ಬೆಳಗಾವಿ: ಬೆಳಗಾವಿಯಲ್ಲಿ ಪ್ರಧಾ£ ನರೇಂದ್ರ ಮೋದಿ ಅವರು ಕಿಸಾನ್ ಸಮಾನ್ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ £Ãಡಿದ್ದು ಸ್ವಾಗತ. ಮೋದಿ ಅವರ ಭಾಷಣದಲ್ಲಿ ಎಸ್.£ಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರ ಬಗ್ಗೆ ಪ್ರಸ್ತಾಪಿಸಿರುವ ಅವರು ಬಿಜೆಪಿಯಲ್ಲಿ ಲಿಂಗಾಯತರಿಗೆ ಎಷ್ಟು ಗೌರವ ಕೊಟ್ಟಿದೆ ಎನ್ನುವುದು ಮನವರಿಕೆ ಮಾಡಿಕೊಳ್ಳಲಿ ಎಂದು ಆಮ್ ಆದ್ಮಿ ಮುಖಂಡ ರಾಜಕುಮಾರ ಟೋಪಣ್ಣವರ ಪ್ರಶ್ನಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಲಿಂಗಾಯತರ ನಾಯಕ ಎಂದು ಗುರುತಿಸಿಕೊಂಡವರು. ಅವರಿಗೆ ವಯಸ್ಸಿನ ನೆಪ ಹೇಳಿ ಯಡಿಯೂರಪ್ಪನವರಿಗೆ ಪೂರ್ಣ ಪ್ರಮಾಣದಲ್ಲಿ ಮುಖ್ಯಮಂತ್ರಿಯಾಗಿಸದೆ ಅವಮಾ£ಸಿದ್ದು ಕರ್ನಾಟಕದ ಜನತೆ ಮರೆತಿಲ್ಲ. ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ತಳಮಟ್ಟದಲ್ಲಿ ಸಂಘಟಿಸಿದ್ದು ಲಿಂಗಾಯತ ನಾಯಕ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುವಾಗ ಕಣ್ಣೀರು ಹಾಕಿದ್ದು ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು . ಅಲ್ಲದೆ ಯಡಿಯೂರಪ್ಪನವರಿಗೆ ವಯಸ್ಸಾಗಿದ್ದರೂ ಅವರನ್ನು ತೆಗೆದುಕೊಂಡು ಚುನಾವಣೆ ಎದುರಿಸುತ್ತಿರುವುದು ಎಷ್ಟು ಸರಿ ಎಂದು ಮೋದಿ ಮಾತಿಗೆ ತೀವಿದಿದ್ದಾರೆ.
ಪ್ರಧಾ£ ನರೇಂದ್ರ ಮೋದಿ ಅವರ ಮೇಲೆ ನಮಗೆ ಗೌರವ ಇದೆ. ಆದರೆ ಬೆಳಗಾವಿ ತಾಲೂಕಿನಲ್ಲಿರುವ ಮೂರು ಮತಕ್ಷೇತ್ರದಲ್ಲಿ ಬಿಜೆಪಿಯ ಲಿಂಗಾಯತ ನಾಯಕರಿಗೆ ಎಷ್ಟು ಜನರಿಗೆ ಸ್ಥಳೀಯ ಬಿಜೆಪಿ ಪಕ್ಷ ಗೌರವ ಕೊಟ್ಟಿದೆ ಎನ್ನುವುದು ಸ್ಪಷ್ಟಪಡಿಸಲಿ. ಲಿಂಗಾಯತರ ಮೇಲೆ ಗೌರವ ಇದ್ದರೆ ಬೆಳಗಾವಿ ತಾಲೂಕಿನ ಮೂರು ಮತಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ಕೊಡುತ್ತಾರೆಯೇ ಎಂದು ಟೋಪಣ್ಣವರ ಪ್ರಶ್ನಿಸಿದ್ದಾರೆ.
Gadi Kannadiga > Local News > ಬಿಜೆಪಿಯಲ್ಲಿ ಲಿಂಗಾಯತರಿಗೆ ಎಷ್ಟು ಗೌರವ ಕೊಟ್ಟಿದೆ : ಟೋಪಣ್ಣವರ