This is the title of the web page
This is the title of the web page

Please assign a menu to the primary menu location under menu

State

ಕೋವಿಡ್ ಉಲ್ಬಣವಾಗದಂತೆ ನಿಗಾ ವಹಿಸಲು ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಸೂಚನೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು, ಮುಂಜಾಗ್ರತಾ ಲಸಿಕೆ ಅರ್ಹರೆಲ್ಲರೂ ಪಡೆಯಿರಿ


ಗದಗ ಡಿಸೆಂಬರ್ ೨೯: ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಉಲ್ಬಣವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಸೂಚಿಸಿದರು.
ಗದಗ ಜಿಲ್ಲಾಡಳಿತದೊಂದಿಗೆ ಗುರುವಾರ ಬೆಳಿಗ್ಗೆ ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ ಅವರು ಕೋವಿಡ್ ಮುಂಜಾಗೃತ ಕ್ರಮಗಳ ಕುರಿತು ಜೂಮ್ ವಿಡಿಯೋ ಕಾನ್ಫರನ್ಸ್ ಮೂಲಕ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಉಲ್ಬಣವಾಗದಂತೆ ವಹಿಸಿರುವ ಮುಂಜಾಗ್ರತಾ ಕ್ರಮಗಳು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮಾಡಿಕೊಂಡ ಸಿದ್ಧತೆ, ಬೆಡ್ ವ್ಯವಸ್ಥೆ, ಮಾನವ ಸಂಪನ್ಮೂಲ ಅಗತ್ಯತೆ, ಆಕ್ಸಿಜನ್ ಉತ್ಪಾದನೆ, ಸಂಗ್ರಹ, ಕೋವಿಡ್ ಸಲಕರಣೆಗಳಾದ ಪಿಪಿಇ ಕಿಟ್ ಮಾಸ್ಕ್, ಸ್ಯಾನಿಟೈಜರ್, ಆಕ್ಸಿಜನ್ ಕಾನ್ಸನ್ಸ ಟ್ರೇಟರ್ , ಆಕ್ಸಿಜನರೇಟೆಡ್ ಬೆಡ್, ಆಂಬುಲೆನ್ಸ್, ತಾಂತ್ರಿಕ ಸಿಬ್ಬಂದಿ, ಔಷಧಿ ಕುರಿತು ಮಾಹಿತಿ ಪಡೆದ ಅವರು ಜಿಲ್ಲಾಡಳಿತ ಶಿಸ್ತು ಬದ್ಧವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಪಾಲನೆ ಮಾಡುವಂತೆ ಕ್ರಮ ವಹಿಸಲು ತಿಳಿಸಿದರು.
ಸೋಂಕು ಪತ್ತೆಗಾಗಿ ಸರ್ಕಾರ ನಿಗದಿಪಡಿಸಿದ ಗುರಿಯಂತೆ ತಪಾಸಣೆಗೊಳಪಡಿಸಬೇಕು. ಸೋಂಕು ಪತ್ತೆಯಾದಲ್ಲಿ ಅದು ಇನ್ನೊಬ್ಬರಿಗೆ ಹರಡದಂತೆ ಮುಂಜಾಗ್ರತೆ ವಹಿಸಲು ಸೋಂಕಿತರಿಗೆ ಕ್ವಾರಂಟೈನ್ ಮಾಡಬೇಕು. ಸೋಂಕಿತರ ಚಿಕಿತ್ಸೆ ಹಾಗೂ ತಪಾಸಣೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು.
ಈಗಾಗಲೇ ಅರ್ಹ ಎಲ್ಲ ಸಾರ್ವಜನಿಕರು ಕೋವಿಡ್ ಲಸಿಕೆ ನೀಡಲಾಗಿದೆ. ಮೊದಲ ಲಸಿಕೆ ಪಡೆದವರು ೨ ನೇ ಲಸಿಕೆ, ೨ ನೇ ಲಸಿಕೆ ಪಡೆದವರು ಮುಂಜಾಗ್ರತಾ ಲಸಿಕೆ ಪಡೆಯಬೇಕು. ಆದಷ್ಟು ಮಾಸ್ಕ್ ಸ್ಯಾನಿಟೈಜರ್ ಬಳಕೆಯಡಿ ಗಮನಹರಿಸಬೇಕು ಎಂದರು.
ಸಂತೆ, ಶಾಲಾ ಕಾಲೇಜು ಚಿತ್ರ ಮಂದಿರ, ಬಸ್ ನಿಲ್ದಾಣ ಸೇರಿದಂತೆ ಜನವಸತಿ ಪ್ರದೇಶಗಳಲ್ಲಿ ಸಾರ್ವಜನಿಕರೆಲ್ಲರೂ ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸಿ ವ್ಯವಹರಿಸಬೇಕು. ಜೊತೆಗೆ ಶುಚಿತ್ವದೆಡೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಗಮನ ಹರಿಸಬೇಕು. ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ಪರೀಕ್ಷೆಗೊಳಗಾಗಬೇಕು. ಸೋಂಕು ದೃಢವಾದಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಚಿಕಿತ್ಸೆ ಪಡೆಯಬೇಕು. ಈ ಎಲ್ಲ ಹಂತಗಳನ್ನು ಅಧಿಕಾರಿಗಳು ನಿಯಮಾನುಸಾರ ಕಾರ್ಯಗತಗೊಳಿಸುವಂತೆ ತಿಳಿಸಿದರು.
