This is the title of the web page
This is the title of the web page

Please assign a menu to the primary menu location under menu

State

ಭೋವಿ ಸಮಾಜದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ತಾಲೂಕಿನ ಭೋವಿ ಸಮಾಜದ ವತಿಯಿಂದ ಸನ್ಮಾನ ಕಾರ್ಯಕ್ರಮ


ಕುಷ್ಟಗಿ:-ಇಂದು ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಕುಷ್ಟಗಿ ವತಿಯಿಂದ ನೂತನವಾಗಿ ಅಯ್ಕೆಯಾದ ಶ್ರೀ ಸೂಚಪ್ಪ ಭೋವಿ ತಾಲ್ಲೂಕು ಅಧ್ಯಕ್ಷರು, ಶ್ರೀ ಗೋವಿಂದ ವಡ್ಡರ ಉಪಾಧ್ಯಕ್ಷರು ಕುಷ್ಟಗಿ ಪಟ್ಟಣದ ಭೋವಿ ಸಮಾಜದ ಹಿರಿಯರು ಹಾಗೂ ಯುವಕರು ಸನ್ಮಾನ ಮಾಡಿದರು, ಹಾಗೂ ಭೋವಿ ಸಮಾಜದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರಿಗೆ ಹಾಗೂ ಭೋವಿ ಸಮಾಜದ ಶಾಸಕರಿಗೆ, ಮುಖಂಡರಿಗೆ ಕೊಲೆ ಬೆದರಿಕೆಯನ್ನು ಹಾಕಿದ ಕಿಳಿಗೇಡಿಗಳನ್ನು ಕಾನೂನಿನ ಮುಖಾಂತರ ಸೂಕ್ತ ತನಿಖೆಯನ್ನು ಮಾಡಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕು. ಹಾಗೂ ಸೂಕ್ತವಾದ ರಕ್ಷಣೆಯನ್ನು ಕೊಡಬೇಕು ಎಂದು ಭೋವಿ ವಡ್ಡರ ಸಮಾಜ ಕುಷ್ಟಗಿ ವತಿಯಿಂದ ಸರ್ಕಾರಕ್ಕೆ ಎಚ್ಚರ ನೀಡಲಾಯಿತು. ಇಲ್ಲವಾದಲ್ಲಿ ಬೀದಿಗೆ ಇಳಿದು ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರ ನೀಡಲಾಯಿತು. ಈ ಸಂದರ್ಭದಲ್ಲಿ ಪರಸಪ್ಪ ಅಮರಾವತಿ, ಶೇಖಪ್ಪ ಮ್ಯಾಗೇರಿ, ಹನಮಂತಪ್ಪ ಯರೇದಾಳ,ಯಮನೂರಪ್ಪ ಕಳಿಕಟ್ಟಿಗೆ, ದಾಸಪ್ಪ, ಹನಮಂತಪ್ಪ, ನಾಗರಾಜ ಭೋವಿ ಯುವ ವೇದಿಕೆ ರಾಜ್ಯ ಮಾಧ್ಯಮ ಪ್ರತಿನಿಧಿ,ಮುತ್ತಣ್ಣ ಮ್ಯಾಗೇರಿ,ಲಕ್ಷ್ಮಣ್ಣ ತರಲಕಟ್ಟಿ, ಯಮನೂರಪ್ಪ ಭೋವಿ, ಶಿವು ಹಿರೇಮನ್ನಾಪೂರ, ಯಂಕಪ್ಪ, ಶಿವುಕುಮಾರ ಹನಮಸಾಗರ,ಮಂಜುನಾಥ ಭೋವಿ, ಮಂಜುನಾಥ ಮುದೋಳ,ಮಂಜು ಮನ್ನೂರು, ನಾಗರಾಜ ಮುದೋಳ,ಹುಲಗಪ್ಪ,ವೆಂಕಟೇಶ,ಕನಕಪ್ಪ, ಮಾರುತಿ ಕೆಲ್ಲರೂ, ಭೋವಿ ಸಮಾಜದ ಹಿರಿಯರು ಹಾಗೂ ಯುವಕರು ಇದ್ದರು

.


Gadi Kannadiga

Leave a Reply