ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಸಿಂಧು ಸಾಮಾನ್ಯ ಸೇವಾ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿ ಯೋಜನಾಧಿಕಾರಿಗಳಾದ ನಾಗರಾಜ ಹದ್ಲಿಯವರು ಸರಕಾರದ ಸೌಲಭ್ಯಗಳನ್ನುಜನರಿಗೆ ಸರಳವಾಗಿ ಸರಕಾರ ನಿಗದಿಪಡಿಸಿದ ವೆಚ್ಚದಲ್ಲಿ ಸೀಗಬೇಕು ಎನ್ನುವ ದೃಷ್ಠಿಕೋನದಿಂದ CSC ಕೇಂದ್ರಗಳನ್ನು ಪ್ರಾರಂಭಿಸಿಲಾಗಿದ್ದು ಸೇವಾಕೇಂದ್ರದಿAದ ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಈ-ಶ್ರಮ್ ಕಾರ್ಡಗಳನ್ನುಉಚಿತವಾಗಿ ವಿತರಿಸಲಾಗುತ್ತಿದ್ದುಇದರ ಸದುಪಯೋಗವನ್ನುಅಸಂಘಟಿತ ಕೂಲಿ ಕಾರ್ಮಿಕರು ಪಡೆದಿಕೊಳ್ಳಬೇಕೆಂದು ಕೇಂದ್ರ ಸರಕಾರದಯೋಜನೆ ಬಗ್ಗೆ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿಮಾಜಿಗ್ರಾಂ ಪಂ ಅಧ್ಯಕ್ಷರಾದ ಸಚೀನ ಬೆಳಗಾಂವಕರ ,ಗ್ರೀನ್ ವೇ ಮುಖ್ಯಸ್ಥರಾದ ಜಗದೀಶ, ವಿನಾಯಕ ಮೇಲ್ವಿಚಾರಕರಾದ ಗಂಗಮ್ಮಾ, ಸಿಎಸ್ಸಿ ನೋಡಲ್ ಅಧಿಕಾರಿಯಾದ ಚಂದ್ರುಗೌಡ ಪಾಟೀಲ ಒಕ್ಕೂಟದ ಅಧ್ಯಕ್ಷರಾದ ಶೋಭಾ ಪಾಟೀಲ, ಸ್ವ-ಸಹಾಯ ಸಂಘಗಳ ಸದಸ್ಯರು ಸೇವಾ ಪ್ರತಿನಿಧಿ ಭಾಗವಹಿಸಿದ್ದರು.