This is the title of the web page
This is the title of the web page

Please assign a menu to the primary menu location under menu

Local News

ಅಪಾರ ಜನಬೆಂಬಲವೇ ವಿಜಯಕ್ಕೆ ವರದಾನ: ಲಕ್ಷಿ÷್ಮÃ ಹೆಬ್ಬಾಳಕರ


ಬೆಳಗಾವಿ: ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಲಕ್ಷಿ÷್ಮÃ ಹೆಬ್ಬಾಳಕರ ಅವರು ಕುಮಾರಸ್ವಾಮಿ ಲೇಔಟ್, ಪೋಲಿಸ್ ಕಾಲೋನಿ, ಆಶ್ರಯ ಕಾಲೋನಿ ಹಾಗೂ ವಿವಿಧೆಡೆ ಪ್ರಚಾರ ಕೈಗೊಂಡು, ಜನರ ಬೆಂಬಲಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ಕಳೆದ ೫ ವರ್ಷಗಳ ಕಾಲ ಕ್ಷೇತ್ರಾದ್ಯಂತ ನೀವೆಲ್ಲರೂ ನನ್ನನ್ನು ಮನೆಯ ಮಗಳಂತೆ ಕಂಡಿದ್ದಿರಿ, ಪ್ರೀತಿ, ವಾತ್ಸಲ್ಯಗಳಿಂದ ಬರಮಾಡಿಕೊಂಡು, ಪ್ರತಿಯೊಂದು ಅಭಿವೃದ್ಧಿ ಕೆಲಸಗಳಲ್ಲಿ ಭಾಗಿಯಾಗಿ ನನ್ನನ್ನು ಹರಸಿ, ಆಶೀರ್ವದಿಸಿದ್ದಿರಿ. ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ಬೆಲೆ ಕಟ್ಟಲಾಗದು” ಎಂದರು. “ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು, ನಿಮ್ಮ ಆಶೀರ್ವಾದ ಅತ್ಯಗತ್ಯವಾಗಿದೆ. ಇನ್ನೆನು ಚುನಾವಣೆ ಹತ್ತಿರದಲ್ಲಿದೆ. ನಿಮ್ಮ ಬೆಂಬಲ ಯಾವತ್ತಿಗೂ ಕಾಂಗ್ರೆಸ್ ಪಕ್ಷದ ಮೇಲಿರಲಿ” ಎಂದು ವಿನಂತಿಸಿದರು.
ಸ್ಥಳೀಯ ಪ್ರಮುಖರು, ನಾಗರಿಕರು ಹಾಜರಿದ್ದರು.

 


Leave a Reply