This is the title of the web page
This is the title of the web page

Please assign a menu to the primary menu location under menu

Local News

“ಪಠ್ಯಕ್ರಮ ದಾರಿಯಾದರೆ ಪಠ್ಯಗಳು ಆ ದಾರಿಯ ಬೆಳಕು ಇದ್ದಂತೆ” ಡಾ.ಮಾಳಿ ಅಭಿಮತ


ಬೆಳಗಾವಿ: – ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಗುಣವಾಗಿ ಪದವಿ ಹಂತದ ಪಠ್ಯಕ್ರಮ ವಿದ್ಯಾರ್ಥಿಗಳ ಪಾಲಿಗೆ ಹೇರಿಕೆ ಆಗಬಾರದು. ಪೂರ್ವಗ್ರಹ ಪೀಡಿತಕ್ಕೆ ಒಳಗಾಗದೆ ಪಠ್ಯಕ್ರಮ ವಿನ್ಯಾಸ ಆಗಬೇಕು ಎಂದು ಖ್ಯಾತ ಸಾಹಿತಿ,ಹಾಗೂ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ವಿ.ಎಸ್.ಮಾಳಿ ಅಭಿಮತ ವ್ಯಕ್ತಪಡಿಸಿದರು.ದಿನಾಂಕ ೨೬ ರಂದು ಭಾನುವಾರ ಬೆಳಗಾವಿಯ ಭರತೇಶ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಮಹಾವಿದ್ಯಾಲಯಗಳ ಕನ್ನಡ ಅದ್ಯಾಪಕರ ಪರಿಷತ್ತು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ಸಾಧಕರಿಗೆ ನಿವೃತ್ತರಿಗೆ ಸನ್ಮಾನ ಸಮಾರಂಭದಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ ಪದವಿ ಕನ್ನಡ ಪಠ್ಯಗಳ ಆಶಯಗಳು”ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.ಪಠ್ಯವನ್ನು ಓದುವ ವಿದ್ಯಾರ್ಥಿಗಳು ಇದರಿಂದ ತೀವ್ರ ಪ್ರಭಾವಿತರಾಗಿ ಸ್ವಾವಲಂಬಿ ಜೀವನ ನಡೆಸಲು ಪ್ರೇರಣೆಯಾಗಬೇಕು.ಈ ಹೊತ್ತಿನ ಕಾಲಕ್ಕೆ ಪಠ್ಯಗಳು ಪರಿವರ್ತನೆ ಆಗಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಆಶಯದಂತೆ ವಿದ್ಯಾರ್ಥಿ ಕೇಂದ್ರಿತ ಪಠ್ಯಗಳು ರಚನೆಯಾಗಬೇಕಾದ ಅಗತ್ಯವಿದೆ “ಪಠ್ಯಕ್ರಮ ಎಂಬುದು ಒಂದು ದಿವ್ಯ ಪಥ, ಪಠ್ಯಗಳು ಆ ಪಥದ ಬೆಳಕು” ಇದ್ದಂತೆ ಎಂದು ಮಾರ್ಮಿಕವಾಗಿ ನುಡಿದರು. ಕರೋಣ ಸಂದರ್ಭದಲ್ಲಿ ಮಡಿದ ಕೆಲವು ಪ್ರಾಧ್ಯಾಪಕರ ಕುಟುಂಬಕ್ಕೆ ಕೇವಲ ಸಾಂತ್ವನ ಹೇಳದೇ ಪರಿಷತ್ತು ಸಂಗ್ರಹಿಸಿದ ೭೫ ಸಾವಿರ ರೂಪಾಯಿಗಳನ್ನುಅಗಲಿದ ಪ್ರಾಧ್ಯಾಪಕರ ಗ್ರಾಮದಲ್ಲಿ ಇತ್ತೀಚೆಗೆ ನಿಧಿ ಹಂಚಿಕೆ ಕಾರ್ಯಕ್ರಮ ಮಾಡಿ ಧನ ಸಹಾಯ ವಿತರಿಸುವ ಮೂಲಕ ಪರಿಷತ್ತು ಮಾನವೀಯತೆ ಎತ್ತಿ ಹಿಡಿದ ಸಂಗತಿಯನ್ನು ಡಾ.ಮಾಳಿ ಅವರು ಮೆಲುಕು ಹಾಕಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರು ಪ್ರೊ.