ಬೆಳಗಾವಿ; ನಾನು ನಮ್ಮವರೊಂದಿಗೆ ಫೌಂಡೇಶನ್ ನ ನಾ.ನ ಸಾಹಿತ್ಯ ಬಳಗದ ಉದ್ಘಾಟನಾ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಗರದ ಖಾಸಗಿ ಹೋಟೆಲ್ ಒಂದರ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಜರುಗಿತು.
ಈ ಕಾರ್ಯಕ್ರಮಕ್ಕೆ ಬೆಂಗಳೂರಿಂದ, ನಾಡು ಕಂಡ ಹೆಸರಾಂತ ಸಾಹಿತಿ, ವಿಮರ್ಶಕಿ, ಡಾ. ಆಶಾದೇವಿಯವರು ಮುಖ್ಯ ಅತಿಥಿಗಳಾಗಿ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ವಿಮರ್ಶೆ ಕೂಡ ಒಂದು ಪ್ರಭಾವಕಾರಿ ಪ್ರಕಾರ ಆದರೆ ಈ ಕ್ಷೇತ್ರದಲ್ಲಿ ಸಾಹಿತಿಗಳು ಬೆರಳೆಣಿಕೆಯಷ್ಟು ಇದ್ದಾರೆ.. ಕಾವ್ಯ ರಚನೆಗಿಂತ ವಿಮರ್ಶೆ ಕಠಿಣವಾದದ್ದು, ಪ್ರಾಮಾಣಿಕತೆ ಮತ್ತು ತೀಕ್ಷ್ಣ ಓದು ವಿಮರ್ಶೆಗೆ ತಳಹದಿ ಎಂದು ಹೇಳಿದರು.
ಇದೆ ಸಮಯದಲ್ಲಿ ನಾ.ನ ಬಳಗದ ಸಾಹಿತಿಗಳಾದ ಇಂದಿರಾ ಮೊಟೆಬೆನ್ನೂರ್, ಹಾಗೂ ಪ್ರಭಾ ಪಾಟೀಲ್ ಅವರ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಗಡಿನಾಡಲ್ಲಿ ವಿಶಿಷ್ಟ ಮತ್ತು ಅರ್ಥಪೂರ್ಣ ಸಾಹಿತ್ಯಿಕ ಕಾರ್ಯಕ್ರಮಗಳ ಆಯೋಜನೆಯ ಉದ್ದೇಶಗಳನ್ನು ಹೊತ್ತು ನಾ. ನ ಸಾಹಿತ್ಯ ವೇದಿಕೆ ಅನಾವರಣಗೊಂಡಿದೆ ಎಂದು ನಾನು ನಮ್ಮವರೊಂದಿಗೆ ಫೌಂಡೇಶನ್ ನ ಸಂಸ್ಥಾಪಕಿ ಸರ್ವಮಂಗಳಾ ಅರಳಿಮಟ್ಟಿಯವರು ಹೇಳಿದರು.
ಈ ಸಂವಾದ ಕಾರ್ಯಕ್ರಮದಲ್ಲಿ ನಾ. ನ ಫೌಂಡೇಶನ್ ಉಪಾಧ್ಯಕ್ಷೆ ಶ್ರೀಮತಿ ಭಾಗ್ಯಶ್ರೀ ಬೈರಪ್ಪನವರ್, ಕಾರ್ಯದರ್ಶಿ ಮಾಧುರಿ ಹಿರೇಮಠ, ಲಲಿತಾ ಹೂಗಾರ್, ವಿಜಯಲಕ್ಷ್ಮಿ ಪಾಟೀಲ್, ನೀಲಂ ಗುತ್ತಿಗೋಳಿ, ಜ್ಯೋತಿ ಬದಾಮಿ, ಶೋಭಾ ನಾಯಕ್, ಸುಧಾ ಪಾಟೀಲ್, ಸುನಂದಾ ಎಮ್ಮಿ, ಸುಮಾ ಕಿತ್ತುರ್, ವಿದ್ಯಾ ಹುಂಡೆಕರ್ , ಭಾರತಿ ಸಂಕಣ್ಮವರ್, ಒಳಗೊಂಡಂತೆ ಅನೇಕ ಮಹಿಳಾ ಸಾಹಿತಿಗಳು ಉಪಸ್ಥಿತರಿದ್ದರು..