This is the title of the web page
This is the title of the web page

Please assign a menu to the primary menu location under menu

Local News

 ಸವದತ್ತಿಯಲ್ಲಿ ವಿಶ್ವಾಸ್ ವೈದ್ಯ ಪರ ಪ್ರಚಾರ ಸಮಾವೇಶ : : ಹೇಳಿಕೆ ತಿರುಚಿ ಬಿಜೆಪಿ ಅಪಪ್ರಚಾರ ನಡೆಸಿದೆ : ಸಿದ್ದರಾಮಯ್ಯ.


ಸವದತ್ತಿ: ಕಾಂಗ್ರೆಸ್ ಅಧಿಕಾರಕ್ಕೆ ತರುವುದು ಜನತೆಯ ಅಭಿಲಾಷೆಯಾಗಿದೆ. ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ಪರ ಅಲೆಯಿದ್ದು ಈ ಕುರಿತು ಚರ್ಚೆ ನಡೆದಿದೆ. ರಾಜ್ಯದ ಮುಖ್ಯಮಂತ್ರಿ ನೀವಲ್ಲ, ನಾವು ಆಗುತ್ತೇವೆ. ಕೊಟ್ಟ ಭರವಸೆ ಈಡೇರಿಸದಿದ್ದಲ್ಲಿ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುವದಿಲ್ಲ್ಲವೆಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬೊಮ್ಮಾಯಿ ವಿರುದ್ಧ ಗುಡುಗಿದರು.
ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ ಕಾಂಗ್ರೆಸ್ ಬ್ರಹತ್ ಸಮಾವೇಶವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಇತರೆ ಪಕ್ಷಗಳ ಶಾಸಕರು, ಎಮ್‍ಎಲ್‍ಸಿಗಳು, ಪ್ರಮುಖ ನಾಯಕರು ಮಾತೃಪಕ್ಷ ತೊರೆದು ಕಾಂಗ್ರೆಸ್ ಪಕ್ಷ  ಸೇರ್ಪಡೆಯಾಗುತ್ತಿರುವದು ಚುನಾವಣೆ ಫಲಿತಾಂಶದ ಮುನ್ಸೂಚನೆಯಾಗಿದೆ. ಮೋದಿಯನ್ನ ವಾರಕ್ಕೆ ಎರಡು ಬಾರಿ ಕರೆಸಿದರೂ ರಾಜ್ಯದಲ್ಲಿ ಅದರ ಗಿಮಿಕ್ ನಡೆಯುವದಿಲ್ಲ. ವೀರಶೈವ ಲಿಂಗಾಯತರಲ್ಲಿ ಒಳ್ಳೆಯ ಸಿಎಮ್‍ಗಳು ಬಂದಿದ್ದಾರೆ, ಆದರೆ ಬೊಮ್ಮಾಯಿ ಯಂತಹ ಬ್ರಷ್ಠ ಮುಖ್ಯಮಂತ್ರಿಯನ್ನ ನಾನು ಕಂಡಿಲ್ಲ ಎಂದಿದ್ದೆ. ಇದನ್ನೇ ತಿರುಚಿ ಬಿಜೆಪಿ ಅಪಪ್ರಚಾರ ನಡೆಸಿ, ತಪ್ಪು ಮಾಹಿತಿ ಹರಿಬಿಡುತ್ತಿದ್ದಾರೆ.