This is the title of the web page
This is the title of the web page

Please assign a menu to the primary menu location under menu

State

ಹಾಸ್ಟೆಲ್ ಮಕ್ಕಳ ಸೇವೆ ನಮ್ಮ ಭಾಗ್ಯ–ಗಾರ್ಗಿ 


ಖಾನಾಪೂರ – ಗ್ರಾಮೀಣ ಪ್ರದೇಶದ ಬಡ ಹಿಂದುಳಿದ ವರ್ಗಗಳ ಸಮುದಾಯದ ಮಕ್ಕಳು ಶೈಕ್ಷಣಿಕ ಅವಕಾಶಗಳಿಂದ ವಂಚಿತರಾಗಬಾರದೆಂಬ ಕನಸು ಸಾಮಾಜಿಕ ನ್ಯಾಯದ ಹರಿಕಾರ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ದಿ. ಡಿ ದೇವರಾಜ ಅರಸುರವರ ಕನಸಾಗಿತ್ತು ಅದಕ್ಕಾಗಿಯೆ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಹಾಸ್ಟೆಲುಗಳನ್ನು ಪ್ರಾರಂಭಿಸಿದರು ಇಂದು ಸಾವಿರಾರು ಕುಟುಂಬಗಳು ಮುಖ್ಯ ವಾಹಿನಿಗೆ ಬರಲು ಕಾರಣವಾಗಿದೆ ಇಂತಹ ಹಾಸ್ಟೆಲುಗಳಲ್ಲಿಯ ಮಕ್ಕಳ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ನಿವೃತ್ತ ಅಧಿಕಾರಿ ಸಾಹಿತಿ ಬಸವರಾಜ ಗಾರ್ಗಿ ನುಡಿದರು ಅವರು ಇಲ್ಲಿಯ ತಾಲೂಕಿನ ಹಿಂದುಳಿದ ವರ್ಗಗಳ ತಾಲೂಕಾ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಸೇವಾ ನಿವೃತ್ತಿಯ ಗೌರವ ಸ್ವೀಕರಿಸಿ ಮಾತನಾಡುತ್ತ ತಮ್ಮ ಮೂವತ್ತೇಳು ವರ್ಷಗಳ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ತಮ್ಮ ಅನುಭವಗಳನ್ನು
ಹಂಚಿಕೊಂಡರು
ತಂದೆ-ತಾಯಿ ,ಅಜ್ಜ-ಅಜ್ಜಿಯರಂತಹ ಕೌಟುಂಬಿಕ ವಾತಾವರಣದಿಂದ ಬಂದ ಮಕ್ಕಳು ಹಾಸ್ಟೆಲ್ ಜೀವನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ಅವರನ್ನು ನಮ್ಮ ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ಕಾಳಜಿ ವಹಿಸಿ ಗಮನಿಸಬೇಕಾಗುತ್ತದೆ ಹೆಚ್ಚು ಹೆಚ್ಚು ಅವರೊಂದಿಗೆ ಬೆರೆತು ಬೇಕುಗಳನ್ನು ಪೂರೈಸಬೇಕಾಗುತ್ತದೆ ಹಾಸ್ಟೆಲುಗಳ ಎಲ್ಲ ಸಿಬ್ಬಂದಿ ಸೌಹಾರ್ದಯುತವಾಗಿದ್ದು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿಭಾಯಿಸಿದಾಗ ಹಾಸ್ಟೆಲುಗಳ ಉದ್ದೇಶ ಸಫಲವಾಗುತ್ತದೆಂದರು
ಅಧ್ಯಕ್ಷತೆ ವಹಿಸಿದ್ದ ತಾಲೂಕಾಧಿಕಾರಿ ಶ್ರೀಮತಿ ಜಿ ಜಿ ಕಟಾಪುರಿಮಠ ಮಾತನಾಡಿ ಗಾರ್ಗಿಯವರು ಸೇವೆ ಸಲ್ಲಿಸಿದಲ್ಲೆಲ್ಲ ತಮ್ಮ ಧಕ್ಷತೆಯ ಮೂಲಕ ಮಕ್ಕಳ ಮನದಲ್ಲಿ ಸ್ಥಿರವಾಗಿ ನೆಲೆಸಿದ್ದನ್ನು ನಾನು ಕಂಡಿದ್ದೇನೆ ಮಕ್ಕಳು ಮತ್ತು ಮರಗಳೆಂದರೆ ಅವರಿಗೆ ಬಹಳ ಪ್ರೀತಿ ಅವರ ಮೇಲ್ವಿಚಾರಣೆ ಯಲ್ಲಿ ಬೆಳೆದ ಮಕ್ಕಳು ಇಂದು ಸಮಾಜದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಅಂತವರೊಂದಿಗೆ ನಾನೂ ಕೆಲಸ ಮಾಡಿದ್ದೇನೆ ಮತ್ತು ಜವಾಬ್ದಾರಿಗಳನ್ನು ನಿಲಯಾರ್ಥಿಗಳ ನಿರ್ವಹಣೆಯನ್ನು ಕಲಿತಿದ್ದೇನೆ ಎಂದರು
ವಿಸ್ತೀರ್ಣಾಧಿಕಾರಿ ವಿಜಯ ರಣಕಾಂಬಳೆ ಸ್ವಾಗತಿಸಿ ಪರಿಚಯಿಸಿದರು ಕಚೇರಿ ಸಿಬ್ಬಂದಿ ಮತ್ತು ತಾಲೂಕಿನ ಹಾಸ್ಟೆಲುಗಳ ಮೇಲ್ವಿಚಾರಕು ಉಪಸ್ಥಿತರಿದ್ದರು


Gadi Kannadiga

Leave a Reply