ಜಿಲ್ಲೆಯ ಕೋವಿಡ್ ನಿಯಂತ್ರಣಕ್ಕಾಗಿ ಅಗತ್ಯವಿರುವ ಮೆಡಿಸಿನ್, ಸಾಧನ ಸಲಕರಣೆ ಅಗತ್ಯವಿದ್ದಲ್ಲಿ ಸರ್ಕಾರದ ಹಂತದಲ್ಲಿ ಪ್ರಯತ್ನಿಸಿ ಜಿಲ್ಲೆಯ ಕೋವಿಡ್ ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯ ಸುರಕ್ಷತೆ ಹಾಗೂ ಜೀವ ಹಾನಿ ತಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಜಿಲ್ಲಾದಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ ಕಳೆದ ನವೆಂಬರ್ ೬ ರಿಂದ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಸೋಂಕು ಪತ್ತೆಯಾಗಿಲ್ಲ. ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಒಟ್ಟಾರೆ ೮೭೩ ಬೆಡ್ ಖಾಸಗಿಯಲ್ಲಿ ೩೦೨ ಬೆಡ್ ಸೇರಿ ಒಟ್ಟು ೧೧೭೫ ಬೆಡಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ೧೦೪ ವೆಂಟಿಲೇಟರ್, ೧೧೯ ಐ.ಸಿ.ಯು ಒಳಗೊಂಡಿವೆ. ಜಿಮ್ಸ್ ನಲ್ಲಿ ೪೫೩, ಮುಂಡರಗಿ, ನರಗುಂದ , ರೋಣ ತಾಲೂಕಾ ಆಸ್ಪತ್ರೆಗಳಲ್ಲಿ ತಲಾ ೧೦೦ ಬೆಡ್, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ ಹಾಗೂ ಬೆಟಗೇರಿ ಆಸ್ಪತ್ರೆಗಳಲ್ಲಿ ತಲಾ ೩೦ ಬೆಡ್ ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ. ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲಿ ೨೦೫ ಬೆಡ್ ಗಳನ್ನು ಮೀಸಲಿರಿಸಿದೆ.
ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಔಷಧಿ ಸಂಗ್ರಹಣೆ ಕುರಿತಂತೆ ಮಾತನಾಡಿದ ಜಿಲ್ಲಾದಿಕಾರಿ ಅಗತ್ಯ ಔಷಧಿ ಶೇಖರಿಸಿಟ್ಟುಕೊಳ್ಳಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ೨೭೬೨೦ ಪಿಪಿಇ ಕಿಟ್, ೩೦೭೯ ಎನ್-೯೫ ಮಾಸ್ಕ್ ಸಂಗ್ರಹವಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ ಮಾತನಾಡಿ ಈಗಾಗಲೇ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಮಾರ್ಗಸೂಚಿಗಳ ಕುರಿತು ತಿಳುವಳಿಕೆ ನೀಡಿ, ಲಸಿಕೆ ಪಡೆಯುವ ಬಗ್ಗೆ ಸೂಚಿಸಿದೆ. ಜಿಮ್ಸ್ ನಲ್ಲಿ ೪ ಆಕ್ಸಿಜನ್ ಉತ್ಪಾದನಾ ಘಟಕಗಳು ಕಾರ್ಯಾರಂಭ ಮಾಡಿವೆ. ಜೊತೆಗೆ ಆಕ್ಸಿಜನ್ ಸಿಲೆಂಡರ್ ಗಳ ಸಂಗ್ರಹಿಸಿ ಪೂರೈಕೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಾಬಾಸಾಬ ನೇಮಗೌಡ ಮಾತನಾಡಿ ಇಲಾಖೆಯ ಎಲ್ಲ ಹಂತದ ಅಧಿಕಾರಿ ಸಿಬ್ಬಂದಿಗಳಿಗೆ ಮಾರ್ಗಸೂಚಿಗಳ ಪಾಲನೆಗೆ ಸೂಚಿಸಿದೆ. ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ಒದಗಿಸಲು ಹಾಗೂ ಮಾರ್ಗಸೂಚಿ ಪಾಲನೆಗೆ ಸೂಚಿಸಲಾಗುತ್ತಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಾರುತಿ ಎಂ,ಪಿ. ಉಪವಿಭಾಗಾಧಿಕಾರಿ ಅನ್ನಪೂರ್ಣ ಎಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ ನುಚ್ಚಿನ, ಜಿಮ್ಸ್ ನಿರ್ದೇಶಕ ಬಸವರಾಜ ಬೊಮ್ಮನಳ್ಳಿ, ಡಿಡಿಪಿಐ ಬಸವಲಿಂಗಪ್ಪ ಸೇರಿದಂತೆ ಎಲ್ಲ ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ವೈದ್ಯಾಧಿಕಾರಿಗಳು ಹಾಜರಿದ್ದರು.


Leave a Reply