ಯರಗಟ್ಟಿ: ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಕೇಂದ್ರ ಮಟ್ಟದ ಕ್ರೀಡಾಕೂಟವನ್ನು ಮುರಗೋಡ ಠಾಣೆಯ ಸಿಪಿಐ ಈರಯ್ಯ ಮಠಪತಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ, ಮಕ್ಕಳು ಕ್ರೀಡಾಸ್ಪೂರ್ತಿಯಿಂದ ಆಟವಾಡಬೇಕು. ಪಾಲಕರು ಹಾಗೂ ಶಿಕ್ಷಕರು ಹೆಮ್ಮೆ ಪಡುವಂತೆ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷ ಬಂಗಾರೆಪ್ಪ ಹರಳಿ ಅವರು ಶಾಲೆಯ ಯಾವುದೇ ಕುಂದುಕೊರತೆಗಳನ್ನು ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವದಾಗಿ ಹೇಳಿದರು. ಸಾನಿಧ್ಯ ವಹಿಸಿದ ಮಲ್ಲಯ್ಯಜ್ಜ ಹಿರೇಮಠ ದೈಹಿಕ ಶಿಕ್ಷಣ ಶಿಕ್ಷಕರು ವರ್ಷವಿಡೀ ಆಟದಲ್ಲಿ ಮಕ್ಕಳು ತೊಡಗುವಂತೆ ಪ್ರೇರೇಪಣೆ ನೀಡಬೇಕು. ತನ್ಮೂಲಕ ದೇಹ, ಮನಸು ಸದೃಢವಾಗಬೇಕು ಎಂದು ಅಭಿಪ್ರಾಯ ಪಟ್ಟರು. ಐಎಎಸ್ ಸಮೂಹದ ಪ್ರಕಾಶ ವಾಲಿ ಅವರು ಕ್ರೀಡಾಕೂಟಕ್ಕೆ ಶೀಲ್ಡುಗಳನ್ನು ಕಾಣಿಕೆಯಾಗಿ ನೀಡಿದರು.
ಎಸ್.ಡಿ.ಎಂ.ಸಿ ಸದಸ್ಯರಾದ ಈರಣ್ಣ ಹೊಸಮನಿ, ಉಮೇಶ ಮಾಗುಂಡನವರ, ಮಹಾಂತೇಶ ನೀಲಾಕಾರಿ, ಸದಾಶಿವ ಪಟ್ಟಣಶೆಟ್ಟಿ, ಉಪಪ್ರಾಂಶುಪಾಲ ಎಸ್. ಪಿ. ಸಿಂಗಾರಗೊಪ್ಪ, ಮುಖ್ಯಶಿಕ್ಷಕ ಎಸ್. ಬಿ. ತೊರಗಲ್ಲ, ಸಿ. ಆರ್. ಪಿ ಬಾಳೇಶ ಸಿದ್ದಬಸನ್ನವರ, ಎಸ್. ಪಿ. ಕರಲಿಂಗಪ್ಪನವರ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು ಇದ್ದರು. ಶಿಕ್ಷಕಿ ಎನ್. ಬಿ. ರೇವಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವಿಠ್ಠಲ ದಳವಾಯಿ ವಂದಿಸಿದರು.
Gadi Kannadiga > Local News > ಕೇಂದ್ರ ಮಟ್ಟದ ಕ್ರೀಡಾಕೂಟ ಉದ್ಘಾಟನೆ
ಕೇಂದ್ರ ಮಟ್ಟದ ಕ್ರೀಡಾಕೂಟ ಉದ್ಘಾಟನೆ
Suresh17/08/2023
posted on
