This is the title of the web page
This is the title of the web page

Please assign a menu to the primary menu location under menu

Local News

ಅವರಾದಿ: ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ


ಮೂಡಲಗಿ: ತಂದೆ-ತಾಯಿಗಳು ನಮ್ಮಗೆ ಜೀವಂತ ದೇವರು, ಗುರುಗಳು ನಮ್ಮಗೆ ಗುರಿ ಮುಟ್ಟಲು ದಾರಿ ದೀಪಗಳಾಗುವರು ಎಂದು ಯೋಗಾ ಶಿಕ್ಷಕ ರಾಘವೆಂದ್ರ ಎಂ.ನೀಲನ್ನವರ ಶಾಲಾ ಮಕ್ಕಳಿಗೆ ಕೀವಿ ಮಾತು ಹೇಳಿದರು.
ಅವರು ತಾಲೂಕಿನ ಅವರಾದಿ ಗ್ರಾಮದ ಶ್ರೀ ಮಹಾಲಕ್ಷ್ಮೀ ವಿದ್ಯಾವರ್ದಕ ಶಿಕ್ಷಣ ಸಂಸ್ಥೆಯ ಶ್ರೀ ಮಹಾಲಕ್ಷ್ಮೀ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾವಚನ ಸ್ವೀಕಾರ ಸಮಾರಂಭದಲ್ಲಿ ಭಾಃವಹಿಸಿ ಮಾತನಾಡಿ, ಮಕ್ಕಳು ಜೀವನದಲ್ಲಿ ಐದು ಸೂತ್ರಗಳನ್ನು ಅಳಡಿಸಿಕೊಂಡರೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.
ಶಾಲೆ ಮುಖ್ಯ ಶಿಕ್ಷಕ ಎ.ಪಿ.ಬಿ//ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆಯನ್ನು ಅಳವಡಿಸಿಕೊಂಡು ಶಾಲೆಯ ನಿಯಮಗಳನ್ನು ಪಾಲಿಸಬೇಕೆಂದ ಅವರು ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸಂಸ್ಥೆಯ ಅಧ್ಯಕ್ಷ ಎಂ.ಎಂ.ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ಎಂ.ಬಿ.ಪಾಟೀಲ ಪರಿಚಯಿಸಿದರು, ವಿದ್ಯಾರ್ಥಿ ಪ್ರೀಯಾ ಹಮ್ಮಿದಡ್ಡಿ, ಸೃಷ್ಠಿ ಪಾಟೀಲ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪಿ.ಆರ್.ಜಕ್ಕನವರ ಸ್ವಾಗತಿಸಿದರು, ವಾಯ್.ಎಲ್.ದೊಡಮನಿ ನಿರೂಪಿಸಿದರು, ಬಿ.ಡಿ.ತೇರದಾಳ ವಂದಿಸಿದರು ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.


Leave a Reply