ಎಸ್.ಎಂ.ಗಂಗಾಧರಯ್ಯ ಅವರು “ಈಗ ಪಠ್ಯದ ಕುರಿತು ಗಹನವಾದ ಗಂಭೀರವಾದ ಚರ್ಚೆಗಳು ನಡೆಯುತ್ತಿವೆ.ಡಿ.ಎಸ್.ಸಿ.ವಿಷಯಗಳ ಗಟ್ಟಿಯಾದ ಪಠ್ಯ ಅಳವಡಿಸಬೇಕು.೨೪ ಪತ್ರಿಕೆಗಳ ಪುಸ್ತಕ ಮಾಡುವ ಕಠಿಣ ಸವಾಲಿನ ಕುರಿತು ಅನುಭವ ಹಂಚಿಕೊಂಡರು.ಸಸಿಗೆ ನೀರೆರೆಯುವ ಮೂಲಕ ಆಗಮಿಸಿದ್ದ ಗಣ್ಯ ಮಾನ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಈ ವರುಷ ವಿಶ್ರಾಂತ ಜೀವನಕ್ಕೆ ಕಾಲಿಟ್ಟ ಕೆಲವು ಪ್ರಾಧ್ಯಾಪಕರನ್ನು,ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರನ್ನು,ಹಾಗೂ ಪಿ.ಎಚ್.ಡಿ.ಪಡೆದ ೩೦ ಜನ ಪ್ರಾಧ್ಯಾಪಕರನ್ನು ಪರಿಷತ್ತಿನ ವತಿಯಿಂದ ಉಪಸ್ಥಿತರಿದ್ದ ವೇದಿಕೆ ಮೇಲಿನ ಗಣ್ಯರು ಕನ್ನಡ ಶಲ್ಯ, ಗ್ರಂಥ, ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಅಭಿಮಾನದಿಂದ ಹಾಗೂ ಆತ್ಮೀಯವಾಗಿ ಸನ್ಮಾನಿಸಿದರು.ಕರೋಣ ಮಹಾಮಾರಿಯಿಂದ ಜೀವ ಕಳೆದುಕೊಂಡ ಹಲವು ಪ್ರಾಧ್ಯಾಪಕ ರಿಗೆ ಗೌರವ ಅರ್ಪಿಸಲು ಒಂದು ನಿಮಿಷ ಸಾಮೂಹಿಕವಾಗಿ ಮೌನಾಚಾರಣೆ ಮಾಡಲಾಯಿತು.ಕನ್ನಡ ಮೌಲ್ಯ ಮಾಪನದ ಚೇರ್ಮನ್ ಡಾ.ಎಸ್.ಎಂ.ಲೋಕಾಪುರ ತಮ್ಮ ಉದ್ಘಾಟನ ಪರ ನುಡಿಯಲ್ಲಿ ಪರಿಷತ್ತು ನಡೆದ ದಾರಿಯನ್ನು ಸೊಗಸಾಗಿ ದರ್ಶಿಸಿದರು. ನಿವೃತ್ತರ ಪರವಾಗಿ ಪ್ರೊ.ವಿ.ಆರ್.ಜೋರೆ ಅಭಿನಂದನಪರ ನುಡಿಗಳನ್ನು ಹಂಚಿಕೊಡರು. ಪರಿಷತ್ತಿನ ಕಾರ್ಯದರ್ಶಿ ಡಾ.ಸುರೇಶ ಹನಗಂಡಿ, ವೇದಿಕೆ ಮೇಲಿನ ಎಲ್ಲ ಗಣ್ಯರಿಗೆ ಕನ್ನಡ ಶಲ್ಯವನ್ನು ಕನ್ನಡ ಕೊರಳುಗಳಿಗೆ ಹಾಕಿ ಗೌರವ ನೀಡಿದ್ದು ವಿಶೇಷವಾಗಿತ್ತು.ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಅಯ್.ಬಿರಾದಾರ ಈ ಪರಿಷತ್ತುಅಧಿಕೃತ ನೋಂದಣಿ ಆಗಲು ಸಹಕರಿಸಿದವರನ್ನು ಅಭಿನಂದಿಸಿದರು. ವೇದಿಕೆ ಮೇಲೆ ಡಾ.ಎಚ್.ವಾಯ್.ತಿಮ್ಮಾಪೂರ,ಡಾ.ಎಸ್.ಎಂ.ಪಾನಬುಡೆ, ಡಾ.ಸುರೇಶ್ ಹನಗಂಡಿ, ಡಾ.ವಿಜಯಮಾಲಾ ನಾಗನೂರಿ ಮತ್ತಿತರರು ಉಪಸ್ಥಿತರಿದ್ದರು. ಅಶೋಕ ಕಾಂಬಳೆ ನಾಡಗೀತೆ ಪ್ರಸ್ತುತ ಪಡಿಸಿದರು.ಆರಂಭದಲ್ಲಿ ಡಾ.ಆರ್ ನಾಗರಾಜ ಅವರು ಸಕಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.ಡಾ.ಆರ್.ಎಸ್.ದೊಡ್ಡನಿಂಗಪ್ಪಗೊಳ ಕಾರ್ಯಕ್ರಮ ಸಂಯೋಜಿಸಿದರು.ಕೊನೆಗೆ ಡಾ.ವಿಜಯಮಾಲಾ ನಾಗನೂರಿ ವಂದಿಸಿದರು


Gadi Kannadiga

Leave a Reply