This is the title of the web page
This is the title of the web page

Please assign a menu to the primary menu location under menu

State

ಇಂದರಗಿ ಗ್ರಾಮ ಪಂಚಾಯತಿಯಲ್ಲಿ ವಿನೂತನ ಸ್ವೀಪ್ ಕಾರ್ಯಕ್ರಮ ಪೂರ್ಣ ಕುಂಬ ಮೆರವಣಿಯೊಂದಿಗೆ ಮತದಾನ ಜಾಗೃತಿ ಮೂಡಿಸಿದ ನಾರಿಯರು


ಕೊಪ್ಪಳ ಏಪ್ರಿಲ್ ೨೭ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೊಪ್ಪಳ ತಾಲೂಕು ಸ್ವೀಪ್ ಸಮಿತಿಯಿಂದ ಇಂದರಗಿ ಗ್ರಾಮದಲ್ಲಿ ಏಪ್ರಿಲ್ ೨೭ರಂದು ವಿನೂತನ ಸ್ವೀಪ್ ಕಾರ್ಯಕ್ರಮ ನಡೆಯಿತು.
ಇಂದರಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಮಹಿಳೆಯರ ಪೂರ್ಣ ಕುಂಬ ಮೆರವಣಿಗೆಯೊಂದಿಗೆ ಮತದಾನ ಜಾಗೃತಿ ಮೂಡಿಸಿದ್ದು, ವಿಶೇಷವಾಗಿತ್ತು.
ತಾಲೂಕ ಸ್ವೀಪ್ ನೋಡಲ್ ಅಧಿಕಾರಿ ಹನಮಂತಪ್ಪ ಎಚ್ ಅವರು ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಸಲಹೆ ನೀಡಿದರು. ಬಳಿಕ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.
ತಾ.ಪಂ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಮಹೇಶ್ ಎಚ್ ಅವರು ಮಾತನಾಡಿ, ೧೮ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯ ಮತ್ತು ನೈತಿಕ ಹಾಗೂ ವಿವೇಚನಾಯುಕ್ತವಾಗಿ ಮತ ಚಲಾಯಿಸಬೇಕೆಂದರು. ಬಳಿಕ ಇವಿಎಂ, ವಿವಿ ಪ್ಯಾಟ್ ಮೂಲಕ ಮತದಾನ ಮಾಡುವ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಅಣುಕು ಮತದಾನ ಮಾಡುವ ಮೂಲಕ ಮತದಾರರು ಖುಷಿಪಟ್ಟರು. ಪೂರ್ಣ ಕುಂಬ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕ ಯೋಜನಾಧಿಕಾರಿ, ಗ್ರಾಮ ಪಂಚಾಯತಿ ಪಿಡಿಒ, ತಾಲೂಕ ಐಇಸಿ ಸಂಯೋಜಕರು, ತಾಲೂಕ ಸ್ವೀಪ್ ತಂಡದ ಸದಸ್ಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಸಂಜಿವಿನಿ ಸ್ವಸಹಾಯ ಸಂಘದ ಮಹಿಳೆಯರು, ಗ್ರಾ.ಪಂ ಸಿಬ್ಬಂದಿಗಳು, ಗ್ರಾಮ ಕಾಯಕ ಮಿತ್ರ, ಗ್ರಾಮದ ಮತದಾರರು ಉಪಸ್ಥಿತರಿದ್ದರು.


Leave a Reply