This is the title of the web page
This is the title of the web page

Please assign a menu to the primary menu location under menu

State

ಹೋಟೆಲ್ ಹಾಗೂ ರೆಸಾರ್ಟ್ ಗಳಲ್ಲಿ, ನಿವಾಸಿಗಳ ಭದ್ರತಾ ವ್ಯವಸ್ಥೆ ಪರಿಶೀಲನೆಗೆ ಗೃಹ ಸಚಿವರ ನಿರ್ದೇಶನ


ಬೆಳಗಾವಿ : ಸರಳ ವಾಸ್ತು ತಜ್ಞ, ಚಂದ್ರಶೇಖರ ಸ್ವಾಮೀಜಿ ಯವರ, ಭೀಕರ ಹತ್ಯೆ ತಪ್ಪಿಸಲು ವಿಫಲವಾದ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಪ್ರತಿಷ್ಟಿತ ಹೋಟೆಲ್ ಗಳು ಹಾಗೂ ಪಂಚತಾರಾ ರೆಸಾರ್ಟ್ ಗಳಲ್ಲಿ, ಭದ್ರತಾ ಪರಿಶೀಲನೆ ( ಸೇಫ್ಟಿ ಆಡಿಟ್) ನಡೆಸಬೇಕೆಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಿದ್ದಾರೆ.

ಈ ಕುರಿತು, ಸಚಿವರು ರಾಜ್ಯದ ಪೊಲೀಸರಿಗೆ ಸೂಚನೆ ನೀಡಿದ್ದು, ಪರವಾನಗಿ ಪಡೆಯುವ ಪೂರ್ವದಲ್ಲಿ, ವಿಧಿ ಸಲಾದ ರಕ್ಷಣಾ ಸಂಬಂಧ ನಿಯಮಾವಳಿಗಳನ್ನು, ಹೋಟೆಲ್ಗಳು ಹಾಗೂ ಪ್ರತಿಷ್ಟಿತ ರೆಸಾರ್ಟ್ಗಳು ಪಾಲಿಸುತ್ತಿವೆಯೇ ಎಂಬುದರ ಬಗ್ಗೆ ಪರಿಶೀಲನೆ ಆಗಬೇಕಿದೆ, ಎಂದು ಅಭಿಪ್ರಾಯಪಟ್ಟಿದ್ದಾರೆ.

ಯಾವುದಾದರೂ ಹೋಟೆಲ್ಗಳು ಅಥವಾ ಪ್ರತಿಷ್ಟಿತ ರೆಸಾರ್ಟ್ ಗಳು, ರಕ್ಷಣಾ ಸಂಬಂಧ ನಿಯಮಾವಳಿಗಳನ್ನು ಪಾಲಿಸಲು ವಿಫಲ ವಾಗಿದ್ದರೆ, ಅಗತ್ಯ ಕಾನೂನು ಕ್ರಮ ಜರುಗಿಸುವಂತೆ, ನಿರ್ದೇಶಿಸಿ ದ್ದಾರೆ.

ನಿನ್ನೆ ಹೋಟೆಲ್ ವ್ಯವಸ್ಥಾಪಕರು, ತನ್ನ ಅತಿಥಿಗಳಿಗೆ ಸರಿಯಾದ ರಕ್ಷಣಾ ವ್ಯವಸ್ಥೆ ಒದಗಿಸದೆ ಇದ್ದದ್ದು, ಮೇಲ್ನೋಟಕ್ಕೆ ಕಂಡು ಬಂದಿದೆ, ಎಂದೂ ಸಚಿವರು, ತಿಳಿಸಿದ್ದಾರೆ
Eom


Gadi Kannadiga

Leave a Reply