This is the title of the web page
This is the title of the web page

Please assign a menu to the primary menu location under menu

Local News

ವಿಶ್ವನಾಥಕತ್ತಿ ದಂತ ಮಹಾವಿದ್ಯಾಲಯದಲ್ಲಿ ದಂತ ಭಾಗ್ಯ ಸಪ್ತಾಹ ಉದ್ಘಾಟನೆ


ಬೆಳಗಾವಿ-ಜು.೧೨:- ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತವಾಗಿ ದಂತ ಪಂಕ್ತಿ ನೀಡುವ ದಂತ ಭಾಗ್ಯ ಸಪ್ತಾಹವನ್ನ ಇಂದು ಕೆ.ಎಲ್.ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದಲ್ಲಿ ಮುಖ್ಯ ಅತಿಥಿಗಳಾದ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಡಾ.ದೀಪಾ ಮಗ್ಧಮ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಹಿರೇಬಾಗೆವಾಡಿಯ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ದಂತ ಆರೋಗ್ಯ ಅಧಿಕಾರಿ ಡಾ.ಚಂದ್ರಾ ನಾಯಕ್ ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಅಲ್ಕಾ ಕಾಳೆ ವಹಿಸಿದ್ದರು ಈ ಸಂದರ್ಭದಲ್ಲಿ ಇವರು ಮಾತನಾಡಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವಿದ್ಯಾಲಯ ಸರ್ಕಾರದ ಜೊತೆಗೊಡಿ ಅನೇಕ ಯೋಜನೆಗಳನ್ನ ಹಮ್ಮಿಕೊಳ್ಳುತ್ತಲಿರುತ್ತದೆ ಸಾರ್ವಜನಿಕರು ಮತ್ತು ಅವಶ್ಯವಿರುವವರು ಇದರ ನೆರವು ಪಡೆದು ಸಹಕರಿಸಬೇಕು, ಕೆ.ಎಲ್.ಇ ಸಂಸ್ಥೆ ಯಾವತ್ತು ಜನಪರ ಆರೋಗ್ಯದ ಕಡೆ ಗಮನಕೊಡುತ್ತಿದೆ ಎಂದರು. ರಾಷ್ಟ್ರೀಯ ಕಾರ್ಯಕ್ರಮದಡಿ ಜುಲೈ ೧೧ ರಿಂದ ೧೬ ರವರೆಗೆ ದಂತ ಭಾಗ್ಯ ಸಪ್ತಾಹ ಆಚರಿಸಲಾಗುತ್ತಿದ್ದು ಬಿಪಿಎಲ್ ಕಾರ್ಡುದಾರರು ಮೂರಕ್ಕಿಂತ ಹೆಚ್ಚು ದಂತಗಳನ್ನ ಕಳೆದುಕೊಂಡಿದ್ದಲ್ಲಿ ಅಂತಹವರು ಉಚಿತವಾಗಿ ದಂತ ಪಂಕ್ತಿಯನ್ನ ಪಡೆಯಲು ಜುಲೈ ೧೧ ರಿಂದ ೧೬ ವರೆಗೆ ತಮ್ಮ ಹೆಸರನ್ನ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದಲ್ಲಿ ನೊಂದಾಯಿಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಡಾ. ಅಂಜನ ಬಾಗೇವಾಡಿ, ಡೀನ್ ಡಾ. ಸೊನಾಲ್ ಜೋಷಿ, ಹಾಗೊ ಕೃತಕ ದಂತ ವಿಭಾಗದ ಮುಖ್ಯಸ್ಥರಾದ ಡಾ.ಆನಂದಕುಮಾರ ಜಿ.ಪಾಟೀಲ್ ಮತ್ತು ಡಾ.ಮಲ್ಲಿಕಾರ್ಜುನ್ ದೊಡ್ಡಮನಿ, ದಂತಭಾಗ್ಯ ಉಸ್ತುವಾರಿ ಹಾಗೊ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಈ ಕಾರ್ಯಕ್ರಮ ನಿರಂತರವಾಗಿದ್ದು ಮಾಹಿತಿಯನ್ನು ಫಲಾನುಭವಿಗಳಿಗೆ ನೀಡಲಾಯಿತು.


Gadi Kannadiga

Leave a Reply