This is the title of the web page
This is the title of the web page

Please assign a menu to the primary menu location under menu

Local News

ರಾಜ್ಯದಲ್ಲೇ ಬೆಳಗಾವಿ ಗ್ರಾಮೀಣ ಕ್ಷೇತ್ರ ಮಾದರಿ: ಲಕ್ಷಿ÷್ಮÃ ಹೆಬ್ಬಾಳಕರ


ಬೆಳಗಾವಿ: ಇಡೀ ರಾಜ್ಯದಲ್ಲಿಯೇ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಪರಿವರ್ತಿಸಲಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ವಿವಿಧ ಬಗೆಯ ಅನುದಾನಗಳನ್ನು ತಂದು ಅಭಿವೃದ್ಧಿಯ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ ಹೇಳಿದರು.
ಅವರು ಅರಳೀಕಟ್ಟಿ ಗ್ರಾಮಕ್ಕೆ ತೆರಳಿ ಗ್ರಾಮದೇವತೆಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ, ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
“ಗ್ರಾಮೀಣ ಕ್ಷೇತ್ರ ಯಾವುದೇ ಪರಿಸ್ಥಿತಿಯಲ್ಲಿ ಹಿಂದುಳಿಯಬಾರೆದೆನ್ನುವ ಉದ್ದೇಶದಿಂದ ನಾನು ಕ್ಷೇತ್ರದಲ್ಲಿ ಗೈರಾದರೂ ಸಹ ಆಯಾ ಗ್ರಾಮಗಳ ಜನಪ್ರತಿನಿಧಿಗಳಿಗೆ ಸೂಚನೆ ನೀಡುವ ಮೂಲಕ ಎಲ್ಲ ತರಹದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುತ್ತ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದಗಳ ಮುಖೇನ ಯಾವುದೇ ಸ್ವಾರ್ಥವಿಲ್ಲದೇ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದೇನೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತಿದೆ,” ಎಂದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಿ.ಸಿ. ಪಾಟೀಲ ಅಣ್ಣ, ಸುರೇಶ ಇಟಗಿ, ಜಗದೀಶ್ ಯಳ್ಳೂರ, ಸಿದ್ದಣ್ಣ ಶಿಂಗಡಿ, ಹೊಳೆಬಸಪ್ಪ ಕರಲಿಂಗಣ್ಣವರ, ಗುರಪ್ಪ ಹೆಬ್ಬಾಳ್ಕರ್, ಶಂಕರ್ ಯಳ್ಳೂರ, ಪಾರವ್ವ ಹುದ್ದಾರ, ಶಿವಾನಂದ ಹಲಕರ್ಣಿಮಠ, ಗೌಸ್ ಜಾಲಿಕೊಪ್ಪ, ಶ್ರೀಕಾಂತ ಮದುಬರ್ಮಣ್ಣವರ, ರಾಜು ಉಪ್ಪಾರ್, ನಾಗರಾಜ ಕರಲಿಂಗಣ್ಣವರ, ಗ್ರಾಮ ಪಂಚಾಯಿತಿ ಸದ್ಯಸರು, ಆಪ್ತ ಸಹಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Gadi Kannadiga

Leave a Reply