This is the title of the web page
This is the title of the web page

Please assign a menu to the primary menu location under menu

State

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ʻಕನ್ನಡದ ಧ್ರುವತಾರೆʼ :  ವಿನೂತನ, ವಿಶಿಷ್ಟ, ಮಾದರಿ  ಕಾರ್ಯಕ್ರಮ – ನಾಡೋಜ ಡಾ. ಮಹೇಶ ಜೋಶಿ


ಬೆಂಗಳೂರು: ಕನ್ನಡದ ಧ್ರುವತಾರೆ ಸಾಧಕರೊಂದಿಗೆ ಮಾತು-ಕತೆ  ಎನ್ನುವ ವಿನೂತನ ಹಾಗೂ ವಿಶಿಷ್ಟ ಮಾದರಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಿದೆ.
ಈ ಮೂಲಕ ಕನ್ನಡ ನಾಡಿನ ವಿವಿಧ ಕ್ಷೇತ್ರದಲ್ಲಿ ಅಜ್ಞಾತವಾಗಿ ಅಗಣಿತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಲಿದೆ. ಅವರೊಂದಿಗೆ ಪರಿಷತ್ತು ಹಾಗೂ ಸಾರ್ವಜನಿಕರು ಸಂವಾದ ನಡೆಸುವ ಮೂಲಕ ಸಾಧಕರ ಅನುಭವಗಳನ್ನು ನಾಡಿನ ಜನರಿಗೆ ತಿಳಿಸುವ ಕೆಲಸಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ, ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ ಜೋಶಿ* ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
     ಕನ್ನಡ-ಕನ್ನಡಿಗ-ಕರ್ನಾಟಕದ ಅಭ್ಯುದಯವನ್ನು ತನ್ನ ಧ್ಯೇಯವಾಗಿ ಹೊಂದಿರುವ ಕನ್ನಡಿಗರ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತು *ʻಕನ್ನಡದ ಧ್ರುವತಾರೆʼ* ಎನ್ನುವ ಹೆಸರಿನಲ್ಲಿ ನಡೆಸುವ ಕಾರ್ಯಕ್ರಮ ಪರಿಷತ್ತಿನ *ಮಾದರಿ ಕಾರ್ಯಕ್ರಮವಾಗಲಿದೆ*.  ಕನ್ನಡಿಗರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಬೆರಗು ಹುಟ್ಟಿಸುವಂತಹ ಸಾಧನೆಯನ್ನು ಮಾಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಕುರಿತು ಮಾಹಿತಿ ಲಭ್ಯವಿರುತ್ತದೆ.  ಇನ್ನೂ ಕೆಲವು ಕ್ಷೇತ್ರಗಳಲ್ಲಿನ ಸಾಧಕರು ‘*ಎಲೆ ಮರೆಯ ಮರ*’ಗಳಂತೆ ಅಪಾರ ಸಾಧನೆಯನ್ನು ಮಾಡಿದ್ದಾರೆ. ಮಾಹಿತಿ ಇದ್ದರೂ ಸಾಧಕರನ್ನು ನೇರವಾಗಿ ನೋಡುವ ಅವರ ಜೊತೆ ಸಂವಾದ ಮಾಡುವ ಅವಕಾಶ ಸಾರ್ವಜನಿಕರಿಗೆ ಸಿಕ್ಕಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ‘*ಕನ್ನಡದ ಧ್ರುವತಾರೆ*’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿದೆ ಎಂದು *ನಾಡೋಜ ಡಾ. ಮಹೇಶ ಜೋಶಿ* ಹೇಳಿದ್ದಾರೆ.
ಈ ಕಾರ್ಯಕ್ರಮವನ್ನು ಪ್ರತಿ ತಿಂಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಸಲು ತೀರ್ಮಾನಿಸಿದ್ದು, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ  ಸಾಧಕರೇ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಾಡಿನ ಕನ್ನಡ ಮೂಲದ ಸಾಧಕರು ಪರಿಷತ್ತು ಆಯೋಜಿಸುವ ʻ*ಕನ್ನಡದ ಧ್ರುವತಾರೆ*ʼ ವಿಶಿಷ್ಠ ಮಾದರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಸಾಧಕರೊಂದಿಗೆ ಸಾರ್ವಜನಿಕರು ಸಹ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.   ಕನ್ನಡ ಸಾಹಿತ್ಯ ಪರಿಷತ್ತಿನ ʻ*ಕನ್ನಡದ ಧ್ರುವತಾರೆ*ʼ ಕಾರ್ಯಕ್ರಮವು ಸಾಧಕರ ಮತ್ತು ಸಾರ್ವಜನಿಕರ ನಡುವೆ ಸುವರ್ಣ ಸೇತುವೆಯಾಗುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಪರಿಷತ್ತಿನ ʻ*ಕನ್ನಡದ ಧ್ರುವತಾರೆ*ʼ ಕಾರ್ಯಕ್ರಮಕ್ಕೆ *ಮೊದಲ  ಅತಿಥಿಯಾಗಿ ಖ್ಯಾತ ಕಲಾವಿದ ಶ್ರೀ ರಮೇಶ್ ಅರವಿಂದ್ ಭಾಗವಹಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ* ಅವರು ಮಾಹಿತಿ ನೀಡಿದ್ದಾರೆ.
ಏನಾದರೂ ಹೊಸತು ಸಾಧಿಸಬೇಕೆಂಬ ಮನೋಭಾವದ  *ಶ್ರೀ ರಮೇಶ್ ಅರವಿಂದ* ಅವರು ನಟನೆ, ನಿರೂಪಣೆ, ನಿರ್ದೇಶನ, ಸಾಹಿತ್ಯದ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಅವರು ತಮ್ಮ ಪ್ರತಿಭೆಯನ್ನು ಮೆರೆದವರು.೧೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಮೇಶ್ ಅರವಿಂದ್ ನಾಲ್ಕು ದಶಕಗಳಿಂದಲೂ ಕನ್ನಡದ ಪ್ರಮುಖ ನಟರಾಗಿದ್ದಾರೆ. ವಿವಿಧ ರಂಗದ ಅತಿರಥ ಮಹಾರಥರನ್ನು ಆತ್ಮೀಯವಾಗಿ ಸಂದರ್ಶಿಸಿ ಪರಿಚಯ ಮಾಡಿಕೊಡುತ್ತಿರುವ ‘*ವೀಕೆಂಡ್ ವಿತ್ ರಮೇಶ್*’ ಕಾರ್ಯಕ್ರಮ ಮನನೀಯವಾದದ್ದು. *ರಮೇಶ್ ಅರವಿಂದ್* ಉತ್ತಮ ಬರಹಗಾರರೂ ಹೌದು ಅವರು ರಚಿಸಿದ ಕೃತಿಗಳು ಅಪಾರ ಜನಪ್ರಿಯತೆಯನ್ನು ಪಡೆದಿವೆ. ಉತ್ತಮ ಭಾಷಣಕಾರರೂ ಆಗಿರುವ ರಮೇಶ್ ದೇಶ-ವಿದೇಶಗಳಲ್ಲಿ ತಮ್ಮ ಸ್ಪೂರ್ತಿಧಾಯಕ ಮಾತುಗಳಿಂದಲೂ ಕೂಡ ಪ್ರಸಿದ್ಧರು. ಇಂಥಹ ಮಹಾನ್ ಸಾಧಕರು ಕನ್ನಡ ಸಾಹಿತ್ಯ ಪರಿಷತ್ತಿನ  ʻ*ಕನ್ನಡ ಧ್ರುವತಾರೆ*’ ಕಾರ್ಯಕ್ರಮದ ಮೂಲಕ ಕನ್ನಡಿಗರ ಮುಂದೆ ಬರಲಿದ್ದಾರೆ. ಈ ಸಂವಾದದಲ್ಲಿ ಎಲ್ಲ ಕನ್ನಡಿಗರು ಭಾಗವಹಿಸ ಬೇಕೆಂದು *ಕನ್ನಡ ಸಾಹಿತ್ಯ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ* ಅವರು ಕನ್ನಡಿಗರಲ್ಲಿ ಮನವಿಮಾಡಿದ್ದಾರೆ.
———————–ಬಾಕ್ಸ್-—————
*ಅ.೧೯ ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೊದಲ ʻಕನ್ನಡದ ಧ್ರುವತಾರೆʼ*..
 *ಅಗಸ್ಟ್ ೧೯ರ ಶನಿವಾರ ಸಂಜೆ ೫ ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ʻಕನ್ನಡದ ಧ್ರುವತಾರೆʼ ಸಾಧಕರೊಂದಿಗೆ ಮಾತು-ಕತೆ ಕಾರ್ಯಕ್ರಮದ ಮೊದಲ ಅವತರಣಿಕೆ ಹಮ್ಮಿಕೊಳ್ಳಲಾಗಿದೆ.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ *ಡಾ. ಸಿ.ಎನ್. ಮಂಜುನಾಥ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ  ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಚಲನಚಿತ್ರ ನಟ  ಶ್ರೀ ರಮೇಶ್ ಅರವಿಂದ್* ಅವರು ಕನ್ನಡದ ಧ್ರುವತಾರೆಯಾಗಿ ಭಾಗವಹಿಸಲಿದ್ದಾರೆ ಎಂದು  ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಸಿದೆ.

Leave a Reply