This is the title of the web page
This is the title of the web page

Please assign a menu to the primary menu location under menu

State

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಖಡಕ್ ಸೂಚನೆ ಬೆಳೆ ಸಮೀಕ್ಷೆ ಕಾರ್ಯ ತಿಂಗಳಾಂತ್ಯದೊಳಗೆ ಪೂರ್ಣಗೊಳಿಸಿಬರ ನಿರ್ವಹಣೆಗೆ ನೋಡಲ್ ಅಧಿಕಾರಿಗಳ ನೇಮಕ


ಗದಗ ಸೆಪ್ಟೆಂಬರ್ ೧೪: ಗದಗ ಜಿಲ್ಲೆಯ ಆರು ತಾಲೂಕುಗಳನ್ನು ಸರ್ಕಾರ ತೀವ್ರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ. ಜಿಲ್ಲೆಯಲ್ಲಿ ಬರ ಪರಿಹಾರಕ್ಕೆ ಪೂರಕವಾಗುವಂತೆ ಶೀಘ್ರವೇ ಬೆಳೆ ಸಮೀಕ್ಷೆ ಕಾರ್ಯ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಖಡಕ್ ಸೂಚನೆ £Ãಡಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕೋರ್ಟಹಾಲ್‌ದಲ್ಲಿ ಗುರುವಾರ ಜರುಗಿದ ಜಿಲ್ಲಾ ವಿಪತ್ತು £ರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಅಧಿಕಾರಿಗಳಿಗೆ ಕಟ್ಟು£ಟ್ಟಿನ £ರ್ದೇಶನಗಳನ್ನು £Ãಡಿದರು. ಸರ್ಕಾರ ಗದಗ ಜಿಲ್ಲೆಯ ಮುಂಡರಗಿ ತಾಲೂಕು ಹೊರತುಪಡಿಸಿ ಉಳಿದ ಆರು ತಾಲೂಕುಗಳನ್ನು ತೀವ್ರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿ ಆದೇಶಿಸಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಬರಗಾಲ £ರ್ವಹಣೆಗೆ ಅಗತ್ಯ ಇಲಾಖಾ ವಾರು ಸಿದ್ಧತೆಗಳನ್ನು ತಕ್ಷಣ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ £ಯೋಜಿತ ಅಧಿಕಾರಿಗಳು ಬೆಳೆ ಸಮೀಕ್ಷೆ ಕಾರ್ಯಗಳನ್ನು ಆದ್ಯತೆ ಮೇರೆ ಪರಿಗಣಿಸಿ ಸೆಪ್ಟೆಂಬರ್ ಮಾಹೆಯ ಅಂತ್ಯದೊಳಗಾಗಿ ಪೂರ್ಣಗೊಳಿಸಲೇಬೇಕು. ಇದಕ್ಕಾಗಿ ಪಿ.ಆರ್. ಹಾಗೂ ರೈತರಿಗೆ ಈ ಕುರಿತು ಮಾಹಿತಿ ಒದಗಿಸಿ ಸಮೀಕ್ಷೆ ಕಾರ್ಯ £ಖರವಾಗಿ ಪೂರ್ಣಗೊಳಿಸುವ ಜವಾಬ್ದಾರಿ £ಮ್ಮದು ಎಂದರು.
ನೋಡಲ್ ಅಧಿಕಾರಿಗಳ ನೇಮಕ: ತೀವ್ರ ಬರ ಸಮರ್ಪಕ £ರ್ವಹಣೆಗಾಗಿ ತಾಲೂಕಿಗೊಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಗದಗ ತಾಲೂಕಿಗೆ ಉಪವಿಭಾಗಾದಿಕಾರಿ ಡಾ.ವೆಂಕಟೇಶ ನಾಯ್ಕ, ಲಕ್ಷ್ಮೇಶ್ವರ – ಸಮಾಜ ಕಲ್ಯಾಣ ಇಲಾಖೆ ಉಪ£ರ್ದೇಶಕ ಪ್ರಶಾಂತ ವರಗಪ್ಪನವರ, ಶಿರಹಟ್ಟಿ- ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಅಮಿತ ಬಿದರಿ , ರೋಣ- ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ, ಗಜೇಂದ್ರಗಡ-ಪಂಚಾಯತ್‌ರಾಜ್ ಇಂಜ£Ãಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಶಿವಾನಂದ ಗೌಡರ, ನರಗುಂದ- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ£ರ್ದೇಶಕ ಗಂಗಪ್ಪ ಎಂ, ಹಾಗೂ ಮುಂಡರಗಿ – ಜಿಲ್ಲಾಧಿಕಾರಿಗಳ ಕಚೇರಿ ನಗರಾಭಿವೃದ್ಧಿ ಕೋಶದ ಯೋಜನಾ £ರ್ದೇಶಕ ಮಾರುತಿ ಬ್ಯಾಕೋಡ್ ಇವರುಗಳನ್ನು ನೋಡಲ್ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ.
