This is the title of the web page
This is the title of the web page

Please assign a menu to the primary menu location under menu

Local News

ಶೇ.೯೮ರಷ್ಟು ಭರವಸೆ ಈಡೇರಿಸಿದ್ದೇನೆ, ಇನ್ನಷ್ಟು ಅಭಿವೃದ್ಧಿಗೆ ಕೈ ಜೋಡಿಸಿ: ಲಕ್ಷಿ÷್ಮÃ ಹೆಬ್ಬಾಳಕರ್ ಮನವಿ


ಬೆಳಗಾವಿ: ೫ ವರ್ಷದ ಹಿಂದೆ, ೨೦೧೮ರ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳಲ್ಲಿ ಶೇ.೯೮ರಷ್ಟು ಈಡೇರಿಸಿದ್ದೇನೆ. ವಿರೋಧ ಪಕ್ಷದ ಶಾಸಕಿಯಾಗಿದ್ದರಿಂದ ೨ ಭರವಸೆಗಳು ಮಾತ್ರ ಬಾಕಿ ಉಳಿದಿದ್ದು, ಈ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು ಅವುಗಳನ್ನೂ ಮೊದಲ ಆದ್ಯತೆಯ ಮೇಲೆ ಈಡೇರಿಸುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.
ಮೇ ೧೦ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಪ್ರಯುಕ್ತ ಕಂಗ್ರಾಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಅವರು ಪ್ರಚಾರ ನಡೆಸುತ್ತಿದ್ದರು. ಕ್ಷೇತ್ರ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಿಂದುಳಿದಿದ್ದರಿಂದ ಕಳೆದ ಬಾರಿ ಮೂಲಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿದ್ದೇನೆ. ರಸ್ತೆ, ಚರಂಡಿ, ಕುಡಿಯುವ ನೀರು, ಶಾಲೆ, ದೇವಸ್ಥಾನ, ಸಮುದಾಯ ಭವನಗಳ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಇದರ ಜೊತೆಗೆ, ಕಾಲೇಜು ಮತ್ತು ಆಸ್ಪತ್ರೆ ಕಟ್ಟಿಸುವ ಯೋಜನೆಯನ್ನೂ ನಾನು ಹಾಕಿಕೊಂಡಿದ್ದೆ. ಆದರೆ ನಮ್ಮ ಸರಕಾರವಿಲ್ಲದ್ದರಿಂದ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅವುಗಳನ್ನು ಈಡೇರಿಸುತ್ತೇನೆ ಎಂದು ಅವರು ತಿಳಿಸಿದರು.
ಜಲಸಂಪನ್ಮೂಲ ಇಲಾಖೆಯಿಂದ ೬೯೫.೮೧ ಕೇಟಿ ರೂ., ಸಣ್ಣ ನೀರಾವರಿ ಇಲಾಖೆಯಿಂದ ೩೦೯೨ ಲಕ್ಷ ರೂ., ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ೫೧೪೨.೭೪ ಲಕ್ಷ ರೂ., ಲೋಕೋಪಯೋಗಿ ಇಲಾಖೆಯಿಂದ ೧೬೯೪.೩೫ ಲಕ್ಷರೂ., ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ೧೦೦ ಲಕ್ಷ ರೂ., ಕನ್ನಡ ಮತ್ತು ಸಂಸ್ಕöÈತಿ ಇಲಾಖಿಯಿಂದ ೫೦ ಲಕ್ಷ ರೂ., ಪ್ರವಾಸೋದ್ಯಮ ಇಲಾಖೆಯಿಂದ ೩೦೦ ಲಕ್ಷ ರೂ., ಹಿಂದುಳಿದ ವರ್ಗಗಳ ಇಲಾಖಿಯಂದ ೧೦೦ ಲಕ್ಷ ರೂ., ಶಾಸಕರ ನಿಧಿಯಿಂದ ೭೯೨ ಲಕ್ಷ ರೂ., ಗ್ರಾಮೀಣಾಭಿವೃದ್ಧಿ ನಿಗಮದಿಂದ ೮೦೦ ಲಕ್ಷ ರೂ., ಮುಜರಾಯಿ ಇಲಾಖೆಯಿಂದ ೯೬೦ ಲಕ್ಷ ರೂ., ರಸ್ತೆ, ದೇವಸ್ಥಾನ, ಬ್ರಿಡ್ಜ್ ಕಂ ಬಾಂದಾರ, ಕೆರೆಗಳ ಅಭಿವೃದ್ಧಿ, ಸರಕಾರಿ ಶಾಲೆಗಳ ಕೊಠಡಿ ನಿರ್ಮಾಣ – ದುರಸ್ತಿ, ಶಾಲಾ ಮೈದಾನಗಳ ಅಭಿವೃದ್ಧಿಗೆ ವಿಶೇಷ ಅನುದಾನ ತಂದಿದ್ದೇನೆ ಎಂದು ಅವರು ತಿಳಿಸಿದರು.
