This is the title of the web page
This is the title of the web page

Please assign a menu to the primary menu location under menu

Local News

ಲಿಂಗಾಯತ ಧರ್ಮದಲ್ಲಿ ಸ್ತಿö್ರÃ ಪುರುಷ ಭೇದಬಾವ ಇಲ್ಲ : ಪ್ರೊ. ಆರ್ ಎಮ್ ಕರಡಿಗುದ್ದಿ


ಬೆಳಗಾವಿ ೨೪- ಚಾತುರ್ವರ್ಣದಲ್ಲಿ ಸ್ತಿö್ರÃ ಯನ್ನು ಶೋಷಣೆ ಮಾಡಲಾಗುತ್ತಿದೆ. ಅವಳಿಗೆ ಯಾವದೇ ಧಾರ್ಮಿಕ ಸ್ವಾತಂತ್ರö್ಯ ಇಲ್ಲ. ಮೇಲ್ಜಾತಿಯ ಮಹಿಳೆ ಕೂಡಾ ಶೂದ್ರಳು. ಆದರೆ ಬಸವಾದಿ ಶರಣರಿಂದ ಸ್ಥಾಪಿತ ಲಿಂಗಾಯತ ಧರ್ಮದಲ್ಲಿ ಸ್ತಿö್ರÃ ಪುರುಷ ಭೇದಬಾವ ಇಲ್ಲ ಎಂದು ಧಾರ್ಮಿಕ ಚಿಂತಕರಾದ ಪ್ರೊ. ಆರ್ ಎಮ್ ಕರಡಿಗುದ್ದಿ ಅವರು ಇಂದಿಲ್ಲಿ ಹೇಳಿದರು.
ಇದೇ ದಿ. ೨೩ ರಂದು ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟಿö್ರÃಯ ಬಸವ ಸೇನೆ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಆಯೋಜಿಸಿದ ಮಾಸಿಕ ಅನುಭಾವ ಸತ್ಸಂಗದಲ್ಲಿ “ಲಿಂಗಾಯತ ಜಾಗತೀಕರಣ” ಎಂಬ ವಿಷಯ ಕುರಿತು ಉಪನ್ಯಾಸ ನೀಡುತ್ತ ಪ್ರೊ. ಆರ್. ಎಮ್. ಕರಡಿಗುದ್ದಿ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಪ್ರೊ ಕರಡಡಿಗುದ್ದಿ ಅವರು ಲಿಂಗಾಯತ ಧರ್ಮದಲ್ಲಿ ಪುರುಷರಿಗೆ ಇರುವಷ್ಟು ಧಾರ್ಮಿಕ ಸ್ವಾತಂತ್ರö್ಯ ಮಹಿಳೆಯರಿಗೂ ಇದೆ. ಬೇರೆ ಬೇರೆ ಧರ್ಮಗಳಲ್ಲಿ ಮಾತಿನಲ್ಲಿ ತಾಯಿ ದೇವರೆಂದು ಹೇಳಲಾಗುತ್ತದೆ ಆದರೆ ಅವಳಿಗೆ ಧಾರ್ಮಿಕ ಸ್ವಾತಂತ್ರö್ಯ ಇಲ್ಲ ಎಂದು ಹೇಳಿದರು.
ಅದ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆ ಯ ಅಧ್ಯಕ್ಷರೂ ಹಾಗೂ ಹಿರಿಯ ನ್ಯಾಯವಾದಿ ಬಸವರಾಜ ರೊಟ್ಟಿ ಅವರು ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳನ್ನು ಒಗ್ಗೂಡಿಸಿ ಲಿಂಗಾಯತ ಏಕೀಕರಣ ವಾಗಬೇಕು. ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಯ ಹೋರಾಟವು ಹಲವು ವರ್ಷಗಳಿಂದ ನಡೆಯುತ್ತಿದ್ದು, ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ಸಿಗುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.
