This is the title of the web page
This is the title of the web page

Please assign a menu to the primary menu location under menu

State

ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರಣ ಉದ್ಘಾಟಿಸಿದ ಸಚಿವ ಎಚ್.ಕೆ.ಪಾಟೀಲ ಸಂವಿಧಾನದ ೭೩ನೇ ತಿದ್ದುಪಡಿಯಿಂದ ಪಂಚಾಯತ ರಾಜ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ


ಗದಗ ಸೆ.೧: ಸಂವಿಧಾನದ ೭೩ನೇ ತಿದ್ದುಪಡಿ ತಂದ ನಂತರದ ಮೂವತ್ತು ವರ್ಷ ನಡೆದು ಬಂದ ಹಾದಿಯ ಅವಲೋಕನ ಮಾಡುವದು ಗ್ರಾಮ ಸ್ವರಾಜ ಮತ್ತು ಪಂಚಾಯತ ರಾಜ್, ಕರ್ನಾಟಕ ರಾಜ್ಯದಲ್ಲಿ ಒಂದು ಪಯಣ ರಾಷ್ಟ್ರೀಯ ವಿಚಾರ ಸಂಕೀರಣದ ಉದ್ದೇಶವಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದರು.
ನಾಗಾವಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದಲ್ಲಿ ಶುಕ್ರವಾರದಂದು ಜರುಗಿದ ಗ್ರಾಮ ಸ್ವರಾಜ ಮತ್ತು ಪಂಚಾಯತ ರಾಜ್ ಕರ್ನಾಕ ರಾಜ್ಯದಲ್ಲಿ ಒಂದು ಪಯಣ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಭಾರತೀಯ ಸಂವಿಧಾನದ ೭೩ನೇ ತಿದ್ದುಪಡಿ ತರಲು ಅವಿರತ ಪ್ರಯತ್ನ ಪಟ್ಟವರಲ್ಲಿ ಮಾಜಿ ಪ್ರಧಾನಿ ರಾಜೀವ ಗಾಂಧೀ ಅವರು ಪ್ರಮುಖರು. ನಂತರ ಪ್ರಧಾನಿಗಳಾದ ನರಸಿಂಹರಾವ್ ಅವರ ಅವಧಿಯಲ್ಲಿ ೭೩ನೇ ತಿದ್ದುಪಡಿ ತರಲಾಯಿತು. ಇದರಿಂದ ಗ್ರಾಮೀಣ ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಾಲವಣೆಯನ್ನು ಇಂದು ನಾವೆಲ್ಲ ಕಾಣುತ್ತಿದ್ದೇವೆ. ಗ್ರಾಮ ಪಂಚಾಯತ ಮಟ್ಟದಲ್ಲಿ ಮೀಸಲಾತಿ ಜಾರಿಗೊಳಿಸಿದ ಪ.ಜಾ. ಹಾಗೂ ಪ.ಪಂಗಡದ ಮಹಿಳೆಯರಿಗೂ ಗ್ರಾಮ ಪಂಚಾಯತ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.ಮೂರು ದಶಕಗಳ ಈ ಪಯಣದಲ್ಲಿ ಗುರಿ ಸಾಧನೆಯ ಅವಲೋಕನ ಮಾಡಬೇಕಾಗಿದೆ. ಇದು ಅತೀ ಪ್ರಸ್ತುತ ಕಾಲವಾಗಿದ್ದು ಈ ಸಮಯದಲ್ಲಿ ರಾಜಕೀಯ ಪಕ್ಷಗಳು ಪಂಚಾಯತಗಳಿಗೆ ನೀಡಿದ ಕೊಡುಗೆಯನ್ನು ಮೆಲಕು ಹಾಕಬೇಕಾಗಿದೆ. ರಾಷ್ಟ್ರಕ್ಕೆ ಹೋಲಿಸಿದರೆ ರಾಜ್ಯದಲ್ಲಿನ ಪಂಚಾಯತಗಳು ಉತ್ತಮ ಸ್ಥಿತಿಯಲ್ಲಿವೆ. ಪರಿಶಿಷ್ಟರನ್ನು, ಹಿಂದುಳಿದ, ಬಡವರ ಹಾಗೂ ಮಹಿಳೆಯರನ್ನು ಪಂಚಾಯತ ಅಧ್ಯಕ್ಷರನ್ನಾಗಿಸಲಾಗಿದೆ. ಆದರೆ ಶತ ಶತಮಾನಗ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಮಹಿಳೆಗೆ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ವತಂತ್ರ÷್ಯ ನೀಡುವಂತೆ ಬಸವಣ್ಣನವರು ಹೇಳಿದ್ದರೂ ಕೂಡ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಯಾವುದೇ ಸ್ಥಾನಮಾನ ನೀಡಿರಲಿಲ್ಲ ಆದರೆ ೭೩ ನೇ ಕಾನೂನು ತಿದ್ದುಪಡಿಯ ಮೂಲಕ ಮಹಿಳೆಯರಿಗೆ ಎಲ್ಲ ಸ್ಥಾನಮಾನಗಳನ್ನು ನೀಡಲಾಯಿತು. ಈ ತಿದ್ದುಪಡಿ ಕಾನೂನು ಅನುಷ್ಠಾನದಲ್ಲಿ ರಾಜ್ಯವು ಮುಂಚೂಣಿಯಲ್ಲಿತ್ತು.
ಬರುವ ದಿನಮಾನಗಳಲ್ಲಿ ಇಡೀ ರಾಷ್ಟ್ರಕ್ಕೆ ಗ್ರಾಮಗಳ ಅಭಿವೃದ್ಧಿ ಕುರಿತು ಮಾರ್ಗದರ್ಶನ ನೀಡುವ ಕಾರ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯದಿಂದ ಮಾಡುವಂತಾಗಲಿ ಎಂದರು. ಪಂಚಾಯತರಾಜ ವ್ಯವಸ್ಥೆಯಲ್ಲಿ ಅಗಾಧವಾದ ಶಕ್ತಿ ಇದೆ. ೧೫ ಸಾವಿರಕ್ಕೂ ಹೆಚ್ಚು ಗ್ರಾಮ ಸಭೆಗಳನ್ನು ೮೦ ಸಾವಿರಕ್ಕು ಹೆಚ್ಚು ಕೆಲಸಗಳನ್ನು ನಿಗದಿಪಡಿಸಿ ತಳಮಟ್ಟದಿಂದ ಮೆಲ್ಮಟ್ಟದ ವರೆಗೆ ಕಾರ್ಯ ಮಾಡಲು ಯೋಜನೆಗಳನ್ನು ರೂಪಿಸಿದ್ದೇವು. ಪಂಕ್ಷನ, ಫಂಕ್ಷನರಿ ಹಾಗೂ ಫಂಡಗಳ ಮೂಲಕ ಪಂಚಾಯತಗಳಿಗೆ ಜವಾಬ್ದಾರಿ ನೀಡಲಾಯಿತು. ೨೧ ಅಂಶಗಳ ಕಾರ್ಯಕ್ರಮಗಳನ್ನು ನರೇಗಾ ಯೋಜನೆಯಡಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ನಮ್ಮ ಪಂಚಾಯತಗಳ ವ್ಯವಸ್ಥೆ ಉತ್ತಮವಾಗಿದ್ದು ಅವುಗಳ ಬಲವರ್ಧನೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಪಂಚಾಯತ ವ್ಯವಸ್ಥೆಯಲ್ಲಿನ ಜನ ಪ್ರತಿನಿಧಿಗಳು ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿರಬೇಕು. ಗಾಂಧೀ ಕಾಯಕ ಸಾಕ್ಷಿ ತಂತ್ರಜ್ಞಾನದ ಸದ್ಬಳಕೆ ಹಾಗೂ ಗ್ರಾಮ ಪಂಚಾಯತಗಳಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡಿಕರಣ ಮಾಡುವ ಅಧಿಕಾರದ ಸದ್ಬಳಕೆ ಆಗ ಬೇಕು. ಗದಗ ಜಿಲ್ಲೆಯು ಗ್ರಾಮ ಪಂಚಾಯತ ಹಂತದಲ್ಲಿ ತಳಮಟ್ಟದಿಂದ ಮೆಲ್ಮಟ್ಟಕ್ಕೆ ಯೋಜನೆ ರೂಪಿಸಿವದರಲ್ಲಿ ಮುಂಚೂಣಿಯಲ್ಲಿದೆ.
ಗ್ರಾಮಗಳು ವ್ಯಾಜ್ಯ ಮುಕ್ತ, ತ್ಯಾಜ್ಯ ಮುಕ್ತ, ಶೋಷಣೆ ಮುಕ್ತ, ಭಯ ಮುಕ್ತ, ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿಸುವ ಕಾನೂನುಗಳನ್ನು ನೀಡಲಾಗಿದೆ. ವಿಶ್ವವಿದ್ಯಾಲಯದ ಪ್ರತಿ ಐದು ವಿಧ್ಯಾರ್ಥಿಗಳಿಗೆ ಒಂದೊಂದು ಗ್ರಾಮಗಳನ್ನು ನೀಡಿ ಗ್ರಾಮಗಳನ್ನು ವ್ಯಾಜ್ಯ, ತ್ಯಾಜ್ಯ, ಶೋಷಣೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿಸಲು ಪಣ ತೋಡಲು ಕರೇ ನೀಡಿದರು.