ನೇಮಕ ಮಾಡಲಾದ ನೋಡಲ್ ಅಧಿಕಾರಿಗಳು ತಕ್ಷಣ ಕಾರ್ಯಪ್ರöವೃತ್ತರಾಗಿ ತಮ್ಮ ತಾಲೂಕುಗಳಿಗೆ ತೆರಳಿ ತಾಲೂಕಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮರ್ಪಕ ಬರ £ರ್ವಹಣೆ ಕುರಿತು ಸಭೆ ನಡೆಸಬೇಕು. ಹಾಗೂ ತಕ್ಷಣ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ವರದಿ ಸಲ್ಲಿಸಬೇಕು. ತಾಲೂಕಿನ ಬರ £ರ್ವಹಣೆಗೆ ಜಿಲ್ಲಾಡಳಿತದೊಂದಿಗೆ £ರಂತರ ಸಂಪರ್ಕದಲ್ಲಿದ್ದು £ಭಾಯಿಸುವಂತೆ £ರ್ದೇಶನ £Ãಡಿದರು. ತಾಲೂಕಾ ಹಂತದಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಕುಡಿಯುವ £Ãರಿನ ಸಮರ್ಪಕ ಪೂರೈಕೆ , ಜಾನುವಾರುಗಳಿಗೆ ಸಮರ್ಪಕ ಮೇವು ಲಭ್ಯತೆ ಹಾಗೂ ಬೆಳೆ ಸಮೀಕ್ಷೆ ಕಾರ್ಯಗಳ ಕುರಿತು £ಗಾವಹಿಸುವಂತೆ ತಿಳಿಸಿದರು.
ಜಿಲ್ಲಾ ಹಾಗೂ ತಾಲೂಕಾ ಹಂತದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ವಾಸಿಸಬೇಕು. ಅಲ್ಲದೇ ಸರಿಯಾಗಿ ಕಚೇರಿಯಲ್ಲಿ ಕಾರ್ಯ£ರ್ವಹಿಸುವ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಸಂದಿಗ್ಧ ಪರಿಸ್ಥಿತಿಯಲ್ಲಿ ಮೇಲಾಧಿಕಾರಿಗಳ ಅನುಮತಿಯೊಂದಿಗೆ ತೆರಳಬೇಕು. ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲೆಯ ಕುಡಿಯುವ £Ãರಿನ ಪರಿಸ್ಥಿತಿ, ಮೇವು ಲಭ್ಯತೆ, ಆರೋಗ್ಯ ಸುಧಾರಣೆಗಾಗಿ ಇರುವ ಔಷಧಿಗಳ ಲಭ್ಯತೆ ಕುರಿತಂತೆ ಚರ್ಚಿಸಲಾಯಿತು. ಜಿಲ್ಲೆಯ ೪೨ ಹಳ್ಳಿಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳ ೫೦ ವಾರ್ಡುಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ £Ãರಿನ ಸಮಸ್ಯೆ ಎದುರಾಗಬಹುದಾದ ಸ್ಥಳಗಳೆಂದು ಗುರುತಿಸಲಾಗಿದೆ. ಕುರ್ತಕೋಟಿ, ಡಂಬಳ, ಬೈರನಹಟ್ಟಿ, ಗಜೇಂದ್ರಗಡ ಹಾಗೂ ಮಜ್ಜೂರು ಗ್ರಾಮಗಳಲ್ಲಿ ಗೋಶಾಲೆ ಅಗತ್ಯವಿದ್ದಲ್ಲಿ ತೆರೆಯಲು ಸ್ಥಳ ಗುರುತಿಸಲಾಗಿದೆ. ಜಾನುವಾರುಗಳಿಗೆ ಸಮರ್ಪಕ ಮೇವು ಪೂರೈಕೆಗಾಗಿ ಜಿಲ್ಲೆಯ ೨೩ ಸ್ಥಳಗಳಲ್ಲಿ ಅಗತ್ಯಬಿದ್ದಲ್ಲಿ ಮೇವು ಬ್ಯಾಂಕ್ ತೆರೆಯಲು ಸ್ಥಳಗಳನ್ನು ಗುರುತಿಸಿಟ್ಟುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.
ಸಮನ್ವಯತೆ : ತಹಶೀಲ್ದಾರ, ತಾಲೂಕು ಪಂಚಾಯತ್ ಕಾರ್ಯ£ರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಕೃಷಿ, ತೋಟಗಾರಿಕೆ, ಪೊಲೀಸ ಇಲಾಖೆ ತಾಲೂಕಾ ಹಂತದ ಅಧಿಕಾರಿಗಳು ಸಮರ್ಪಕ ಬರ £ರ್ವಹಣೆ ಕಾರ್ಯದಲ್ಲಿ ಸಮನ್ವಯದೊಂದಿಗೆ ಕರ್ತವ್ಯ £ರ್ವಹಿಸಬೇಕು. ಒಟ್ಟಾರೆ ಜನಸಾಮಾನ್ಯರಿಗೆ ಯಾವುದೇ ಸಂದರ್ಭದಲ್ಲೂ ಸಮಸ್ಯೆ ತಲೆದೂರದಂತೆ ಸಮರ್ಪಕವಾಗಿ ಇಲಾಖಾ ಅಧಿಕಾರಿಗಳು £ಬಾಯಿಸಬೇಕೆಂದು ಜಿಲ್ಲಾದಿಕಾರಿ ವೈಶಾಲಿ ಎಂ.ಎಲ್. ಅವರು £ರ್ದೇಶನ £Ãಡಿದರು.
ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಹಾಗೂ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಅವರು ಸಭೆಯಲ್ಲಿ ಪಾಲ್ಗೊಂಡು ಬರ £ರ್ವಹಣೆ ಕುರಿತಂತೆ ಅಧಿಕಾರಿಗಳಿಗೆ ಸೂಚನೆಗಳನ್ನು £Ãಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಂಟಿ ಕೃಷಿ £ರ್ದೇಶಕಿ ತಾರಾಮಣಿ ಜಿ.ಎಚ್, ತೋಟಗಾರಿಕೆ ಇಲಾಖೆಯ ಉಪ£ರ್ದೇಶಕ ಶಶಿಕಾಂತ ಕೋಟಿಮ£, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.£Ãಲಗುಂದ, ಸಾರ್ವಜ£ಕ ಶಿಕ್ಷಣ ಇಲಾಖೆಯ ಉಪ£ರ್ದೇಶಕ ಎಂ.ಎ. ರಡ್ಡೇರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.


Leave a Reply