ಸಾನಿದ್ಯ ವಹಿಸಿದ್ದ ಪೂಜ್ಯ ಶ್ರೀ ಮಲ್ಲಿಕಾರ್ಜುನ ದೇವರು (ಓಂ ಗುರೂಜಿ) ಕುಳವಳ್ಳಿ ಕಿತ್ತೂರ ಅವರು ಲಿಂಗಾಯತ ಧರ್ಮದ ಆಚರಣೆಗಳು ಇಂದಿನ ಯುವ ಪೀಳಿಗೆಗೆ ತಲುಪಿಸಬೇಕಾದ ಹೊಣೆಗಾರಿಕೆ ನಮ್ಮ ತಾಯಂದಿರ ಮೇಲಿದೆ. ಮನೆಯಲ್ಲಿ ನಾವು ನಮ್ಮ ಧರ್ಮದ ಆಚಾರ ವಿಚಾರ ಗಳನ್ನು ನಮ್ಮ ಮಕ್ಕಳಿಗೆ ತಿಳಿಸುವಲ್ಲಿ ವಿಫಲರಾಗತ್ತಿದ್ದೆವೇನೋ ಎಂದಿನುಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದ ಶಕುಂತಲಾ ಹೂಗಾರ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತಿಯ ಸ್ಥಾನ ಪಡೆದ ಮಹಾಲಕ್ಷ್ಮಿ ಕುಂದಗೋಳ ಹಾಗೂ ರಾಜಶ್ರೀ ದೇಯನ್ನವರ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೊಕ ಮಳಗಲಿ, ಚಂದ್ರಪ್ಪ ಬೂದಿಹಾಳ, ಅಡಿವೆಪ್ಪ ಬೆಂಡಿಗೇರಿ, ಸತೀಶ ಚೌಗಲಾ ಪ್ರಭು ಪಾಟಿಲ, ಬಸವರಾಜ ಸುಲ್ತಾಪೂರ ಕರಡಿಮಠ, ಅರವಿಂದ ಪರುಶೆಟ್ಟಿ, ಮುರುಘೇಂದ್ರ ಪಾಟೀಲ, ಘೂಳಪ್ಪ ಹೊಸಮನಿ,ಡಾ. ರವಿ ಪಾಟೀಲ, ಮೋಹನ ಗುಂಡ್ಲೂರ, ಸದಾನಂದ ಬಸೆಟ್ಟಿ, ಸುಜಾತಾ ಮತ್ತಿಕಟ್ಟಿ, ಸುವರ್ಣಾ ಗುಡಸ, ಸುನಂದಾ ಎಮ್ಮಿ, ಅನೀತಾ ಚೆಟ್ಟರ, ವಿವಿದ ಬಡಾವಣೆಗಳಿಂದ ಆಗಮಿಸಿದ ಬಸವ ಅನುಯಾಯಿಗಳು ಭಾಗವಹಿಸಿದ್ದರು.
ವೆದಿಕೆಯ ಮೇಲೆ ರಾಷ್ಟಿö್ರÃಯ ಬಸವ ಸೇನೆಯ ಅಧ್ಯಕ್ಷರಾದ ಶಂಕರ ಗುಡಸ್ ಇಂದಿನ ಪ್ರಸಾದ ದಾಸೋಹಿಗಳು ಹಾಗೂ ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದ ಪೂಜಾ ಕಿರಣ ಸಾಧುನವರ ಬೈಲಹೊಂಗಲ ಅವರ ಉಪಸ್ಥಿತಿತರಿದ್ದರು.
ಜಾಗತಿಕ ಲಿಂಗಾಯತ ಮಹಾಸಭೆಯ ಶರಣೆ ಅನ್ನಪೂರ್ಣ ಮಳಗಲಿ ಮತ್ತು ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ರತ್ನಾ ಬೆಣಚಮರ್ಡಿ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳಗಳನ್ನಾಡಿದರು. ಮುರಿಗೆಪ್ಪ ಬಾಳಿ ನಿರೂಪಿಸಿದರು. ರವೀಂದ್ರ ಹೆದ್ದೂರಶೆಟ್ಟಿ ವಂದಿಸಿದರು.


Gadi Kannadiga

Leave a Reply