This is the title of the web page
This is the title of the web page

Please assign a menu to the primary menu location under menu

Local News

ಶ್ರೀಧರ ಹೆಗಡೆ ಕಲಬಾಗ ಅವರಿಗೆ ಹುಕ್ಕೇರಿ ಬಾಳಪ್ಪ ಪ್ರಶಸ್ತಿ


ಬೆಳಗಾವಿ೨೬: ಇಲ್ಲಿಯ ಇಂಪು ಸಂಗೀತ ವೇದಿಕೆ ನೀಡುವ ಈ ವರ್ಷದ ಹುಕ್ಕೇರಿ ಬಾಳಪ್ಪ ಸಂಸ್ಮರಣ ಪ್ರಶಸ್ತಿಗೆ ಯುವ ಪ್ರತಿಭಾವಂತ ಗಾಯಕರಾದ ಶ್ರೀ ಶ್ರೀಧರ ಹೆಗಡೆ ಕಲಬಾಗ, ಹೊನ್ನಾವರ ಇವರನ್ನು ಆಯ್ಕೆ ಮಾಡಲಾಗಿದ್ದು ಇದೇ ಬರುವ ಎಪ್ರಿಲ್ ೩ ರವಿವಾರ ಕನ್ನಡ ಸಾಹಿತ್ಯ ಭವನದಲ್ಲಿ ಸಂಜೆ ೫ ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಬೆಂಗಳೂರಿನ ಸಪ್ತಕ ಸಂಗೀತ ಸಂಸ್ಥೆಯ ಸಹಯೋಗದೊಡನೆ ನಡೆಯುವ ” ಸ್ವರಧಾರಾ- ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಿ. ಜಿಲ್ಲಾ ನ್ಯಾಯಾಧೀಶರು ಹಿರಿಯ ಕವಿಗಳೂ ಆದ ಜಿನದತ್ತ ದೇಸಾಯಿಯವರು ಉದ್ಘಾಟಿಸಲಿದ್ದು, ಸಪ್ತಸ್ವರ ಸಂಗೀತ ವಿದ್ಯಾಲಯದ ಸಂಚಾಲಕರಾದ ಶ್ರೀಮತಿ ನಿರ್ಮಲಾ ಪ್ರಕಾಶ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಗಮಕಿ ಶ್ರೀಮತಿ ಭಾರತಿ ಭಟ್ ಅವರು ಪ್ರಶಸ್ತಿ ಪ್ರದಾನ ಮಾಡುವರು ಮತ್ತು ಶ್ರೀ ಪಿ. ಬಿ. ಸ್ವಾಮಿ ಹಾಗೂ ಶ್ರೀ ಪ್ರಭಾಕರ ಶಹಾಪೂರಕರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪ್ರಶಸ್ತಿ ಪ್ರದಾನದ ನಂತರ ಶ್ರೀಧರ ಹೆಗಡೆಯವರ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಶ್ರೀ ಅಂಗದ ದೇಸಾಯಿ ತಬಲಾ, ಶ್ರೀ ಯೋಗೇಶ ರಾಮದಾಸ ಹಾರ್ಮೋನಿಯಂ ಸಾಥ್ ನೀಡುವರು. ಸಂಗೀತಪ್ರೇಮಿಗಳೆಲ್ಲ ಆಗಮಿಸಬೇಕಾಗಿ ಇಂಪು ಸಂಚಾಲಕ ಎಲ್. ಎಸ್. ಶಾಸ್ತಿö್ರ ಮತ್ತು ಸಪ್ತಕದ ಸಂಚಾಲಕರಾದ ಜಿ. ಎಸ್. ಹೆಗಡೆ ಕೋರಿದ್ದಾರೆ.


Gadi Kannadiga

Leave a Reply