This is the title of the web page
This is the title of the web page

Please assign a menu to the primary menu location under menu

Local News

ಧರ್ಮಕಲಹ ನಡೆದರೆ ದೇಶ ಉದ್ದಾರ ಆಗೋಲ್ಲ.. ಕಾಂಗ್ರೆಸ್ ಯುವ ಘಟಕ


ಬೆಳಗಾವಿ ನಗರದಲ್ಲಿ ಇಂದು ಜಿಲ್ಲಾ ಯುವ ಕಾಂಗ್ರೆಸ್ಸಿನ ಪದಾಧಿಕಾರಿಗಳು ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಲ ಪದಾಧಿಕಾರಿಗಳು, ಬಿಜೆಪಿ ಸರ್ಕಾರದ ಜನವಿರೋಧಿ, ಅಮಾನವೀಯ ದುರಾಡಳಿತದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ಸಿನ ಅಧ್ಯಕ್ಷರಾದ ಯಲ್ಲಪ್ಪ ಶಿಂಘೆ ಮಾತನಾಡುತ್ತಾ, ಕಾಂಗ್ರೆಸ್ ಇತಿಹಾಸ ಅಂದ್ರೆ ಅದು ದೇಶದ ಇತಿಹಾಸ, ಕಾಂಗ್ರೆಸ್ ದೇಶಕ್ಕಾಗಿ ಮಾಡಿದ ಕೆಲಸವನ್ನು ಮರೆಮಾಚುವ ಕೆಲಸವನ್ನು ಬಿಜೆಪಿ ಮಾಡ್ತಾ ಇದೆ.

ಎಲ್ಲಿ ಧರ್ಮಧರ್ಮಗಳ ಮಧ್ಯ ಕೋಮುಗಲಭೆ ಇರುತ್ತೋ ಆ ದೇಶ ಎಂದೂ ಉದ್ದಾರ ಆಗೋಲ್ಲ,, ಅದಕ್ಕಾಗಿ ದೇಶದ ಒಳಿತಿಗಾಗಿ ಯುವಕರೆಲ್ಲರೂ ಈ ದುರಾಡಳಿತದ ವಿರುದ್ಧ ದ್ವನಿ ಎತ್ತಬೇಕು.

ನಾವು ಕೂಡ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ, ಶ್ರೀನಿವಾಸ, ಹಾಗೂ ನಲಪಾಡ ಅವರ ನೇತೃತ್ವದಲ್ಲಿ ಈ ದುರಾಡಳಿತದ ವಿರುದ್ಧ ಜನಜಾಗೃತಿ ಮಾಡ್ತಾ ಇದೀವಿ ಎಂದರು. ಇನ್ನು ರಾಜ್ಯ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಂಕಲಗಿ ಮಾತನಾಡಿ,, ಬಿಜೆಪಿಯ ವಕ್ತಾರ ಆನಂದ ಪಿ ರಾಜೀವ ಮಾತಿಗೆ ಉತ್ತರಿಸುತ್ತಾ  ಶಾಸಕರು ಮೊದಲು ಪಿಎಸ್ಐ ಆಗಿದ್ದು, ತಾವು ಯಾವ ಪಠ್ಯ ಓದಿ ಪಿಎಸಐ ಆಗಿದ್ದಿರಾ,, ಯಾವ ಇತಿಹಾಸ ಓದಿ ನೀವು ಎಕ್ಸಾಮ್ ಬರೆದು ಪಿಎಸ್ಐ ಆಗಿದ್ದು? ಅದು ಸ್ವಲ್ಪ ನಿಮಗೆ ಅರಿವಿರಲಿ.

ಬಿಜೆಪಿ ಅವರು ಎಲ್ಲೆಲ್ಲಿ ಪೇಲ್ ಆಗುವರೋ ಅಲ್ಲಲ್ಲಿ ಜನರನ್ನು ದಿಕ್ಕು ತಪ್ಪಿಸುವ ಇಂತಾ ಹೀನ ಕೆಲಸ ಮಾಡುವರು,,

ಬಿಜೆಪಿ ಶಾಸಕರು ಇದನ್ನು ಅವರ ಮನಸಾರೆ ಹೇಳಿದ್ದಾರೋ ಅಥವಾ ಬಿಜೆಪಿ ಮುಖಂಡರು ಹೀಗೆ ಹೇಳು ಅಂತಾ ಕೀ ಕೊಟ್ಟು ಆಡಿಸ್ತಿದಾರೋ ಗೊತ್ತಿಲ್ಲಾ,, ಯಾಕಂದ್ರೆ ಪ್ರೆಸ್ ಮೀಟದಲ್ಲಿ ಮುಂದೆ ಏನೋ ನೋಡಿಕೊಂಡು ಓದಿದಂತೆ ಇತ್ತು ಅದಕ್ಕೆ, ಎಂದು ತಿರುಗೇಟು ನೀಡಿದರು.

ಮೊದಲು ಅವರು ತಮ್ಮ ಕ್ಷೇತ್ರದ ಸಮಸ್ಯೆಗಳ ಪರಿಹಾರ ಮಾಡಲಿ, ಬರಿ ಮಾತಿಂದ ಮರಳು ಮಾಡಬೇಡಿ, ಜನ ಬುದ್ಧಿವಂತರಾಗಿದ್ದಾರೆ, ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾರ್ತಿಕ ಪಾಟೀಲ್, ಕಾರ್ಮಿಕ ಘಟಕದ ಅಧ್ಯಕ್ಷ ಮಂಜು ಕಾಂಬ್ಳೆ, ಪಕ್ಷದ ಪದಾಧಿಕಾರಿಗಳು ಭಾಗಿಯಾಗಿದ್ದರು.


Gadi Kannadiga

Leave a Reply