ಬೆಳಗಾವಿ : ಸಿಎಂ ಬೊಮ್ಮಾಯಿಯವರೇ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರಿಗೆ ಕ್ಲೀನ್ಚಿಟ್ ಕೊಟ್ಟಿರುವಾಗ ಪಾರದರ್ಶಕ ತನಿಖೆ ಹೇಗೆ ಸಾಧ್ಯ ಎಂದು ವಿಧಾನ್ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಪ್ರಕರಣ ತನಿಖೆ ಹಂತದಲ್ಲಿದೆ. ಸಂತೋಷ್ ಮನೆ ಅಡಯಿಟ್ಟು ದುಡ್ಡು ಪಡೆದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸಚಿವ ಈಶ್ವರಪ್ಪ ಶೇ.40ರಷ್ಟು ಕಮೀಷನ್ ಕೇಳಿರುವ ಬಗ್ಗೆ ಸಂತೋಷ ಆರೋಪಿಸಿದ್ದರು.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಚಿವ ಈಶ್ವರಪ್ಪ ವಿರುದ್ಧ ಇನ್ನೊಂದು ಎಫ್ಐಆರ್ ದಾಖಲಿಸಬೇಕು. ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ಸಚಿವರನ್ನು ಬಂಧಿಸಿ, ಈ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು. ಆಪ್ ಮುಖಂಡ ಭಾಸ್ಕರ್ ರಾವ್ ಪ್ರಚಾರಕ್ಕಾಗಿ ಶಾಸಕಿ ಹೆಬ್ಬಾಳ್ಕರ್ ಹೆಸರು ಹೇಳುತ್ತಿದ್ದಾರೆ. ನಿಮ್ಮ ಬಗ್ಗೆ ಗೌರವ ಇದೆ, ಬೇಜವಾಬ್ದಾರಿ ಹೇಳಿಕೆ ಕೊಡಬೇಡಿ ಎಂದು ಕಿಡಿಕಾರಿದ್ದರು.