ಕೊಪ್ಪಳ: ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಿಶ್ವದಲ್ಲಿಯೇ ತನ್ನದೇ ಆದ ಘನತೆಯನ್ನು ಹೊಂದಿದೆ. ಮಾನವ ಕಲ್ಯಾಣವೇ ಅದರ ಧ್ಯೇಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಖೆಯ ಅಧ್ಯಕ್ಷರಾದ ಎಂ. ಸುಂದರೇಶಬಾಬು ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಖೆಯ ೨೦೨೧,೨೨-೨೨-೨೩ ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರತಿಯೊಬ್ಬರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯನ್ನು ಗೌರವಿಸಲೇಬೇಕು. ಸದಾ ಸಮಾಜಮುಖಿ ಕಾರ್ಯದಲ್ಲಿ ಅದು ಕಾರ್ಯಗತವಾಗಿರುತ್ತದೆ.
ಇಂಥ ಸಂಸ್ಥೆ ಕೊಪ್ಪಳದಲ್ಲಿಯೂ ಇಷ್ಟೊಂದು ಕಾರ್ಯನ್ಮೋಕವಾಗಿರುವುದು ಶ್ಲಾಘನೀಯವಾಗಿದೆ. ಇಲ್ಲಿಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯವನ್ನು ಮೆಚ್ಚಿ ನಾಲ್ಕು ಬಾರಿ ರಾಜ್ಯಪಾಲರ ಪುರಸ್ಕಾರ ಲಭಿಸಿರುವುದೇ ಅದರ ಸೇವೆಗೆ ಸಾಕ್ಷಿಯಾಗಿದೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಕೆ ಅತ್ಯುತ್ತಮ ಕಾರ್ಯವನ್ನು ನಿಭಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ತನ್ನದೇ ಸ್ವಂತ ಕಟ್ಟಡವನ್ನು ಹೊಂದುವುದಕ್ಕಾಗಿ ಈಗಾಗಲೇ ನಿರ್ಮಾಣ ಕಾರ್ಯ ನಡೆದಿದೆ. ಅಲ್ಲಿ ಬ್ಲಡ್ ಬ್ಯಾಂಕ್, ಸ್ಕಿನ್ ಬ್ಯಾಂಕ್ , ಬಾಡಿ ಬ್ಯಾಂಕ್, ಐ ಬ್ಯಾಂಕ್ ಸೇರಿದಂತೆ ಮೊದಲಾದ ಉನ್ನತ ಸೇವೆಯನ್ನು ಮಾಡುವ ಸಿದ್ಧತೆಯಲ್ಲಿರುವುದು ಶ್ಲಾಘನೀಯವಾಗಿದೆ. ಇಂಥ ಕಾರ್ಯಕ್ಕೆ ಜಿಲ್ಲಾಡಳಿತ ಸದಾ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ಭಾರೆಕ್ರಾ ಸಂಸ್ಥೆಯ ಉಪಾಧ್ಯಕ್ಷೆ ಫೌಜಿಯಾ ತರುನ್ನುಮ್ಮ ಅವರು ವಾರ್ಷಿಕ ವರದಿಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.ಕೊಪ್ಪಳದಲ್ಲಿ ಈಗಾಗಲೇ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅತ್ಯುತ್ತಮ ಕಾರ್ಯವನ್ನು ಮಾಡುತ್ತಿದೆ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿರುತ್ತದೆ. ಈಗ ಜಿಲ್ಲೆಯ ಅಂಗಾಂಗ ದಾನ ಜಾಗೃತಿ ನಡೆಯುತ್ತಿದ್ದು, ಇದರ ನೇತೃತ್ವವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಹಿಸಿಕೊಂಡು, ಉತ್ತಮ ಸಾಧನೆ ಮಾಡಲಿ ಎಂದು ಆಶಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಚೇರಮನ್ ಸೋಮರಡ್ಡಿ ಅಳವಂಡಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ ಅವರು ವಾರ್ಷಿಕ ವರದಿಯನ್ನು ಓದಿದರು, ಖಜಾಂಚಿ ಸುಧೀರ ಅವರಾದ ಎರಡು ವರ್ಷಗಳ ಲೆಕ್ಕಪತ್ರ ಮಾಹಿತಿ ನೀಡಿ, ಸಭೆಯ ಸಮ್ಮತಿ ಪಡೆದರು.
ಅಭಿಷೇಕ ಸಜ್ಜನ ಪ್ರಾರ್ಥನಾಗೀತೆ ಹಾಡಿದರು. ಕಾರ್ಯಕ್ರಮವನ್ನು ಡಾ. ಸಿ.ಎಸ್. ಕರಮುಡಿ, ಡಾ. ಶಿವನಗೌಡ ಹಾಗೂ ಡಾ. ಮಂಜುನಾಥ ಸಜ್ಜನ ಅವರು ನಿರ್ವಹಿಸಿದರು.ಕೊನೆಯಲ್ಲಿ ಡಾ. ಗವಿಸಿದ್ದನಗೌಡ ಅವರು ವಂದನಾರ್ಪಣೆ ಮಾಡಿದರು.ಸನ್ಮಾನ ಃ- ಅತ್ಯಧಿಕ ರಕ್ತದಾನ ಮಾಡಿದವರನ್ನು, ಅತ್ಯಧಿಕ ರಕ್ತದಾನ ಶಿಬಿರಗಳನ್ನು ಏರ್ಪಡಿಸಿದವರನ್ನು ಹಾಗೂ ನೇತ್ರದಾನ ಮಾಡಿದ ಕುಟುಂಬದವರನ್ನು ಸನ್ಮಾನಿಸಲಾಯಿತು.
Gadi Kannadiga > State > ಮಾನವೀಯ ಕಲ್ಯಾಣವೇ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯ ಃ ಸುಂದರೇಶಬಾಬು
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023