್ ಡಿಪಿಐ, MIM RSS,ಭಜರಂಗದಳ ಸೇರಿದಂತೆ ಕೆಲ ಸಂಘನೆಳನ್ನ ಬ್ಯಾನ್ ಮಾಡಲಿ. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ರೂ ಕೂಡಲೇ ಕ್ರಮ‌ ಕೈಗೊಳ್ಳಬೇಕು.ಕಾನೂನಿನ ರಿತ್ಯ ಬಂಧನ ಮಾಡಬೇಕು. ಈ ಘಟನೆ ಜಾಮೀನು ರಹಿತ ಅಫೆನ್ಸ್.ನಾಯಕರು ಕೆಲವರಿಗೆ ಬಹಳ ಅನ್ಯಾಯ ಆಗಿದೆ ಎಂದರು.


Gadi Kannadiga

Leave a Reply