ಜಾರಕಿಹೋಳಿ ಸಹೋದರ ಸಹಕಾರ ಬೇಕಾಗಿದ್ದರೆ ,ಗೋಕಾಕ ಜಿಲ್ಲೆ ಮಾಡಿ, ಇಲ್ಲದಿದ್ದರೆ ರಕ್ತ ಕ್ರಾಂತಿ ಆಗುತ್ತದೆ ಎಂದು ಗೋಕಾಕದ ಬಸವೇಶ್ವರ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಮಾನವ ಸರಪಳಿ ನಿರ್ಮಿಸಿ ನಡೆಸಿದ ಗೋಕಾಕ ಜಿಲ್ಲೆಗಾಗಿ ಅಗ್ರಹಿಸಿ ಮಾಡುತ್ತಿರುವ ಹೋರಾಟದಲ್ಲಿ ಗೋಕಾಕ ಜಿಲ್ಲಾ ಹೊರಾಟ ಸಮಿತಿಯ ಸದಸ್ಯರಾದ ಹಿರಿಯ ಮುಖಂಡರಾದ ಎಸ್,ಆರ್,ಬೋವಿ ಇವರು ಮಾತನಾಡಿ ಜಾರಕಿಹೋಳಿಯವರ ಸಹಕಾರ ರಾಜ್ಯಕ್ಕೆ ಅವಶ್ಯವಿದೆ.
ಅದಕ್ಕಾಗಿ ಅವರ ಸಹಕಾರ ನಿಮಗೆ ಬೇಕಾದರೆ ಮೊದಲು ಗೋಕಾಕ ಜಿಲ್ಲೆಯನ್ನಾಗಿ ಘೋಷಣೆ ಮಾಡಿ ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಕಷ್ಟ ಅನುಬವಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿಯವರಿಗೆ ಹೋರಾಟದ ಮೂಲಕ ಎಚ್ಚರಿಸಿದರು.ಜೆ,ಎಚ್, ಪಟೇಲರು ಮುಖ್ಯ ಮಂತ್ರಿ ಇದ್ದಾಗ ಗೋಕಾಕ ಮತ್ತು ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಿದ್ದರು, ಆದರೆ ಬೆಳಗಾವಿ ಜಿಲ್ಲೆ ವಿಭಜನೆ ಬೇಡಾ ಅನ್ನುವ ಉದ್ದೇಶದಿಂದ ಗೋಕಾಕದ ಜನತೆ ಸುಮ್ಮನಿದ್ದೇವು,
ಆದರೆ ಕೆಲವು ದಿನಗಳ ಹಿಂದೆ ಗೋಕಾಕ ಜಿಲ್ಲೆ ಮಾಡಿದರೆ ಉತ್ತಮ ಎಂದು ಹೇಳಿದ ಸಚಿವ ಕತ್ತಿಯವರು ಇವತ್ತು ಯಾವ ಉದ್ದೇಶದಿಂದ ಗೋಕಾಕ ಬದಲಾಗಿ ಬೈಲಹೊಂಗಲ ಜಿಲ್ಲೆ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ ಎಂದು ಸಚಿವರ ವಿರುದ್ದ ಹರಿಹಾಯ್ದರು.ಸುಮಾರು ಒಂದು ಗಂಟೆಯವರೆಗೆ ಈ ಹೊರಾಟದಿಂದ ಟ್ರಾಪಿಕ್ ಜಾಮ್ ಆಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸಂಚಾರರು ಪರದಾಡುವ ಪರಿಸ್ಥಿತಿ ಉಂಟಾಗುತ್ತು.
ಇನ್ನು ಹೋರಾಟದ ನೇತೃತ್ವವನ್ನು ಗೋಕಾಕದ ಶೂನ್ಯ ಸಂಪಾದನಮಠದ ಶ್ರಿಗಳು,ನ್ಯಾಯವಾದಿಗಳ ಸಂಘದ ಸದಸ್ಯರು ಹಾಗೂ ವಿವಿದ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.