ಭಾರತೀಯ ಸಾರ್ವಜನಿಕ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ ಅವರು ಮಾತನಾಡಿ ಸುಮಾರು ಹತ್ತು ವರ್ಷಗಳ ಹಿಂದೆ ಮಾನ್ಯ ಸಚಿವರ ಆಶಯದಂತೆ ಈ ವಿಶ್ವವಿದ್ಯಾಲಯ ನಿರ್ಮಾಣ ಕುರಿತಂತೆ ಕಾರ್ಯ ಪ್ರವೃತ್ತರಾಗಿದ್ದೇವು. ಈ ವಿಶ್ವವಿದ್ಯಾಲಯ ಸಾಮಾನ್ಯ ವಿಶ್ವ ವಿದ್ಯಾಲಯಗಳಂತೆ ಕಾರ್ಯನಿರ್ವಹಿಸದೇ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಪಂಚಾಯತ ರಾಜ ವ್ಯವಸ್ಥೆಗೆ ತಿದ್ದುಪಡಿ ತರುವ ಮೂಲಕ ಪಂಚಾಯತ ರಾಜ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ವಾರ್ಡ ಸಭೆಗಳ ಸಬಲೀಕರಣ, ಭಾಗೀದಾರರ ಸಮಿತಿಗಳ ಸಬಲೀಕರಣ, ಆಡಳಿತ ವಿಕೇಂಧ್ರಿಕರಣ ಅತೀ ಅವಶ್ಯಕವಾಗಿದೆ ಎಂದರು. ಪಂಚಾಯತಗಳಲ್ಲಿ ಆಡಳಿತ ವಿಕೇಂದ್ರೀಕರಣದ ಕಾರ್ಯವಾಗಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಪಂಚಾಯತ ರಾಜ್ ಕಮಿಷನರೇಟ ನಿರ್ದೆಶಕಾರದ ಏಕಾಂತಪ್ಪ ಮಾತನಾಡಿ ಪಂಚಾಯ ರಾಜ್ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಗ್ರಾಮ ಪಂಚಾಯತಗಳಿಗೆ ಹೆಚ್ಚಿನ ಬಲ ತುಂಬಲಾಗಿದೆ. ಗ್ರಾಮ ಪಂಚಾಯತಗಳು ತಮ್ಮ ವ್ಯಾಪ್ತಿಯಲ್ಲಿನ ಅಭಿವೃದ್ದಿ ಕಾಮಗಾರಿಗಳನ್ನು ನಿಯಂತ್ರಿಸುವ ಕಾರ್ಯವಾಗಬೇಕು. ಕಾನೂನು ತಿದ್ದುಪಡಿ ತರುವ ಮೂಲಕ ಗ್ರಾಮಗಳ ಅಭಿವೃದ್ಧಿಗಾಗಿ ಜನರ ಸಹಭಾಗಿತ್ವವಾಗ ತೊಡಗಿತು. ಪಂಚತಂತ್ರ ಕಾರ್ಯವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಸಂವಿಧಾನದ ೭೩ನೇ ತಿದ್ದುಪಡಿಯ ಮೂಲಕ ಗ್ರಾಮೀಣ ಜನರನ್ನು ಗೌರವಯುತ ಸ್ಥಾನಕ್ಕೆ ಕೊಂಡೊಯ್ಯಲು ಸಹಕಾರಿಯಾಗುತ್ತಲಿದೆ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ಮಾತನಾಡಿ ಗ್ರಾಮ ಸ್ವರಾಜ್ ಕಲ್ಪನೆ ಸಾಕಾರಕ್ಕೆ ವಿಶ್ವವಿದ್ಯಾಲಯ ಸಂಪೂರ್ಣ ಕಾರ್ಯಬದ್ಧವಾಗಿದೆ ಎಂಬ ವಿಶ್ವಾಸ ನಮ್ಮದು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ಎಸ್.ಎಸ್.ಮಿನಾಕ್ಷಿ ಸುಂದರಂ ಸೇರಿದಂತೆ ವಿಷಯ ತಜ್ಞರು, ಸಂಶೋಧನಾ ವಿಧ್ಯಾರ್ಥಿಗಳು, ಗಣ್ಯರು ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಲಕ್ಕಣ್ಣವರ ಅತಿಥಿಗಳನ್ನು ಸ್ವಾಗತಿಸಿದರು.


Leave a Reply