ಬೆಳಗಾವಿ: ನೀರು ಅತ್ಯಂತ ಅಗತ್ಯ ಸಂಪನ್ಮೂಲವಾಗಿದೆ. ನೈಸರ್ಗಿಕ ಸಂಪನ್ಮೂಲದ ನಾಶ ಮಾನವನ ಅವನತಿ ಎಂದೇ ಹೇಳಬಹುದು. ಹೀಗಾಗಿ ಅಂತರ್ಜಲ ಮಟ್ಟ ಕುಸಿಯದಂತೆ ಜಾಗೃತೆವಹಿಸಬೇಕು ಎಂದು ಮನರಸ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್.ಜಿ.ಬಟ್ಟಲ ಅವರು ತಿಳಿಸಿದರು.
ನಗರದಲ್ಲಿ ನೈಸರ್ಗಿಕ ವಿಪತ್ತು ನಿರ್ವಹಣೆ ಮತ್ತು ಕೌಶಲ್ಯ ಅಭಿವೃದ್ಧಿ ಅಧ್ಯಯನ ಕೇಂದ್ರ, ಮೈನಿಂಗ್ ಇಂಜಿನಿಯರಿಂಗ್ ಅಸೊಸಿಯೇಶನ್ ಆಪ್ ಇಂಡಿಯಾ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮನರಸ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಮತ್ತು ಭೂ ವಿಜ್ಞಾನ ಪ್ರಾದೇಶಿಕ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜಲ ದಿನಾಚರಣೆ – 2022 ಆಚರಣೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಜಲ ನಿರ್ವಹಣೆ ಸಂಸ್ಥೆಯ ಮುಖ್ಯಸ್ಥರಾದ ಡಾ. ಬಿ.ವೆಂಕಟೇಶ್ ಅವರು ನೀರಿನ ಮಹತ್ವದ ಬಗ್ಗೆ ಮಾತನಾಡಿ ಜಲ ಸಂಪನ್ಮೂಲ ಮಾನವ ಜಗತ್ತಿಗೆ ಅತೀ ಅವಶ್ಯಕವಾಗಿದ್ದು ಹಿತ ಮಿತ ಬಳಕೆ ಉತ್ತಮ ಎಂದು ತಿಳಿಸಿದರು.
ಎಂ.ಇ.ಎ.ಐ ಅಧ್ಯಕ್ಷರಾದ ಡಾ.ಪುರಂದರ ಬೆಕಾಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ನೀರಿನ ಕೊರತೆ, ಅಂತರ್ಜಲ ಸಂರಕ್ಷಣೆ ಕುರಿತಾಗಿ ಮಾತನಾಡಿದರು.
ನೀರಿನ ಕುರಿತಾಗಿ ಪರಿಣಾಮಕಾರಿ ಮನವರಿಕೆ ಉದ್ದೇಶದಿಂದ ಸಾಕ್ಷ್ಯಚಿತ್ರ ಪ್ರದರ್ಶನ ದೊಂದಿಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮವನ್ನು ಸಾಗರ ವಾಗಮೂರಿ ನಿರೂಪಿಸಿದರು, ಡಾ. ಜಿ. ಎಮ್. ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿಗಳು ಬೋಧಕರು ಉಪಸ್ಥಿತರಿದ್ದರು.