This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯಲ್ಲಿ 82 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆ


ಬೆಳಗಾವಿ:ನಗರದ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ದಿನಾಂಕ ನಡೆದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು.

ಬೆಳಿಗ್ಗೆ 10 30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಹಾಗೂ ಪಶುಸಂಗೋಪನಾ ಸಚಿವರಾದ ಪ್ರಭು ಚೌಹಾಣ್ ಅವರಿಂದ ಗೋಪೂಜೆಯ ಮೂಲಕ ವಿವಿಧ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.

ನಂತರ ಸಚಿವ ಪ್ರಭು ಚೌಹಾಣ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ 82 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಲೋಕಾರ್ಪಣೆ ಮಾಡಿದರು.. ಇದೆ ವೇಳೆ ಉಸ್ತುವಾರಿ ಸಚಿವರು ಪಶುಸಂಗೋಪನಾ ಇಲಾಖೆಗೆ ಸಂಭಂದಿಸಿದಂತೆ ವಿವಿಧ ಕಟ್ಟಡಗಳ ಉದ್ಘಾಟನೆ ಮಾದುದರು.

ವೇದಿಕೆ ಕಾರ್ಯಕ್ರಮದಲ್ಲಿ ಇಲಾಖೆಯ ಸಾಕ್ಷ್ಯ ಚಿತ್ರ ಪ್ರದರ್ಶನ ಮತ್ತು ಜ್ಯೋತಿ ಬೆಳಗಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಪಶು ಸಾಕಾಣಿಕೆ ರೈತರ ಸಂಪತ್ತು, ರೈತರಿಗೆ ಅದೊಂದು ವರದಾನ, ಭೂಮಿ ಫಲವತ್ತಾಗಲೂ ಹಾಗೂ ನಮ್ಮ ಸಂಪತ್ತು ಹೆಚ್ಚಾಗಲು ದನಕರುಗಳು ಬೇಕೇಬೇಕು.. ಪಶುಸಂಗೋಪನಾ ಇಲಾಖೆಯಲ್ಲಿ ಪ್ರಭು ಚೌಹಾಣ್ ಅವರು ಈ ಹಿಂದೆ ಯಾರೂ ಮಾಡದಂತೆ ಸಾಧನೆ ಮಾಡಿದ್ದಾರೆ, ಅವರ ಕೆಲಸಕ್ಕೆ ನಾವು ಹೆಮ್ಮೆ ಪಡುತ್ತೇವೆ ಎಂದರು.. ದನಕರುಗಳ ಸಾಕಾಣಿಕೆಗೆ ಸರ್ಕಾರ ಅನೇಕ ಯೋಜನೆ ತಂದಿದೆ ಅದರ ಉಪಯೋಗ ಜನರು ಪಡೆಯಬೇಕು ಎಂದರು.

ನಂತರ ಸಮಾರಂಭದಲ್ಲಿರುವ ಗಣ್ಯರಿಗೆ ಸ್ಮರಣಿಕೆಗಳನ್ನು ಅರ್ಪಣೆ ಮಾಡಲಾಯಿತು, ಭಿ ಅದೇವೇಳೆ 15 ಪಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಜಿಲ್ಲಾಮಟ್ಟದ ಅಧಿಕಾರಿಗಳು, ಇಲಾಖಾ ಅಧಿಕಾರಿಗಳು ಭಾಗಿಯಾಗಿದ್ದರು.


Gadi Kannadiga

Leave a Reply