ಯಮಕನಮರಡಿ:- ಶಿಕ್ಷಕರ ಮತ್ತು ಮಕ್ಕಳ ಕ್ಷೇಮಾಭಿವೃಧ್ದಿಯನ್ನು ಗಮನದಲ್ಲಿಟ್ಟುಕೊಂಡು ಕನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತರ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಹುಕ್ಕೇರಿ ತಾಲೂಕಾ ಘಟಕದ ಉದ್ಘಾಟನೆಯನ್ನು ನೆರವೇರಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎನ್,ಎನ್, ವಾಚಮೇಕರ, ಹೇಳಿದರು, ಅವರು ಗುರುವಾರ ದಿ,೩ ರಂದು ಸ್ಥಳಿಯ ಸಮೀಪದ ಉಳ್ಳಾಗಡ್ಡಿ-ಖಾನಾಪೂರದ ಪ್ರಾಥಮಿಕ ಶಾಲೆಯಲ್ಲಿ ಕನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತರ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಹುಕ್ಕೇರಿ ತಾಲೂಕಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಕಾರ್ಯದರ್ಶಿ ಯು.ಟಿ.ಕಾಂಬಳೆ. ಉಪಾಧ್ಯಕ್ಷರಾದ ಎಮ್.ಎ.ಬಡೇಭಾಯಿ. ಶ್ರೀಮತಿ ಎಮ್,ಎಸ್,ಶಿವಾಳೆ, ಖಜಾಂಚಿ ಎ.ಆಯ್.ಮಕಾಂದಾರ, ಈ ಸಂಘದಲ್ಲಿ ಶಿಕ್ಷಕರ ಪ್ರತಿ£ಧಿಗಳಾಗಿ ೨೧ ಜನರನ್ನು ಆಯ್ಕೆ ಮಾಡಲಾಗಿದೆ, ಈ ಸಂದರ್ಭದಲ್ಲಿ ರಾಜ್ಯ ಜಿಲ್ಲಾ ಪದಾಧೀಕಾರಿಗಳಾದ ಶ್ರೀಮತಿ ಜಾಧವ, ಶ್ರೀಮತಿ ಮೋಹಿತೆ, ಎಸ್.ಎಮ್.ಕಮತೆ, ಪ್ರವೀಣ ಕಾಂಬಳೆ, ಎಮ್,ಎ,ಮುಜಾವರ, ಎ.ಆಯ್.ಮಕಾಂದಾರ, ಎಸ್.ಎನ್,ಮೋಮೀನ, ಇವರ ನೇತೃತ್ವದಲ್ಲಿ ಸಂಘ ಉದ್ಘಾಟನೆಗೊಂಡಿತು,
Gadi Kannadiga > Local News > ಕನಾಟಕ ರಾಜ್ಯ ಭಾ.ಅ. ಶಿಕ್ಷಕರ ಕ್ಷೇಮಾಭಿವೃಧ್ದಿ ಸಂಘದ ಉದ್ಘಾಟನೆ