ಲೋಕಸಭಾ ಉಪ ಚುನಾವಣೆಯಲ್ಲಿ ಇದೇ ಕ್ಷೇತ್ರದ ಜನತೆ 16.5 ಸಾವಿರಕ್ಕೂ ಅಧಿಕ ಮತಗಳನ್ನು ಕಾಂಗ್ರೆಸ್‍ಗೆ ಹೆಚ್ಚುವರಿಯಾಗಿ ನೀಡಿದ್ದಾರೆ. ಕಳೆದ ಬಾರಿ ಪರಾಭವಗೊಂಡೂ ಜನಪರ ಕಾಳಜಿ ಹೊಂದಿರುವ ವಿಶ್ವಾಸ್ ವೈದ್ಯ ಕ್ಷೇತ್ರದ ಜನತೆಯ ಸಂಪರ್ಕದಲ್ಲಿದ್ದಾರೆ. ಪೂರ್ವದಲ್ಲಿ ಸೂರ್ಯ ಹುಟ್ಟುವದು ಎಷ್ಟು ಸತ್ಯವೋ ವಿಶ್ವಾಸ್ ಜಯಗಳಿಸುವದು ಅಸ್ಟೇ ಸತ್ಯ.ವಿಶ್ವಾಸರಿಗೆ ಕೊಡತಕ್ಕಂತ ಒಂದೊಂದು ಮತಗಳು ಸಿದ್ದರಾಮಯ್ಯನವರಿಗೆ ಕೊಡ್ತಾ ಇದ್ದೀವಿ ಅಂತ ಮತ ಹಾಕಬೇಕು.ಸಿದ್ಧರಾಮಯ್ಯರನ್ನು ಗೆಲ್ಲಿಸಲು ಅಭ್ಯರ್ಥಿ ವಿಶ್ವಾಸ್‍ರಿಗೆ ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಜಯಗಳಿಸಲು ಮತ ನೀಡಿ.ಕಾಂಗ್ರೆಸ್ ಅವಧಿಯಲ್ಲಿ 15 ಲಕ್ಷ ಮನೆ, 2 ಲಕ್ಷ ಕೃಷಿ ಹೊಂಡ ನಿರ್ಮಿಸಲಾಗಿದೆ. ರಾಜ್ಯದಿಂದ ಸೊಸಾಯಿಟಿಗಳಲ್ಲಿನ ರೈತರ ಸಾಲ 8160 ಕೋಟಿ, ಮನಮೋಹನ ಸಿಂಗ್ ಅವರ ಕಾಲದಲ್ಲಿ ಕೇಂದ್ರದಿಂದ ರೂ. 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲಾಗಿತ್ತು ಬಿಜೆಪಿ ತನ್ನ ಆಡಳಿತದಲ್ಲಿ ಒಂದೇ ಒಂದು ಮನೆ ಮಂಜೂರಾತಿ ಮಾಡಿಲ್ಲ. ಕೃಷಿ, ಸೈಕಲ್, ಅನ್ನ, ಶಾದಿ, ಶೂ, ಪಶು ಭಾಗ್ಯ ಸೇರಿ ಇಂದಿರಾ ಕ್ಯಾಂಟೀನ್ ಹಾಗೂ ಎಲ್ಲವನ್ನೂ ನಿಲ್ಲಿಸಿದ್ದಾರೆ. ‘ನ ಖಾವುಂಗಾ ನ ಖಾನೇ ದೂಂಗಾ’ ಎಂದ ಪ್ರಧಾನಿ ಮೋದಿ ಗುತ್ತಿಗೆದಾರರು ನೀಡಿದ ದೂರಿಗೆ ಉತ್ತರಿಸಿಲ್ಲ. ಸಿಎಮ್ ಬಸವರಾಜ ಬೊಮ್ಮಾಯಿ ಆ್ಯಂಡ್ ಟಿಮ್ ಜನರ ಸುಲಿಗೆ ನಡೆಸಿದ್ದಾರೆ. ಇದೆಲ್ಲ ನಡೆದರೂ ಬೊಮ್ಮಾಯಿ ಮಾತ್ರ ಪುರಾವೆ ಕೇಳುತ್ತಾರೆ. ಪ್ರಶಾಂತ ಮಾಡಾಳ ಲಂಚ ಪ್ರಕರಣದಲ್ಲಿ ನಿಖರವಾಗಿ ಸಿಲುಕಿದ್ದರೂ ಪುರಾವೆ ಬೇಕಾ ! 5 ವರ್ಷಗಳಲ್ಲಿ 5.64 ಸಾವಿರ ಕೋಟಿ ಸಾಲದಲ್ಲಿರುವ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಪ್ರತಿಯೊಬ್ಬರ ಮೇಲೆ ರೂ. 