ಮೂಡಲಗಿ: ರೈತರು ಬೇಸಾಯ ಮಾಡುವ ಮೊದಲು ತಮ್ಮ ಜಮೀನÀದಲ್ಲಿ ಮಣ್ಣು ಪರೀಕ್ಷೆಮಾಡಿಕೊಂಡು ಭೂಮಿಗೆ ಫೋಷಕಾಂಶ ಗೋಬ್ಬರವನ್ನು ನೀಡಲು ಸಣಬು, ಗೋಬ್ಬರ ಗಿಡ ಬೆಳೆಗಳನ್ನು ಸಮಯ ಅನುಸಾರ ಭೂಮಿಯಲ್ಲಿ ಬಳಕೆ ಮಾಡುವದರಿಂದ ಉತ್ತಮ ಬೆಳೆ ಬೆಳೆಯಲ್ಲು ಸಾಧ್ಯ ಎಂದು ತುಕ್ಕಾನಟ್ಟಿ ಬರ್ಡ್ಸ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ಎಮ್.ಎನ್.ಮಲಾವಡಿ ಹೇಳಿದರು.
ಅವರು ತಾಲೂಕಿನ ನಾಗನೂರ ಗ್ರಾಮದ ಅಮೋಘಸಿದ್ಧೇಶ್ವರ ದೇವಸ್ಥಾನದ ಆವರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೈತ ಕ್ಷೇತ್ರ ಪಾಠ ಶಾಲೆಯ ಕಾರ್ಯಕ್ರಮದ ಅಡಿಯಲ್ಲಿ ಮಣ್ಣು ಪರೀಕ್ಷೆ ಮತ್ತು ಹಸಿರೆಲೆ ಗೋಬ್ಬರ ಮಹತ್ವ ಕಾರ್ಯಕ್ರಮದಲ್ಲಿ ರೈತ-ರೈತ ಮಹಿಳೆಯನ್ನು ಉದ್ಧೇಶಿ ಮಾತನಾಡಿದರು
ಯೋಜನೆಯ ಕೃಷಿ ಮೇಲ್ವಿಚಾರಕ ಮೈಲಾರಪ್ಪ ಪೈಲಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಸದಸ್ಯರಿಗೆ ಅನೂಕ್ಕೂಲವಾಗು ದೃಷ್ಠಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥಾಪಕರಾದ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕೃಷಿ ಅಧ್ಯಯನ ಪ್ರವಾಸ, ಬೆಸಾಯಕ್ಕೆ ಯಂತ್ರೋಪಕ ಖರೀದಿ, ಸಸಿ ನಾಟಿ, ಮಾದರಿಯ ಹೈನುಗಾರಿಕೆಯ ಕೋಟಿಗೆ ರಚನೆ ಸೇರಿದಂತೆ ಹಲವಾರು ಯೋಜನೆ ರೂಪಿಸಿರುವದನ್ನು ಯೋಜನೆಯ ಸದಸ್ಯರು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಗಣಪತಿ ಬಟ್ಟಿ, ಸೇವಾಪ್ರತಿನಿಧಿಮದಿನಾ ನಾಯಕವಾಡಿ,ಒಕ್ಕೂಟದ ಅಧ್ಯಕ್ಷೆ ರೇಣುಕಾ ಪೂಜಾರಿ ಮತ್ತು ಅಣ್ಣಪ್ಪ ಬೆನಕನಹಳ್ಳಿ ಸ್ವ-ಸಹಾಯ ಸಂಘದ ಸದಸ್ಯರು ರೈತರು ಇದ್ದರು.
Gadi Kannadiga > Local News > ಮಣ್ಣು ಪರೀಕ್ಷೆ ಮತ್ತು ಹಸಿರೆಲೆ ಗೋಬ್ಬರದ ಮಹತ್ವ ಕಾರ್ಯಕ್ರಮ
ಮಣ್ಣು ಪರೀಕ್ಷೆ ಮತ್ತು ಹಸಿರೆಲೆ ಗೋಬ್ಬರದ ಮಹತ್ವ ಕಾರ್ಯಕ್ರಮ
Suresh14/07/2023
posted on

More important news
ಪ್ಲಾಸ್ಟಿಕ್ ಬಳಕೆ ಮಾಡಿದರೆ ಕ್ರಮ
30/09/2023
ಬಿತ್ತನೆ ಬೀಜ ವಿತರಣೆಗೆ ಚಾಲನೆ
30/09/2023
ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ
29/09/2023
ಸುಮಧುರ ಚಿತ್ರಗೀತೆಗಳ ಕಾರ್ಯಕ್ರಮ
29/09/2023