ಯಮಕನಮರಡಿ:- ಯಮಕನಮರಡಿ ವಿಧಾಸಭಾ ಮತಕ್ಷೇತ್ರದಲ್ಲಿ ಸಾಕಷ್ಟು ವಿರೋದವಿದ್ದರೂ ಕೂಡಾ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಸಂಘಟಿತರಾಗಿ ಭಾರತೀಯ ಜನತಾ ಪಕ್ಷವನ್ನು ಸಂಘಟನೆ ಮಾಡಿದ್ದು ಸಂತಸದ ಸಂಗತಿ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಅವರು ಮಂಗಳವಾರ ದಿ. ೨೯ ರಂದು ಬೆಳ್ಳಂಕಿ ಗ್ರಾಮದಲ್ಲಿ ೨೦೧೯-೨೦ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ £ರ್ಮಿಸಲಾದ ಬಸ್ ತಂಗುದಾನ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಜನಪರ ಯೋಜನೆಗಳಾದ ಉಜ್ವಲಾ ಗ್ಯಾಸ ವಿತರಣೆ, ಜಲಜೀವನ ಮಿಷನ್ ಯೋಜನೆಗಳು ಪ್ರತಿಯೊಂದು ಗ್ರಾಮಗಳಿಗೆ ಮುಟ್ಟಿಸಲಾಗುತ್ತಿದ್ದು, ಹೀಗಾಗಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಯಾಗುತ್ತಿದೆ. ಕಳೆದ ಎರಡು ವರ್ಷಗಳ ಸಂಸದರ ಅನುದಾನವು ಕೋವಿಡ್ £ರ್ವಹಣೆಗೆ ಬಳಕೆ ಮಾಡಲಾಗಿದೆ. ಆದರೂ ಕೂಡಾ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಸಚಿವೆ ಶಶಿಕಲಾ ಜೊಲ್ಲೆಯವರ ಅನುದಾನದಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ದೇವಸ್ಥಾನಗಳು ಹಾಗೂ ಮಸೀದಿಗಳ ಜೀರ್ಣೋದ್ದಾರಕ್ಕಾಗಿ ಅನುದಾನ ಕೂಡಾ ಮಾಡಲಾಗಿದೆ ಗ್ರಾಮಸ್ಥರು ಸರ್ಕಾರದ ಜನಪರ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಗ್ರಾಮಗಳ ಅಭಿವೃದ್ದಿಯನ್ನು ಮಾಡಿಕೊಳ್ಳಬೇಕೆಂದು ಹೇಳಿದರು.
ರಾಜ್ಯ ಕರಕುಶಲ £ಗಮದ ಅದ್ಯಕ್ಷ ಮಾರುತಿ ಅಷ್ಟಗಿ ಮಾತನಾಡಿ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳ ಪರ್ವ ನಡೆದಿದ್ದು, ಈ ಹಿಂದಿನ ಸಂಸದರು ಮಾಡಲಾಗದ ಅಭಿವೃದ್ದಿ ಕಾರ್ಯಗಳನ್ನು ಈಗಿನ ಸಂಸದರಾದ ಅಣ್ಣಾಸಾಹೇಬ ಜೊಲ್ಲೆಯವರು ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್.ಟಿ.ಮೊರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ, ಯಮಕನಮರಡಿ ಬಿಜೆಪಿ ಉತ್ತರ ಮಂಡಳ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ರವಿ ಹಂಜಿ, ಯಮಕನಮರಡಿ ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ಸಿದ್ದಲಿಂಗ ಸಿದ್ದಗೌಡರ, ಕರಗುಪ್ಪಿ ಗ್ರಾ.ಪಂ. ಅಧ್ಯಕ್ಷ ಗುರುಸಿದ್ದ ಪಾಯನ್ನವರ, ಹಿಡಕಲ್ ಸಂಗಮ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರರಾವ ಬಾಂದುರ್ಗೆ, ರಾವಸಾಹೇಬ ಶಿಂದೆ, ಯಲ್ಲಪ್ಪ ಗಡಕರಿ, ಚಂದ್ರಶೇಖರ ಕಾಪಸಿ, ಅಣ್ಣಾಸಾಹೇಬ ಬೆಣವಾಡಿ, ಶಿವಾನಂದ ಮಸಗುಪ್ಪಿ, ಸಚೀನ ಶಿಂದೆ, ಸಕಾರಾಮ ಘಾಟಗೆ, ಬಾಳು ದೇಸಾಯಿ, ಬಾಳು ಪಾಟೀಲ, ವಸಂತ ದೇಸಾಯಿ, ಜಯವಂತ ದೇಸಾಯಿ, ಮೋಹನ ನಾಯಿಕ, ಸಂಜಯ ಪಾಟೀಲ, ಶಿವಾಜಿ ಮೊಸಳೆ, ವಿಜಯ ಪಾಟೀಲ, ದಶರಥ ದೇಸಾಯಿ, ಸಿದ್ದಪ್ಪ ಕಾಂಬಳೆ, ವಿಶಾಲ ದೇಸಾಯಿ, ಪ್ರತಾಥ ಘಾಟಗೆ, ಬೈರು ಬೋರಗಾಂವ, ಪ್ರಸಾದ ದಡ್ಡಿ, ಜನಾರ್ದನ ಪಾಟೀಲ, ಶಿವಾಜಿ ನಾಯಿಕ, ಶಿವಶಂಕರ ಕಾಂಬಳೆ, ಮಾರುತಿ ಪಾಟೀಲ, ಹಾಗೂ ಸಮಸ್ತ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
Gadi Kannadiga > Local News > ಸಂಸದರಿಂದ ಬಸ್ ತಂಗುದಾನ ಉದ್ಘಾಟನೆ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023