78 ಸಾವಿರ ಸಾಲವಿರಿಸಿದ್ದಾರೆ. ಡಬಲ್ ಇಂಜಿನ್ ಸರಕಾರಕ್ಕೆ ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ನೀಡಿಲಾಗುತ್ತದೆ. ರಾಜ್ಯಕ್ಕೆ ಮರಳಿ ಕೇವಲ 45 ಸಾವಿರ ಕೋಟಿ ಮಾತ್ರ ಬರುತ್ತದೆ. ಕೇಂದ್ರ ಅನ್ಯಾಯವೆಸಗಿದೆ.ಬಿಜೆಪಿ ಅಂದರೆ ಸುಳ್ಳಿನ ಫ್ಯಾಕ್ಟರಿ ಇದ್ದಂತೆ.ಈ 40% ಭ್ರಷ್ಟ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.
 ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ ಈ ಕ್ಷೇತ್ರಕ್ಕೆ ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಶಾಸಕರಿಲ್ಲ. ಕಾರ್ಯಕರ್ತರ ಆಸೆಯಂತೆ ಅಭ್ಯರ್ಥಿ ಆಯ್ಕೆಯಾಗಿದೆ. ಗೆಲ್ಲಿಸುವ ಹೊಣೆ ನಿಮ್ಮದು. ಚೋಪ್ರಾ ಮತ್ತು ದ್ಯಾಮನಗೌಡರ ಪಕ್ಷ ನಿಷ್ಠರಾಗಿ ನಟಿಸಿ ಇದೀಗ ಪರೋಕ್ಷವಾಗಿ ಬಿಜೆಪಿ ಬೆಂಬಲಿಸುತ್ತಿದ್ದಾರೆ. ಜೆಡಿಎಸ್ ಗೆ ಮತ ನೀಡಿದರೆ ನೇರವಾಗಿ ಬಿಜೆಪಿಗೆ ಸಹಕರಿಸಿದಂತೆ. ಕಾಂಗ್ರೆಸ್ ಪಕ್ಷದ ಕುರಿತು ಹೆಚ್ಚು ಪ್ರಚಾರ ನಡೆಸಿರೆಂದರು. ಬಿಜೆಪಿಯಿಂದ ಎಲ್ಲ ಸಮುದಾಯಗಳಿಗೆ ಮೋಸವಾಗುತ್ತಿದೆ ಎಂದ ಅವರು ಈ ಬಾರಿ ಕಾಂಗ್ರೆಸ್ ಸರಕಾರ ರಚಿಸುವಲ್ಲಿ ಸಹಕರಿಸಿರೆಂದರು.
ವೇದಿಕೆಯಲ್ಲಿ ಬಿಜೆಪಿ ಪ್ರಮುಖ ಮುಖಂಡರು ಸಿದ್ಧರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.ಸಿದ್ದರಾಮಯ್ಯನವರ ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ಕಂಬಳಿ ಹೊದಿಸಿ ಟಗರು ನೀಡಿ ಸನ್ಮಾನಿಸಿದರು.  ತಡರಾತ್ರಿಯಾದರೂ ಸುಮಾರು 15 ಸಾವಿರಕ್ಕೂ ಅಧಿಕ ಜನ ಕಾರ್ಯಕ್ರಮ ವೀಕ್ಷಿಸಿದರು.
   ಈ ವೇಳೆ ಅಭ್ಯರ್ಥಿ ವಿಶ್ವಾಸ್ ವೈದ್ಯ, ಲಕ್ಷ್ಮಿ ಹೆಬ್ಬಾಳಕರ, ವಿನಯ ಕುಲಕರ್ಣಿ, ವಿನಯ ನಾವಲಗಟ್ಟಿ, ಆರ್.ವಿ. ಪಾಟೀಲ,ರವೀಂದ್ರ ಯಲಿಗಾರ,ರಾಜಶೇಖರ ಕಾರದಗಿ,ಶಿವಾನಂದ ಪಟ್ಟಣಶೆಟ್ಟಿ,ಇನ್ನಿತರ ಪ್ರಮುಖರು ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

Leave a Reply