This is the title of the web page
This is the title of the web page

Please assign a menu to the primary menu location under menu

State

ಕೊಪ್ಪಳದಲ್ಲಿ ೩೦ ಹಾಸಿಗೆಗಳ ಕಾರಾವಿಯ ಆಸ್ಪತ್ರೆಯ ಲೋಕಾರ್ಪಣೆ


ಕೊಪ್ಪಳ ಮಾ.೨೧ : ಕಾರ್ಮಿಕರ ರಾಜ್ಯ ವಿಮಾ ಯೋಜನೆ ಸೇವೆಗಳಡಿಯಲ್ಲಿ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ೩೦ ಹಾಸಿಗೆಗಳ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯು ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಾರ್ಚ ೨೧ರಂದು ಲೋಕಾರ್ಪಣೆಯಾಯಿತು.
ಬಳಿಕ ವೇದಿಕೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವರಾದ ಹಾಲಪ್ಪ ಬಸಪ್ಪ ಆಚಾರ ಅವರು ಮಾತನಾಡಿ, ದೇಶದಲ್ಲಿ ಬಹುಸಂಖ್ಯಾತರಾಗಿರುವ ಕಾರ್ಮಿಕ ಬಂಧುಗಳಿಗೆ ಆರೋಗ್ಯ ಸೌಕರ್ಯ ಕೊಡಲು ಕೇಂದ್ರ ಸರ್ಕಾರವು ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಗಳಿಗೆ ಚಾಲನೆ ಕೊಡುತ್ತಿದೆ. ಇದರ ಭಾಗವಾಗಿ ನಮ್ಮ ಭಾಗದಲ್ಲಿ ಸಹ ಈ ಆಸ್ಪತ್ರೆ ಲೋಕಾರ್ಪಣೆ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಕೇಂದ್ರ ಸರ್ಕಾರದಿಂದ ಮೊದಲು ಮೂರು ವರ್ಷ ಮುಂದುವರೆದು ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಅನುದಾನದಿಂದ ಈ ಆಸ್ಪತ್ರೆ ನಡೆಯಲಿದೆ. ಜಿಲ್ಲೆಯ ಕಾರ್ಮಿಕರು ಇದರ ಸದುಪಯೋಗ ಪಡೆಯಬೇಕು ಎಂದರು. ಪ್ರಧಾನಮಂತ್ರಿಗಳಾದ ಮಾನ್ಯ ನರೇಂದ್ರ ಮೋದಿಜಿಯವರ ದೂರದೃಷ್ಟಿಯಿಂದಾಗಿ ದೇಶದ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ತಿಳಿಸಿದರು. ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ, ಯಶಸ್ವಿನಿಯಂತಹ ಯೋಜನೆಗಳು ಜನರಿಗೆ ಸಹಕಾರಿಯಾಗಿವೆ ಎಂದರು.
ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ, ಕೊಪ್ಪಳ ಭಾಗದಲ್ಲಿ ಅನೇಕ ಕಾರ್ಖಾನೆಗಳು ಇರುವುದರಿಂದ ಈ ಭಾಗದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ ಕೊಪ್ಪಳದಲ್ಲಿ ಆಗಬೇಕು ಎನ್ನುವುದು ನಮ್ಮೆಲ್ಲರ ಬಹುದಿನಗಳ ಬೇಡಿಕೆಯಾಗಿತ್ತು. ನಮ್ಮ ಕನಸಿನಂತೆ ಜಿಲ್ಲೆಯಲ್ಲಿ ಈ ಆಸ್ಪತ್ರೆ ಉದ್ಘಾಟನೆಯಾಗಿರುವುದು ಕೊಪ್ಪಳ ಜಿಲ್ಲೆಯ ಜನರ ಭಾಗ್ಯವಾಗಿದೆ. ಇದಕ್ಕೆ ಅವಕಾಶ ಮಾಡಿದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಈ ಆಸ್ಪತ್ರೆ ಸಮರ್ಪಕವಾಗಿ ಮುಂದುವರೆಯಲು ಜಿಲ್ಲಾಸ್ಪತ್ರೆಯ ಸಹಕಾರ ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಈ ಆಸ್ಪತ್ರೆಯಿಂದ ಕಾರ್ಮಿಕರಿಗೆ, ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು. ಕಡು ಬಡವರು, ದೀನ ದಲಿತರಿಗೆ ಇನ್ನು ಹೆಚ್ಚಿನ ಆರೋಗ್ಯ ಸೌಕರ್ಯಗಳು ಸಿಗಬೇಕಿದೆ ಎಂದರು. ಆಸ್ಪತ್ರೆಗಳಿಗೆ ಅಗತ್ಯವಾಗಿ ಬೇಕಾದ ವೈದ್ಯರು ಮತ್ತು ಇನ್ನೀತರ ಸಿಬ್ಬಂದಿ ನೇಮಕದ ಪ್ರಯತ್ನದಲ್ಲಿ ಅಧಿಕಾರಿಗಳ ಪಾತ್ರ ಕೂಡ ಅವಶ್ಯವಾಗಿದೆ ಎಂದು ತಿಳಿಸಿದರು. ರೋಗಿಗಳು ಬಂದಾಗ ತಕ್ಷಣ ಸ್ಪಂದಿಸಬೇಕು. ಆಸ್ಪತ್ರೆಯ ಶುಚಿತ್ವಕ್ಕೆ ಒತ್ತು ಕೊಡಬೇಕು ಎಂದು ಅವರು ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ಸಲಹೆ ಮಾಡಿದರು.
ಕಾರ್ಮಿಕರ ರಾಜ್ಯ ವಿಮಾ ಯೋಜನೆಯ ನಿರ್ದೇಶಕರಾದ ಡಾ.ನಾರಾಯಣಸ್ವಾಮಿ ಅವರು ಪ್ರಾಸ್ತಾವಿಕ ಮಾತನಾಡಿ, ಕೊಪ್ಪಳಕ್ಕೆ ಈ ಆಸ್ಪತ್ರೆ ಬರಲು ಸಚಿವರ, ಸಂಸದರ ಮತ್ತು ಶಾಸಕರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ಜಿಲ್ಲಾಧಿಕಾರಿಗಳಾದ ಎಂ ಸುಂದರೇಶಬಾಬು, ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ, ಡಿಎಚ್‌ಓ ಡಾ.ಅಲಕನಂದಾ ಮಳಗಿ, ಡಿಎಸ್‌ಓ ಡಾ.ಈಶ್ಚರ ಸವಡಿ, ಡಾ.ವೇಣುಗೋಪಾಲ, ಕಾರಾವಿಯ ಆಸ್ಪತ್ರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. ರಮೇಶ ಕರಬಸಮ್ಮನವರ ನಿರೂಪಿಸಿದರು.


Leave a Reply