This is the title of the web page
This is the title of the web page

Please assign a menu to the primary menu location under menu

Local News

ವಿಕಲಚೇತನರಿರಾಗಿ ಕ್ಯಾರಂ ಪಂದ್ಯಾವಳಿಯ ಉದ್ಘಾಟನೆ


ಬೆಳಗಾವಿ: ವಿಶ್ವಸ ಪೌಂಡೇಷನ್ ಮತ್ತು ಸುರೇಶ ಯಾದವ್ ಪೌoಡೇಷನ್ ಹಾಗೂ ಬೆಳಗಾವಿ ಜಿಲ್ಲಾ ವಿಕಲಚೇತನ ಕ್ರೀಡಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ ದಿನಾಚರಣೆಯ ನಿಮಿತ್ಯವಾಗಿ ವಿಕಲಚೇತನರಿರಾಗಿ ಕ್ಯಾರಂ ಪಂದ್ಯಾವಳಿಯ ಉದ್ಘಾಟನೆ ಸಮಾರಂಭದಲ್ಲಿ ಉದ್ಘಾಟರಾಗಿ ಆಗಮಿಸಿ ದ್ವಿಪ ಪ್ರಜ್ವಲನೇ ಮಾಡಿ ವಿಕಲಚೇತನರ ಕ್ಯಾರಂ ಪಂದ್ಯಾವಳಿಯು ಬೆಳಗಾವಿಯಲ್ಲಿ ಪ್ರಥಮ ವಾಗಿ ಏರ್ಪಡಿಸಿದ್ದು ಬಹಳ ಸಂತೋಷವಾಗಿದೆ. ನಾನು ಬೆಳಗಾವಿಯ ವಿಕಲಚೇತರ ಗಾಗಿ ನನ್ನ ವ್ಯಯಕ್ತಿಕವಾಗಿ ಮತ್ತು ಸರಕಾರದಿಂದ ಸಹಾಯಮಾಡಲು ಪ್ರಯತ್ನಿಸುತ್ತೇನೆ ಎಂದು ವಿಶ್ರಾಂತ ಖಅ ಮಹಾಂತೇಶ್ ಹಿರೇಮಠ ಹೇಳಿದರು. ನಗರಸೇವಕರಾದ ರಾಜಶೇಖರ್ ದೋಣಿ ಅವರು ಮಾತನ್ನಾಡಿ ಬೆಳಗಾವಿಯ ಜಿಲ್ಲಾ ವಿಕಲ ಚೇತನ ಕ್ರೀಡಾ ಸಂಘಕ್ಕೆ ನಗರಪಾಲಿಕೆಯ ಆಯುಕ್ತರ ಜೊತೆ ಚರ್ಚಿಸಿ ಜಾಗ (ಸ್ಥಳ ) ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನ್ನಾಡಿದ ಸುರೇಶ ಯಾದವ ಅವರು ಕ್ರೀಡೆಯು ಪ್ರತಿಯೊಬ್ಬರ ಜೀವನದಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಕ್ರೀಡೆಗಳು ಯಾವಾಗಲು ಒಬ್ಬ ವ್ಯಕ್ತಿಯನ್ನು ಅರೋಗ್ಯಕರವಾಗಿ ಸಮೃದ್ಧಿಯಾಗಿ ಮತ್ತು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ.ಅರೋಗ್ಯವಂತ ದೇಹದಿಂದ ಮಾತ್ರ ಮನುಸ್ಸು ಅರೋಗ್ಯವಾಗಿರಲು ಸಾಧ್ಯ. ನಾವೂ ಎಲ್ಲಾ ಸಮಯದಲ್ಲೂ ನಮ್ಮ ದೈಹಿಕ ಮತ್ತು ಮಾನಸಿಕ ಅರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ನಾವು ಜೀವನದಲ್ಲಿ ಉತ್ತಮ ಸಾಧನೆಗಳನ್ನು ಸಾಧಿಸಬಹುದು. ಆದ್ದರಿಂದ ಜೀವನದಲ್ಲಿ ಕ್ರೀಡೆಗಳು ಅವಶ್ಯಕ.
ಕೆಲವರು ತಮ್ಮ ದೇಹ ಮನಸ್ಸಿನ ಪೀಟನೆಸ್, ಆನಂದಕ್ಕಾಗಿ ನಿಯಮಿತವಾಗಿ ಆಡುತ್ತಾರೆ. ಆದರೆ ಕೆಲವರು ತಮ್ಮ ಜೀವನದಲ್ಲಿ ಅಮೂಲ್ಯವಾದ ಸ್ಥಾನಮಾನವನ್ನು ಪಡೆಯಲು ಆಡುತ್ತಾರೆ. ಒಳಂಗಾಣ ಅಟಗಳೆಂದರೆ ಕೇರಂ, ಚೆಸ್, ಟೇಬಲ್ ಟೆನಿಸ್ ಇತ್ಯಾದಿಗಳನ್ನು ಯಾವುದೇ ಮೈದಾನವಿಲ್ಲದೆ ಮನೆಯಲ್ಲಿ ಆಡಬಹುದು.
ದೈಹಿಕ ಚಟುವಟಿಕೆಯ ಅಗತ್ಯವಿಲ್ಲದ ಕೆಲವು ಆಟಗಳಿವೆ. ಬದಲಿಗೆ ಅವುಗಳನ್ನು ತಮ್ಮ ಬುದ್ದಿವಂತಿಕೆಯನ್ನು ಬಳಸಿಕೊಂಡು ಆಡಲಾಗುತ್ತದೆ. ಈ ಆಟಗಳು ಕೇರಂಬೋರ್ಡ್, ಚೆಸ್.
ವಿಕಲಚೇತನರು ಆಟದಲ್ಲಿ ತೋರುತ್ತಿರುವ ಆಸಕ್ತಿಯನ್ನು ಸ್ಲಾಗಿಸಿದರು. ಇದೆ ಸಂಧರ್ಭದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕುಟಾದಲ್ಲಿ ದೇಶಕ್ಕೆ ಮೂರು ಪದಕ ತಂದ ಬೆಳಗಾವಿಯ ಕುವರಿ ಮಂಜುಳಾ ಗೊರಗುದ್ದಿ ಅವರನ್ನು ಸತ್ಕಾರಿಸಲಾಯಿತು.ಸುಮಾರು ೬೦ ಕ್ರೀಡಾಪಟುಗಳು ಭಾಗವಹಿಸಿದ್ದರು. ಅವರಲ್ಲಿ ಪ್ರಥಮ ಸ್ಥಾನವನ್ನು ದಿನೇಶ ಸಿದ್ರಾಗವಳಿ ದ್ವಿತೀಯ ಸ್ಥಾನವನ್ನು ಸೋಫನಾಥ್ ಜನಕೆರಿ ಮತ್ತು ತೃತೀಯ ಸ್ಥಾನವನ್ನು ಮಂಜುನಾಥ ವಂಟಮುರಿ ಪಡೆದರು.ಈ ಸಮಾರಂಭದಲ್ಲಿ ಜಗದೀಶ ಬಡಿಗೇರ, ಸಂತೋಷ ಜೋಶಿ, ಆಕಾಶ ಬೇವಿನಕಟ್ಟಿ, ಸುರಜ ಧಾಮ್ನೆಕರ್, ಆರತಿ ಪವಾರ ರೀಜವಾನ ಜಮಾದಾರ ಮಹಾಂತೇಶ್ ಹೊಂಗಲ ಮುಂತಾದವರು ಭಾಗವಹಿಸಿದ್ದರು.


Leave a Reply