ಬೆಳಗಾವಿ, ಆ.೧೯: ಹುಕ್ಕೇರಿ ಪುರಸಭೆ ಕುಂದು ಕೊರತೆ ನಿವಾರಣಾ ಸಮೀತಿಯನ್ನು (ಉಡಿievಚಿಟಿಛಿe ಖeಜಡಿessಚಿಟ ಅommiಣಣee) ರಚಿಸಬೇಕಾಗಿರುವದರಿಂದ ಅಧ್ಯಕ್ಷತೆಯನ್ನು ಒಳಗೋಂಡು ಎರಡು ಸದಸ್ಯರ ನೇಮಕಾತಿಗಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಅಧ್ಯಕ್ಷರ ಹುದ್ದೆಗೆ ನಿವೃತ್ತ ಸಿವಿಲ್ ನ್ಯಾಯಾಧೀಶರಾಗಿರಬೇಕು (ಖeಣiಡಿeಜ ಅiviಟ ಎuಜge) ಮತ್ತು ೬೫ ವರ್ಷದೊಳಗಿನ ವಯೋಮಾನದವರಾಗಿರಬೇಕು, ಸದಸ್ಯರ ಹುದ್ದಗೆ ಸ್ಥಳೀಯ ಪ್ರದೇಶದ ಕಳಂಕ ರಹಿತ ಸೇವಾ ದಾಖಲೆಯುಳ್ಳ ರಾಜ್ಯ ಸರ್ಕಾರದ ನಿವೃತ್ತ ‘ಎ’ ದರ್ಜೆ ಅಧಿಕಾರಿಯಾಗಿರತಕ್ಕದ್ದು, ೬೫ ವರ್ಷದೊಳಗಿನ ವಯೋಮಾನದವರಾಗಿರಬೇಕು.
ಸದಸ್ಯರ ಹುದ್ದೆಗೆ ಸ್ಥಳೀಯ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರವನ್ನು ಒಳಗೊಂಡ ಅನೌಪಚಾರಿಕ ಆರ್ಥಿಕ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತರಾಗಿರತಕ್ಕದ್ದು, ೬೫ ವರ್ಷದೊಳಗಿನ ವಯೋಮಾನದವರಾಗಿರಬೇಕು.
ಆಸ್ತಕರು ಸೆ. ೦೪ ೨೦೨೩ ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಹುಕ್ಕೇರಿ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಹುಕ್ಕೇರಿ ಪುರಸಭೆ ಕುಂದು ಕೊರತೆ ನಿವಾರಣಾ ಸಮೀತಿ ರಚನೆ: ಅಧ್ಯಕ್ಷ, ಸದಸ್ಯರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಹುಕ್ಕೇರಿ ಪುರಸಭೆ ಕುಂದು ಕೊರತೆ ನಿವಾರಣಾ ಸಮೀತಿ ರಚನೆ: ಅಧ್ಯಕ್ಷ, ಸದಸ್ಯರ ನೇಮಕಾತಿಗಾಗಿ ಅರ್ಜಿ ಆಹ್ವಾನ
Suresh19/08/2023
posted on