This is the title of the web page
This is the title of the web page

Please assign a menu to the primary menu location under menu

Local News

ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಗಾರ ಉದ್ಘಾಟನೆ


ಮೂಡಲಗಿ: ಭಾರತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವುದು ಒಂದು ಸವಾಲಿನ ಸಾಧನೆಯಾಗಿದೆ, ಆದರೆ ಸರಿಯಾದ ವಿಧಾನದಿಂದ ಸಾಗಿದರೆ ಸಾಧಿಸಬಹುದು. ಇದು ಕೇವಲ ಅತಿ ಹೆಚ್ಚು ಅಂಕ ಪಡೆಯುವ ವಿರ್ದ್ಯಾರ್ಥಿಗಳಿಗೆ ಮಾತ್ರವಲ್ಲದೆ, ದಿರ್ಘವಾದ ಸತತ ಪ್ರಯತ್ನದ ಸಾಮಾನ್ಯ ವಿದ್ಯಾರ್ಥಿಗಳ ಪ್ರಯಾಣವೂ ಆಗಿದೆ. ಶಿಸ್ತು ಮತ್ತು ಕೌಶಲ್ಯಗಳು ಈ ಪ್ರಕ್ರಿಯೆಯಲ್ಲಿ ಜೀವನದ ಪಾತ್ರವು ವಿವಿಧ ಹಂತಗಳಲ್ಲಿ ಯಶಸ್ಸಿಗೆ ನಿಸ್ಸಂದೇಹವಾಗಿ ಕೊಡುಗೆ ನೀಡುತ್ತದೆ ಎಂದು ಅರಭಾಂವಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ|| ಬಿ.ಸಿ.ಪಾಟೀಲ ಹೇಳಿದರು
ಅವರು ತಾಲೂಕಿನ ಅರಭಾವಿ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಎನ್.ಎ.ಎಚ್.ಇ.ಪಿ- ಐಡಿಪಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವ ದೆಹಲಿ ಯೋಜನೆಯ ಅನುದಾನದ ಅಡಿಯಲ್ಲಿ ಎರಡು ದಿನಗಳÀ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಮರ್ಥ್ಯ ಮತ್ತು ದೌರ್ಬಲ್ಯಗಳಿಗೆ ಸರಿಹೊಂದುವಂತೆ ನಿಮ್ಮ ವಿಧಾನವನ್ನು ಹೊಂದಿಸಿ. ಪ್ರಗತಿಯ ನಿಯಮಿತ ಮೌಲ್ಯಮಾಪನ ಮತ್ತು ಅದಕ್ಕೆ ಅನುಗುಣವಾಗಿ ಯೋಜನೆಯನ್ನು ಅಳವಡಿಸಿಕೊಳ್ಳುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದ ಅವರು ಕಠಿಣ ಪರಿಶ್ರಮವು ಅತ್ಯಗತ್ಯವಾದರೂ, ಒಬ್ಬರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ನೋಡಿಕೊಳ್ಳುವುದು ಮುಖ್ಯವಾಗಿದೆ. ವಿಶ್ರಾಂತಿ, ವ್ಯಾಯಾಮ ಜೊತೆ ಗುಣಮಟ್ಟದ ಸಮಯ ಕಳೆಯುವುದರೊಂದಿಗೆ ಅಧ್ಯಯನದ ಸಮಯವನ್ನು ಸಮತೋಲನಗೊಳಿಸಿ ಯಶಸ್ಸು ಸಾಧಿಸಬಹುದು ಎಂದರು.
ಬೆಂಗಳೂರು ಬ್ರೀಟ್ ಸಲ್ಯೋಷನ್ಸ್ದ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಎ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಯಾರಿ ವಿಶಿಷ್ಟವಾಗಿದೆ. ಕೆಲವೊಮ್ಮೆ ಸಾಂಪ್ರದಾಯಿಕ ವಿಧಾನಗಳನ್ನು ಮೀರಿ ಯೋಚಿಸುವುದು ಹೊಸ ದೃಷ್ಟಿಕೋನ ಮತ್ತು ಉತ್ಸಾಹವನ್ನು ನೀಡುತ್ತದೆ. ಅಗತ್ಯವಿದ್ದಾಗ ಮಾತ್ರ ಮಾರ್ಗದರ್ಶನವನ್ನು ಹುಡುಕುವುದು ಬುದ್ಧಿವಂತಿಕೆಯ ಸಂಕೇತವಾಗಿದೆ. ಮಾರ್ಗದರ್ಶಕರು, ಶಿಕ್ಷಕರು ಮತ್ತು ಕೋಚಿಂಗ್ ಸೆಂಟರ್‌ಗಳು ಗಮನಾರ್ಹ ವ್ಯತ್ಯಾಸವನ್ನುಂಟು ಮಾಡುವ ಒಳನೋಟಗಳು ಮತ್ತು ತಂತ್ರಗಳನ್ನು ಒದಗಿಸ ಬಹುದು. ಆದ್ದರಿಂದ, ಕಠಿಣ ಪರಿಶ್ರಮ, ಸಂಕಲ್ಪ ಮತ್ತು ನಿರಂತರ ಕಲಿಕೆಯ ಮಾರ್ಗವನ್ನು ಅಳವಡಿಸಿಕೊಂಡರೆ ಯಶಸ್ಸು ಕಂಡುಬರುತ್ತದೆ ಎಂದರು.
ಕಾರ್ಯಕ್ರಮದ ಸಂಯೋಜಕ ಡಾ. ದೀಲಿಪಕುಮಾರ ಮಸೂತಿ ಅವರು ಕಾರ್ಯಾಗಾರದ ಸಾರಾಂಶವನ್ನು ಮಂಡಿಸಿ ಕಾರ್ಯಕ್ರಮದ ಪ್ರಯೋಜನಾ ವಿದ್ಯಾರ್ಥಿಗಳು ಪಡೆದುಕೊಳ್ಳ ಬೇಕೆಂದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಡಾ. ಪ್ರತಿಕ್ಷಾ ಸ್ವಾಗತಿಸಿದರು. ವಿದ್ಯಾರ್ಥಿ ಮಹಾದೇವ ವಡೆಯರ ನಿರೂಪಿಸಿದರು.


Leave a Reply