This is the title of the web page
This is the title of the web page

Please assign a menu to the primary menu location under menu

State

ವಿಧಾನ ಪರಿಷತ್ತಿನ ಶಾಸಕರಾದ ಹೇಮಲತಾ ನಾಯಕ ಅವರ ಜಿಲ್ಲಾ ಕಾರ್ಯಾಲಯ ಉದ್ಘಾಟನೆ


ಕೊಪ್ಪಳ ಡಿಸೆಂಬರ್ ೧೨ : ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಹೇಮಲತಾ ನಾಯಕ ಅವರ ಕೊಪ್ಪಳ ಜಿಲ್ಲಾ ಕಾರ್ಯಾಲಯ ಉದ್ಘಾಟನೆಯು ಡಿಸೆಂಬರ್ ೧೨ ರಂದು ನಡೆಯಿತು.
ತಮ್ಮ ಜಿಲ್ಲಾ ಕಾರ್ಯಾಲಯದ ಉದ್ಘಾಟನೆ ಹಿನ್ನೆಲೆಯಲ್ಲಿ ಹೇಮಲತಾ ನಾಯಕ ಅವರು ಬೆಳಗ್ಗೆ ಪೂಜೆಗೆ ಏರ್ಪಾಡು ಮಾಡಿದ್ದರು. ನಿಗದಿತ ಅವಧಿಯಂತೆ ಬೆಳಗಿನ ಅವಧಿಯಲ್ಲಿ ಪೂಜೆ ನೆರವೇರಿಸಲಾಯಿತು.
ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಹೇಮಲತಾ ನಾಯಕ ಅವರ ಕುಟುಂಬದ ಸದಸ್ಯರಾದ ಪರಿಕ್ಷೀತರಾಜ ನಾಯಕ, ಪ್ರೀತೇಶ್ ನಾಯಕ, ಕಚೇರಿಯ ಆಪ್ತ ಸಹಾಯಕರಾದ ಮಹಾಂತೇಶ ಕೋವಿ, ಗಣ್ಯರಾದ ವಾಣಿಶ್ರೀ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪೂಜಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೇಮಲತಾ ನಾಯಕ ಅವರು, ಕೊಪ್ಪಳ ಜಿಲ್ಲೆಯು ಈಗ ದಿನೇ ದಿನೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹತ್ತು ಹಲವಾರು ಯೋಜನೆಗಳು ಜನರ ಮನೆಬಾಗಿಲಿಗೆ ತಲುಪುತ್ತಿವೆ. ಸಚಿವರು, ಸಂಸದರು ಮತ್ತು ಶಾಸಕರು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.
ಜನಪ್ರತಿನಿಧಿಗಳ ಸಹಕಾರದೊಂದಿಗೆ :ಅಭಿವೃದ್ಧಿ ಅನ್ನುವುದು ನಿತ್ಯ ನಿರಂತರ ನಡೆಯುವ ಪ್ರಕ್ರಿಯಾಗಿದೆ. ಜಿಲ್ಲೆಯ ಸಾರ್ವಜನಿಕರ ಯಾವುದೇ ರೀತಿಯ ಅಹವಾಲುಗಳಿಗೆ ತುರ್ತಾಗಿ ಸ್ಪಂದಿಸಲು ಮತ್ತು ಜನಹಿತ ದೃಷ್ಟಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಲಹೆಯನ್ನು ಸಚಿವರು, ಸಂಸದರು ಮತ್ತು ಶಾಸಕರ ಮತ್ತು ಇನ್ನಿತರ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕಾರ್ಯನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾ ಕಾರ್ಯಾಲಯವನ್ನು ಉದ್ಘಾಟಿಸಲಾಗಿದೆ ಎಂದು ತಿಳಿಸಿದರು.
ಜನತೆಗೆ ಮುಕ್ತ ಅವಕಾಶ:
ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಎಡಭಾಗದಲ್ಲಿನ ಕರ್ನಾಟಕ ಒನ್ ಕೇಂದ್ರದ ಹತ್ತಿರದ ಕಾರ್ಮಿಕ ಇಲಾಖೆಯ ಎದುರುಗಡೆಯ ಕೊಠಡಿಯಲ್ಲಿ ತಮ್ಮ ಜಿಲ್ಲಾ ಕಾರ್ಯಾಲಯವನ್ನು ವಿದ್ಯುಕ್ತವಾಗಿ ಆರಂಭಿಸಿದ್ದು, ಜಿಲ್ಲೆಯ ಸಾರ್ವಜನಿಕರು ತಮ್ಮ ಮನವಿ ಅರ್ಜಿಗಳನ್ನು ಈ ಕಾರ್ಯಾಲಯದಲ್ಲಿ ಮುಕ್ತವಾಗಿ ಸಲ್ಲಿಸಬಹುದಾಗಿದೆ ಎಂದು ಶಾಸಕರಾದ ಹೇಮಲತಾ ನಾಯಕ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಮತ್ತು ಹಿತೈಷಿಗಳು ಮತ್ತು ಇನ್ನಿತರರು ಇದ್ದರು.


Gadi Kannadiga

Leave a Reply