This is the title of the web page
This is the title of the web page

Please assign a menu to the primary menu location under menu

Local News

ಬೇಡಿಕೆ ಈಡೇರದಿದ್ದರೆ ಸುವರ್ಣ ಸೌಧ ಮುತ್ತಿಗೆ : ಪಿರೋಜಿ


ಮೂಡಲಗಿ : ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಈಗಾಗಲೇ ಸಾಕಷ್ಟು ಹೋರಾಟ ಹಮ್ಮಿಕೊಳ್ಳಲಾಗಿದ್ದು, ಡಿ.೧೯ರಂದು ಸಿಎಂ ಬಸವರಾಜ ಬೊಮ್ಮಾಯಿ ನಮ್ಮ ಬೇಡಿಕೆ ಈಡೇರಿಸದೇ ಹೋದರೆ ಡಿ.೨೨ರಂದು ೨೫ ಲಕ್ಷ ಜನರನ್ನು ಸೇರಿಸಿ ಬೆಳಗಾವಿಯ ಸುವರ್ಣ ವಿಧಾನ ಸೌಧವನ್ನು ಮುತ್ತಿಗೆ ಹಾಕಲಾಗುವುದು ಎಂದು ಪಂಚಮಸಾಲಿ ಸಂಘಟನೆಯ ಬೆಳಗಾವಿ ಜಿಲ್ಲಾಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಧುವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಬೃಹತ ಪಾದಯಾತ್ರೆ ಮೂಲಕ ಆರಂಭವಾದ ಹೋರಾಟ ಅನೇಕ ರೀತಿಯಲ್ಲಿ ಸಾಕಷ್ಟು ಹೋರಾಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಹಿನ್ನೆಲೆ ಹೋರಾಟಗಳನ್ನು ಕೈ ಬಿಡಲಾಗಿತ್ತು, ಇದೀಗ ಬೆಳಗಾವಿ ಅಧಿವೇಶನ ವೇಳೆ ನಮ್ಮ ಸಮಾಜದ ಬೇಡಿಕೆ ಈಡೇರಿಸಬೇಕು. ಇಲ್ಲವಾದರಲ್ಲಿ ಸುವರ್ಣ ವಿಧಾನ ಸೌಧವನ್ನು ಮುತ್ತಿಗೆ ಹಾಕುವುದು ಅನಿವಾರ್ಯ ಹಾಗೂ ಹೋರಾಟಕ್ಕೆ ಬರುವ ಪಂಚಮಸಾಲಿಗಳು ತಮ್ಮ ತಮ್ಮ ಮನೆಗಳಿಂದ ೨೧ ರೋಟ್ಟಿ, ಚಟ್ನಿ ತೆಗೆದುಕೊಂಡು ಹೋರಾಟಕ್ಕೆ ಬರುವಂತೆ ಸಮಾಜ ಬಂಧುಗಳಿಗೆ ಮನವಿ ಮಾಡಲಾಗಿದ್ದು, ಹೋರಾಟದ ಸಂದರ್ಭದಲ್ಲಿ ಸರ್ಕಾರದಿಂದ ನೀಡುವ ಯಾವುದೇ ಸೌಲಭ್ಯಗಳನ್ನು ತೆಗೆದುಕೊಳ್ಳದೇ ನಮ್ಮ ರೋಟ್ಟಿ ನಮ್ಮ ಹಾಸಿಗೆ ಎಂಬ ಉದ್ದೇಶದಿಂದ ಹೋರಾಟ ಮಾಡಲಾಗುವುದು ಎಂದರು.
ಮಾತನಾಡಿ, ಬೆಳಗಾವಿ ಜಿಲ್ಲೆಯೊಂದರಲ್ಲೇ ಸುಮಾರು ೧೨ ಲಕ್ಷ ಪಂಚಮಸಾಲಿಗಳು ಇರುವುದರಿಂದ ನಮ್ಮ ಸಮಾಜದ ಕಡೆಯ ಹೋರಾಟಕ್ಕೆ ಜಿಲ್ಲೆಯಲ್ಲಿ ಇರುವ ಪತ್ರಿಯೊಬ್ಬ ಪಂಚಮಸಾಲಿಗಳು ಹೋರಾಟದಲ್ಲಿ ಭಾಗವಹಿಸಿ, ಬೇರೆ ಜಿಲ್ಲೆಗಳಿಂದ ಬರುವಂತ ನಮ್ಮ ಪಂಚಮಸಾಲಿಗಳಿಗೆ ನಮ್ಮ ಉತ್ತರ ಕರ್ನಾಟಕದ ರೋಟ್ಟಿ ಬುತ್ತಿಯನ್ನು ನೀಡಿ ನಮ್ಮ ಬಾಂಧ್ಯವವನ್ನು ಬೆಸೆಯೋಣ. ಎಲ್ಲರೂ ಸೇರಿ ಒಗ್ಗಟಿನಿಂದ ಹೋರಾಟ ಮಾಡಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸೋಣ. ಹಾಗೊಂದು ವೇಳೆ ಬೊಮ್ಮಾಯಿ ಅವರು ಡಿ.೧೯ರೊಳಗೆ ಬೇಡಿಕೆ ಈಡೇರಿಇದರೆ ಹೋರಾಟದ ಬದಲಾಗಿ ಅದೇ ೨೫ ಲಕ್ಷ ಜನರ ಸಮ್ಮುಖದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಗೌರವಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮೂಡಲಗಿ ತಾಲೂಕಾ ಯುವ ಘಟಕ ಅಧ್ಯಕ್ಷ ಸಂಗಮೇಶ ಕೌಜಲಗಿ, ಸಮಾಜದ ಅರಭಾವಿ ಮತಕ್ಷೇತ್ರದ ಕಾರ್ಯಾಧ್ಯಕ್ಷ ಡಾ.ಕೆ.ಎಚ್.ನಾಗರಾಳ, ರಾವಸಾಬ ಬೆಳಕೂಡ, ಪಂಚಮಸಾಲಿ ಸೇನಾ ಪಡೆ ರಾಜ್ಯಾಧ್ಯಕ್ಷ ಬಾಳೇಶ ಶಿವಾಪೂರ, ರಾಯಬಾಗದ ಶಿವನಗೌಡ ಪಾಟೀಲ ಇದ್ದರು.


Gadi Kannadiga

Leave a Reply