This is the title of the web page
This is the title of the web page

Please assign a menu to the primary menu location under menu

Local News

ಮಾನವೀಯ ಮೌಲ್ಯಗಳಿದ್ದಲ್ಲಿ ಸಾಧನೆ ಸಾಧ್ಯ: ಲಕ್ಷಿ÷್ಮÃ ಹೆಬ್ಬಾಳಕರ್


ಬೆಳಗಾವಿ – ಮನುಷ್ಯನಿಗೆ ಮಾನವೀಯ ಮೌಲ್ಯಗಳು ಹಾಗೂ ಮನುಷ್ಯತ್ವದ ಗುಣಗಳಿದ್ದಲ್ಲಿ ಸಾಧನೆಗಳನ್ನು ಮಾಡಬಹುದು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ್ ಅಭಿಪ್ರಾಯಪಟ್ಟರು.

 

 

ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ತಾರೀಹಾಳ ಗ್ರಾಮದ ಶ್ರೀ ಅಡವಿ ಸಿದ್ದೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಮ್ಮಾಜಿ ಫೌಂಡೇಷನ್‌ನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕಿರುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಎಂದು ಹೇಳಿದರು.

 

 

ಒಬ್ಬರಿಗೊಬ್ಬರು ಸಹನೆ, ಸಹಕಾರದ ಮನೋಭಾವನೆಯೊಂದಿಗೆ ಇತರರ ಏಳಿಗೆಗಾಗಿ ಶ್ರಮಿಸಿ, ಪರಸ್ಪರ ಹೊಂದಾಣಿಕೆಯಿಂದ ನಡೆಯುವುದು ಅತ್ಯವಶ್ಯಕ ಎಂದರು.

ಅಮ್ಮಾಜಿ ಫೌಂಡೇಶನ್ ಎತ್ತರಕ್ಕೆ ಬೆಳೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.

 

ಈ ಸಂದರ್ಭದಲ್ಲಿ ಅಡವಿ ಸಿದ್ದೇಶ್ವರ ಮಠದ ಶ್ರೀಗಳು, ಗ್ರಾಮದ ಹಿರಿಯರು, ಸೂರ್ಯಾಜಿ ಜಾಧವ್, ಅಡಿವೆಪ್ಪ ರಾಗೀಪಾಟೀಲ, ಪ್ರಮೋದ್ ಜಾಧವ್, ಸಾಂವಕ್ಕ ನಾಯಕ, ನಾಗಪ್ಪ ತಳವಾರ, ಗಂಗವ್ವ ಪೂಜಾರಿ, ಸವಿತಾ ಕೋಲಕಾರ, ಸಿದ್ದು ಇಟಗಿ, ನಾಗರಾಜ ಮಾಲಗತ್ತಿ, ಬಸವರಾಜ ನಾಯಕ, ಸಿದ್ದಯ್ಯ ಅಡವಿಸಿದ್ದೇಶ್ವರಮಠ, ಅಮ್ಮಾಜಿ ಫೌಂಡೇಶನ್ ಅಧ್ಯಕ್ಷ ರಮೇಶ ಝಳಕನ್ನವರ, ಅಕ್ಷತಾ ಝಳಕನ್ನವರ, ಶೋಭಾ ಬಡಿಗೇರ, ಸುಧಾ ರಾಗೀಪಾಟೀಲ, ಕೃಷ್ಣ ಭೋಮನ್ನವರ, ಲಕ್ಷಿ÷್ಮÃ ತಾಯಿ ಭೋಮನ್ನವರ, ಗಂಗಾಧರ ಬಡಿಗೇರ, ಪಿಡಿಓ ವಿಜಯಲಕ್ಷಿ÷್ಮ ತೆಗ್ಗಿ, ಪಾಂಡು ಖನಗಾಂವ್ಕರ, ಸಿದ್ದಯ್ಯ ಪೂಜಾರ, ಸ್ವಪ್ನಿಲ್ ಜಾಧವ ಮತ್ತಿತರ ಗಣ್ಯರು, ಊರ ಹಿರಿಯರು ಉಪಸ್ಥಿತರಿದ್ದರು.


Gadi Kannadiga

Leave a Reply