ಯರಗಟ್ಟಿ: ಯರಗಟ್ಟಿ ತಾಲ್ಲೂಕಿನ ಹಾಗೂ ಈ ಭಾಗದ ನ್ಯಾಯವಾದಿಗಳ ಮತ್ತು ಕಕ್ಷಿದಾರರ ಹೋರಾಟದ ಫಲವಾಗಿ ಬಹುದಿನಗಳ ಬೇಡಿಕೆಯಾಗಿರುವ ಕಿರಿಯ ಶ್ರೇಣಿ ದಿವಾಣಿ ಮತ್ತು ಜೆ ಎಂ ಎಪ್ ಸಿ ನ್ಯಾಯಾಲಯ ಇದೆ ಅಗಸ್ಟ್ ೨೬ ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ನ್ಯಾಯಾಲಯ ಪ್ರಾರಂಭ ಮಾಡಲಾಗುವು ಎಂದು ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್. ಆರ್. ರೆಬ್ಬಣ್ಣವರ ತಿಳಿಸಿದರು.
ಈ ಭಾಗದ ಕಕ್ಷಿದಾರರ ಹಿತದೃಷ್ಟಿಯಿಂದ ಸಿವಿಲ್ ಕಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪನೆಗಾಗಿ ವಕೀಲರು ಮತ್ತು ಕಕ್ಷಿದಾರರು ಬೇಡಿಕೆ ಸಲ್ಲಿಸಿರುವುದು ಸಮಂಜಸವಾಗಿದೆ.
ಕಿರಿಯ ಶ್ರೇಣಿ ನ್ಯಾಯಾಲಯಕ್ಕೆ ಸುಸಜ್ಜಿತ ಕಟ್ಟಡ ಇದ್ದ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಲಯ ಸ್ಥಾಪನೆಗೆ ವಿಳಂಬ ಮಾಡುವ ಅಗತ್ಯವಿಲ್ಲ. ನ್ಯಾಯಾಲಯಕ್ಕೆ ತ್ವರಿತವಾಗಿ ಚಾಲನೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಉದ್ಘಾಟಕರಾ ಗೌರವಾನ್ವಿತ ಜಿಲ್ಲಾ ಪ್ರಧಾನ ನ್ಯಾಯಮೂರ್ತಿಗಳಾದ ಶ್ರೀಮತಿ ವಿಜಯಾ ಲಕ್ಷ್ಮೀದೇವಿ, ಹಾಗೂ ತಾಲೂಕಿನ ಗಣ್ಯಮಾನ್ಯರು, ರಾಜಕೀಯ ಮುಖಂಡರು, ಕಾರ್ಯದರ್ಶಿಯಾದ ಎಸ್. ಎಸ್. ಯಕ್ಕೆರಿಮಠ, ಖಜಾಂಚಿ ಆರ್. ಎಸ್. ಆಲದಕಟ್ಟಿ, ವಿ. ಬಿ. ಹೊಸಮನಿ, ಎನ್. ಅಯ್. ನೇಗಿನಾಳ, ವಿ. ಜಿ. ಬಿರಾದಾರಗೌಡರ, ಆಯ್. ಬಿ. ಗೌಡರ, ದಿಲೀಪ್ ಜಮಾದಾರ ಸೇರಿದಂತೆ ಯರಗಟ್ಟಿ ತಾಲೂಕಿನ ಗಣ್ಯರು ಆಗಮಿಸಲಿದ್ದಾರೆ.
Gadi Kannadiga > State > ಅ. ೨೬ ರಂದು ಕಿರಿಯ ಶ್ರೇಣಿ ದಿವಾಣಿ ಮತ್ತು ಜೆ ಎಂ ಎಪ್ ಸಿ ನ್ಯಾಯಾಲಯ ಉದ್ಘಾಟನೆ
ಅ. ೨೬ ರಂದು ಕಿರಿಯ ಶ್ರೇಣಿ ದಿವಾಣಿ ಮತ್ತು ಜೆ ಎಂ ಎಪ್ ಸಿ ನ್ಯಾಯಾಲಯ ಉದ್ಘಾಟನೆ
Suresh24/08/2023
posted on
