This is the title of the web page
This is the title of the web page

Please assign a menu to the primary menu location under menu

State

ಪಠ್ಯದಲ್ಲಿ ವೀರ ವನಿತೆಯರ ಸಾಹಸಗಾಥೆ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಹುಬ್ಬಳ್ಳಿ:ಬೆಳವಡಿ ಮಲ್ಲಮ್ಮ ,ಕೆಳದಿ ಚೆನ್ನಮ್ಮ ಸೇರಿದಂತೆ ಕನ್ನಡನಾಡಿನ ವೀರವನಿತೆಯರ ಸಾಹಸಗಾಥೆಗಳನ್ನು ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ಅವರ ಶೌರ್ಯ,ಸಾಹಸಗಳ ಪರಿಚಯ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ಆದರ್ಶನಗರದ ಸ್ವಗೃಹದಲ್ಲಿ ಇಂದು ಬೆಳವಡಿ ಮಲ್ಲಮ್ಮನವರು ಮರಾಠಾ ಸೈನ್ಯದ ವಿರುದ್ಧದ ಜಯಗಳಿಸಿದ 374 ವರ್ಷಾಚರಣೆ ಸ್ಮರಣಾರ್ಥ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಇಂದು ಸಾಂಕೇತಿಕವಾಗಿ ಬೆಳವಡಿ ಮಲ್ಲಮ್ಮ ವಿಜಯದಿನವನ್ನು ಆಚರಿಸಲಾಗಿದೆ.ಕನ್ನಡನಾಡಿನ ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ,ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ಸೇರಿದಂತೆ ಅನೇಕ ವೀರವನಿತೆಯರು ನಡೆಸಿದ ಹೋರಾಟ ವಿರೋಚಿತವಾಗಿದೆ.ಈ ಸಾಹಸಗಾಥೆಗಳನ್ನು ಪಠ್ಯದಲ್ಲಿ ಅಳವಡಿಸಿ ,ಮುಂದಿನ ಪೀಳಿಗೆಗೆ ಪರಿಚಯಿಸಲಾಗುವುದು.ಬರುವ ವರ್ಷ ಬೆಳವಡಿ ಗ್ರಾಮದಲ್ಲಿಯೇ ಅರ್ಥಪೂರ್ಣವಾಗಿ ವಿಜಯದಿನ ಆಚರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್, ಶಾಸಕ ಅರುಣ್ ಶಾಹಪುರ, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ,ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್,ಮಾಜಿ ಶಾಸಕ ಮೋಹನ್ ಲಿಂಬಿಕಾಯಿ, ಹುಬ್ಬಳ್ಳಿ ಶಹರ ತಹಸೀಲ್ದಾರ ಶಶಿಧರ ಮಾಡ್ಯಾಳ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಮತ್ತಿತರರು ಉಪಸ್ಥಿತರಿದ್ದರು.


Gadi Kannadiga

Leave a Reply