ಕೊರೋನಾ, ಪ್ರವಾಹದಂತಹ ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಮನೆ ಮಗಳಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಉಚಿತ ಅಂಬುಲೆನ್ಸ್ ಒದಗಿಸಿದ್ದೇನೆ. ಔಷಧ, ಆಹಾರದ ಕಿಟ್ ಗಳನ್ನು ವಿತರಿಸಿದ್ದೇನೆ. ಗ್ರಾಮೀಣ ಮಕ್ಕಳಿಗೆ, ಯುವಕರಿಗೆ ಜಿಮ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಒದಗಿಸಿದ್ದೇನೆ. ಸರಕಾರದ ಅನುದಾನವಲ್ಲದೆ ಲಕ್ಷಿ÷್ಮÃ ತಾಯಿ ಫೌಂಡೇಶನ್ ಮೂಲಕ ಸ್ವಂತ ಹಣವನ್ನೂ ಒದಗಿಸಿ ಅಗತ್ಯ ಕೆಲಸ, ಬಡವರ ಬೇಡಿಕೆಗಳಿಗೆ ಸ್ಪಂದಿಸಿದ್ದೇನೆ ಎಂದು ಲಕ್ಷಿ÷್ಮÃ ಹೆಬ್ಬಾಳಕರ್ ವಿವರಿಸಿದರು.
ಗ್ರಾಮೀಣ ಬಸ್ ನಿಲ್ದಾಣ, ವಾಲ್ಮೀಕಿ ಭವನ, ಮರಾಠಾ ಭವನ, ಅಂಬೇಡ್ಕರ್ ಭವನ, ೧೦೩ ದೇವಸ್ಥಾನಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ, ಜೈನ ಬಸದಿ, ಮಸೀದಿ, ಚರ್ಚ್ ಗಳ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದೇನೆ. ರಾಜಹಂಸಗಡದಲ್ಲಿ ದೇಶದಲ್ಲೇ ಬೃಹತ್ತಾದ, ಅಪರೂಪದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಮಾಡಿ, ಕೋಟೆಯ ಅಭಿವೃದ್ಧಿ ಮಾಡಿಸಿದ್ದೇನೆ. ಮಕ್ಕಳ ವಿದ್ಯಾಭ್ಯಾಸಗಳಿಗೆ ನೆರವಾಗಿದ್ದೇನೆ ಎಂದು ತಿಳಿಸಿದರು.
ವಿರೋಧ ಪಕ್ಷದ ಶಾಸಕಿಯಾಗಿ, ಅದರಲ್ಲೂ ಮೊದಲ ಬಾರಿಗೆ ಶಾಸಕರಾಗಿ ಇಷ್ಟೊಂದು ಅನುದಾನ ತರುವುದು ಸುಲಭವಿರಲಿಲ್ಲ. ಆದರೆ ಯಾರ್ಯಾರದ್ದೋ ಕಾಲು ಹಿಡಿದು, ಏನೆಲ್ಲ ಹೋರಾಟ ಮಾಡಿ ಕೆಲಸ ತಂದಿದ್ದೇನೆ. ಈ ಬಾರಿ ನಮ್ಮದೇ ಸರಕಾರ ಬರುವುದರಿಂದ ಹೆಚ್ಚಿನ ಕೆಲಸ ತರಲು ಸಾಧ್ಯವಾಗುತ್ತದೆ ಎನ್ನುವ ವಿಶ್ವಾಸವಿದೆ. ವಿಶೇಷವಾಗಿ ಯುವಕರಿಗೆ ಉದ್ಯೋಗ ಒದಗಿಸುವಂತಹ ಯೋಜನೆಗಳನ್ನು ತರುತ್ತೇನೆ. ಉನ್ನತ ಶಿಕ್ಷಣ ಗ್ರಾಮೀಣ ಕ್ಷೇತ್ರದಲ್ಲೇ ಸಿಗುವಂತೆ ಮಾಡುವ ಸಂಕಲ್ಪ ಮಾಡಿದ್ದೇನೆ. ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ಬ್ಯಾಲೆಟ್ ಯುನಿಟ್ ನಲ್ಲಿ ೪ನೇ ನಂಬರ್ ನಲ್ಲಿರುವ ನನ್ನ ಚುನಾವಣೆ ಚಿಹ್ನೆಯಾಗಿರುವ ಹಸ್ತದ ಗುರುತಿನ ಮುಂದಿರುವ ಬಟನ್ ಒತ್ತುವ ಮೂಲಕ ನನ್ನನ್ನು ಬೆಂಬಲಿಸಿ, ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಯುವಕ ಸಂಘಗಳು, ಮಹಿಳಾ ಮಂಡಳಗಳು, ಕ್ರೀಡಾ ಹಾಗೂ ಸಾಂಸ್ಕöÈತಿಕ ಸಂಘಗಳು ಲಕ್ಷಿ÷್ಮÃ ಹೆಬ್ಬಾಳಕರ್ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿದವು. ನಿಮ್ಮ ಪರವಾಗಿ ನಾವೇ ಪ್ರಚಾರ ಕೈಗೊಂಡು ಮತ ಹಾಕಿಸುತ್ತೇವೆ. ಕಳೆದಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.


Leave a Reply